
ತೆಲುಗಿನ ಸ್ಪೋರ್ಟ್ಸ್ ಡ್ರಾಮಾ ‘ಪೆದ್ದಿ’ ಸಿನಿಮಾದ ಶೂಟ್ ಭರದಿಂದ ಸಾಗುತ್ತಿದೆ. ಈ ಚಿತ್ರದಲ್ಲಿ ರಾಮ್ ಚರಣ್ ಹೀರೋ ಆದರೆ, ಕನ್ನಡದ ಶಿವರಾಜ್‌ಕುಮಾರ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಈಗ ಕನ್ನಡದಲ್ಲಿ ಮಿಂಚಿದ ಹೀರೋ ಒಬ್ಬರ ಎಂಟ್ರಿ ಆಗಿದೆ. ಅವರು ಬೇರೆ ಯಾರೂ ಅಲ್ಲ, ಸಾಯಿ ಕುಮಾರ್. ತಮ್ಮ ಕಂಚಿನ ಕಂಠದ ಮೂಲಕ ಗಮಮ ಸೆಳೆದ ಅವರು, ಈಗ ‘ಪೆದ್ದಿ’ ಸಿನಿಮಾದ ಭಾಗ ಆಗಿದ್ದಾರೆ.
ಸಾಯಿ ಕುಮಾರ್ ಅವರು ತೆಲುಗು ಮಾತ್ರವಲ್ಲದೆ, ಕನ್ನಡದಲ್ಲೂ ನಟಿಸಿದ್ದಾರೆ. ಅವರು ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಅದರಲ್ಲೂ ತಮ್ಮ ಕಂಠದ ಮೂಲಕ ಅವರು ಹೆಚ್ಚು ಚಿರಪರಿಚಿತರು. ಈಗ ಅವರು ‘ಪೆದ್ದಿ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ರಾಮ್ ಚರಣ್ ಅವರು ‘ಯೆವಡು’ ಸಿನಿಮಾದಲ್ಲಿ ಸಾಯಿ ಕುಮಾರ್ ನಟಿಸಿದ್ದರು. ಈಗ ದಶಕಗಳ ಬಳಿಕ ಈ ಕಲಾವಿದರು ಒಂದಾಗುತ್ತಿದ್ದಾರೆ.
‘ಪೆದ್ದಿ’ ಸಿನಿಮಾ ಹಳ್ಳಿ ಹಿನ್ನೆಲೆಯಲ್ಲಿ ಸಾಗುತ್ತದೆ. ಇದರಲ್ಲಿ ಕ್ರೀಡೆ ಕೂಡ ಹೈಲೈಟ್ ಆಗುವ ಸಾಧ್ಯತೆ ಇದೆ. ಸದ್ಯ ಸಿನಿಮಾ ಕೊನೆಯ ಹಂತದಲ್ಲಿ ಇದೆ. ಸಾಯಿ ಕುಮಾರ್ ಅವರು ಈಗಾಗಲೇ ಶೂಟ್ನಲ್ಲಿ ಭಾಗಿ ಆಗಿದ್ದಾರೋ ಅಥವಾ ಶೂಟ್ ಪೂರ್ಣಗೊಂಡಿದೆಯೋ ಎನ್ನುವ ವಿಷಯ ರಿವೀಲ್ ಆಗಿಲ್ಲ.
ಇದನ್ನೂ ಓದಿ: ‘ಪೆದ್ದಿ’ ಸಿನಿಮಾ ಶೂಟಿಂಗ್ ಮುಗಿಯಿತೇ? ರಾಮ್ ಚರಣ್ ಕೊಟ್ಟರು ಉತ್ತರ
ಈ ಮೊದಲು ‘ಪೆದ್ದಿ’ ಸಿನಿಮಾ ಏಪ್ರಿಲ್ 30ರಂದು ರಿಲೀಸ್ ಆಗಲಿದೆ ಎಂದು ಹೇಳಲಾಗಿತ್ತು. ಆದರೆ, ಸಿನಿಮಾ ಕೆಲಸಗಳು ಪೂರ್ಣಗೊಂಡಿಲ್ಲ. ಹೀಗಾಗಿ, ಚಿತ್ರದ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಈ ಚಿತ್ರದಲ್ಲಿ ರಾಮ್ ಚರಣ್, ಶಿವರಾಜ್‌ಕುಮಾರ್ ಜೊತೆ ದಿವ್ಯೇಂದು ಶರ್ಮ, ಜಗಪತಿ ಬಾಬು ಮೊದಲಾದವರು ನಟಿಸಿದ್ದಾರೆ. ವೃದ್ಧಿ ಸಿನಿಮಾ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರ ತೆಲುಗು ಜೊತೆಗೆ ಕನ್ನಡದಲ್ಲೂ ರಿಲೀಸ್ ಆಗುತ್ತಿದೆ.
ಈ ಸಿನಿಮಾಗೆ ಆಸ್ಕರ್ ವಿಜೇತ ಎಆರ್ ರೆಹಮಾನ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಚಿತ್ರದ ಟೀಸರ್ ಮ್ಯೂಸಿಕ್ ಗಮನ ಸೆಳೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:04 pm, Mon, 13 April 26