ಅಪ್ಪುಗೆ ಶ್ರದ್ಧಾಂಜಲಿ: 11ನೇ ದಿನದ ಪುನೀತ್ ಪುಣ್ಯ ಸ್ಮರಣೆಗೆ ಜಿಲ್ಲೆಗಳಲ್ಲಿ ಬೆಳಗುತಿದೆ ನಂದಾ ದೀಪ

ಜಾತ್ರೆಗಳ ಸಮಯದಲ್ಲಿ ದೇವರನ್ನ ಗ್ರಾಮದಲ್ಲಿ ಮೆರವಣಿಗೆ ಮಾಡೋದು ನೋಡಿದ್ದೀವಿ, ಅದರಂತೆ ಇಲ್ಲಿಯೂ ಅಭಿಮಾನಿಗಳು ಅಪ್ಪುನ ಭಾವಚಿತ್ರವನ್ನು ಇಟ್ಟು ಟ್ರಾಕ್ಟರ್ನಲ್ಲಿ ಮೆರವಣಿಗೆ ಮಾಡಿದ್ದಾರೆ.

ಅಪ್ಪುಗೆ ಶ್ರದ್ಧಾಂಜಲಿ: 11ನೇ ದಿನದ ಪುನೀತ್ ಪುಣ್ಯ ಸ್ಮರಣೆಗೆ ಜಿಲ್ಲೆಗಳಲ್ಲಿ ಬೆಳಗುತಿದೆ ನಂದಾ ದೀಪ
ಪುನೀತ್ ಪುಣ್ಯ ಸ್ಮರಣೆ
Updated By: ಆಯೇಷಾ ಬಾನು

Updated on: Nov 08, 2021 | 11:33 AM

ತುಮಕೂರು: ನಟ ಪುನೀತ್ ರಾಜ್‍ಕುಮಾರ್ ಕೋಟ್ಯಾಂತರ ಅಭಿಮಾನಿಗಳನ್ನ ಅಗಲಿ ಇಂದಿಗೆ 11 ದಿನಗಳು ಕಳೆದಿವೆ. ಅವರು ಇಲ್ಲ ಅನ್ನೋದೆ ಇಂದಿಗೂ ಜನರಿಗೆ ನಂಬಲಿಕೆ ಆಗ್ತಿಲ್ಲ. ಪ್ರತಿದಿನ ಪ್ರತಿ ಸಮಯದಲ್ಲಿ ಒಂದಲ್ಲಾ ಒಂದು ಸನ್ನಿವೇಶದಲ್ಲಿ ಅಪ್ಪು ನೆನಪು ಕಾಡುತ್ತಲೇ ಇದೆ. ಸದ್ಯ ರಾಜ್ಯಾದ್ಯಂತ ಹಳ್ಳಿ ಹಳ್ಳಿಗಳಲ್ಲಿ ಅಪ್ಪು ಅಭಿಮಾನಿಗಳು ಇನ್ನೂ ಯುವರಾಜನನ್ನ ನೆನೆಯುತ್ತಲೇ ಇದಾರೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಭೂವನಹಳ್ಳಿ ಗ್ರಾಮದ ಅಭಿಮಾನಿಗಳು ಹಾಗೂ ಶ್ರೀ ಕನ್ನಡ ಜ್ಯೋತಿ ಯುವ ಗೆಳೆಯರ ಬಳಗ, ಗ್ರಾಮಸ್ಥರಿಂದ ಅಪ್ಪುಗೆ ವಿಶೇಷವಾಗಿ ಶ್ರದ್ಧಾಂಜಲಿ ಅರ್ಪಣೆ ಮಾಡಿದ್ದಾರೆ.

ಜಾತ್ರೆಗಳ ಸಮಯದಲ್ಲಿ ದೇವರನ್ನ ಗ್ರಾಮದಲ್ಲಿ ಮೆರವಣಿಗೆ ಮಾಡೋದು ನೋಡಿದ್ದೀವಿ, ಅದರಂತೆ ಇಲ್ಲಿಯೂ ಅಭಿಮಾನಿಗಳು ಅಪ್ಪುನ ಭಾವಚಿತ್ರವನ್ನು ಇಟ್ಟು ಟ್ರಾಕ್ಟರ್ನಲ್ಲಿ ಮೆರವಣಿಗೆ ಮಾಡಿದ್ದಾರೆ. ದೇವರಿಗೆ ಅಲಂಕಾರ ಮಾಡುವ ರೀತಿಯಲ್ಲಿ ಟ್ರಾಕ್ಟರ್ ಹಾಗೂ ಭಾವಚಿತ್ರಕ್ಕೆ ಶೃಂಗಾರ ಮಾಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾರೆ. ಜೊತೆಗೆ ಮೆರವಣಿಗೆ ಮುಂದೆ ನೂರಾರು ಮಂದಿ ಮೇಣದ ಬತ್ತಿ ಹಚ್ಚಿ ಸಾಗಿದ್ದಾರೆ. ಗ್ರಾಮದಲ್ಲಿ ವಿಶೇಷವಾಗಿ ಅಪ್ಪುಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಗ್ರಾಮದ ಪುಟಾಣಿಗಳು, ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲರೂ ಭಾಗವಹಿಸಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಅಪ್ಪುಗೆ ಶ್ರದ್ಧಾಂಜಲಿ: 11ನೇ ದಿನದ ಪುನೀತ್ ಪುಣ್ಯ ಸ್ಮರಣೆಗೆ ಜಿಲ್ಲೆಗಳಲ್ಲಿ ಬೆಳಗುತಿದೆ ನಂದಾ ದೀಪ

ಸಿರಿ ಡ್ಯಾನ್ಸ್ ಅಕಾಡೆಮಿ‌ವತಿಯಿಂದ ಶ್ರದ್ಧಾಂಜಲಿ
ಇನ್ನು ಮತ್ತೊಂದು ಕಡೆ ಹಾಸನದಲ್ಲಿ ಸಿರಿ ಡ್ಯಾನ್ಸ್ ಅಕಾಡೆಮಿ‌ವತಿಯಿಂದ ದೀಪ ಬೆಳಗಿ ಅಪ್ಪುಗೆ ಭಾವಪೂರ್ಣ ನಮನ ಸಲ್ಲಿಸಲಾಗಿದೆ. ಅಪ್ಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕ್ಯಾಂಡಲ್ ಬೆಳಗಿ‌ ಮಕ್ಕಳು ನಮ‌ನ ಸಲ್ಲಿಸಿದ್ದಾರೆ. ಪುಟ್ಟ ಪುಟ್ಟ ಮಕ್ಕಳು ಕನ್ನಡಿಗರ ಹೃದಯ ಸಾಮ್ರಾಜ್ಯದ ರಾಜಕುಮಾರ ಪುನೀತ್ರಿಗೆ ಪುಷ್ಪಾಂಜಲಿ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ನಟ ಪುನೀತ್ ರಾಜ್​ಕುಮಾರ್​ರ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ಅಜ್ಜವಾರ ಗ್ರಾಮದಲ್ಲಿ ಪುನೀತ್ ಅಭಿಮಾನಿಗಳಿಂದ ವೈಕುಂಠ ಸಮಾರಾಧನೆ ನಡೆಯುತ್ತಿದೆ. ಅಜ್ಜವಾರ ಗ್ರಾಮಸ್ಥರು, ಸ್ಥಳೀಯರು, ಶಾಲಾ ವಿದ್ಯಾರ್ಥಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಅಪ್ಪು ಭಾವಚಿತ್ರಕ್ಕೆ ಪುಷ್ಪ ನಮನ, ಮೌನಾಚರಣೆ ಮೂಲಕ ಪುಣ್ಯಸ್ಮರಣೆ ಆಚರಿಸಲಾಗುತ್ತಿದೆ. ಪುಣ್ಯಸ್ಮರಣೆ ಪ್ರಯುಕ್ತ ಗ್ರಾಮದಲ್ಲಿ ಅನ್ನದಾನ ಕೂಡ ಮಾಡಲಾಗುತ್ತಿದೆ.

ಇದನ್ನೂ ಓದಿ: ಕನ್ನಡಿಗರ ಪ್ರೀತಿಯ ನಟ ಪುನೀತ್ ರಾಜಕುಮಾರ್​ಗೆ ಇಂದು ಹೊನ್ನಾಳಿಯಲ್ಲಿ ಸಂಗೀತ ನಮನ, ನೇತ್ರದಾನ ವಾಗ್ದಾನ

Published On - 10:45 am, Mon, 8 November 21