Anasuya Bharadwaj: ‘ನನಗೂ ಕುಟುಂಬವಿದೆ, ದಯವಿಟ್ಟು ನನ್ನನ್ನು ಬಿಟ್ಟುಬಿಡಿ’; ಗೋಗರೆದ ಆ್ಯಂಕರ್ ಅನಸೂಯಾ ಭಾರದ್ವಾಜ್

|

Updated on: Jun 20, 2023 | 8:22 AM

ಅನಸೂಯಾ ಅನಗತ್ಯವಾಗಿ ಅವರ ಹೆಸರನ್ನು ಬೇರೆಬೇರೆ ಕಡೆಗಳಲ್ಲಿ ಎಳೆದು ತರಲಾಗುತ್ತಿದೆ. ‘ನನಗೂ ಕುಟುಂಬ ಇದೆ. ನನ್ನ ಪಾಡಿಗೆ ನನ್ನ ಬಿಟ್ಟುಬಿಡಿ’ ಎಂದು ಅವರು ಕೋರಿದ್ದಾರೆ.

Anasuya Bharadwaj: ‘ನನಗೂ ಕುಟುಂಬವಿದೆ, ದಯವಿಟ್ಟು ನನ್ನನ್ನು ಬಿಟ್ಟುಬಿಡಿ’; ಗೋಗರೆದ ಆ್ಯಂಕರ್ ಅನಸೂಯಾ ಭಾರದ್ವಾಜ್
Follow us on

ವಿಜಯ್ ದೇವರಕೊಂಡ (Vijay Devarakonda) ಅವರ ಬಗ್ಗೆ ಆಡಿದ ಮಾತುಗಳು ತೆಲುಗು ನಟಿ, ಆ್ಯಂಕರ್ ಅನಸೂಯಾ ಭಾರದ್ವಾಜ್​ಗೆ (Anasuya Bharadwaj) ಸಂಕಷ್ಟ ತಂದಿದೆ. ‘ಅರ್ಜುನ್ ರೆಡ್ಡಿ’ ಚಿತ್ರದಲ್ಲಿ ತಾಯಿ ಬಗ್ಗೆ ಬೈಗುಳ ಇದೆ. ಇದರ ವಿರುದ್ಧ ಅನಸೂಯಾ ಧ್ವನಿ ಎತ್ತಿದ್ದರು. ವಿಜಯ್ ದೇವರಕೊಂಡ ವಿರುದ್ಧ ಅವರು ಕಿಡಿಕಾರಿದ್ದರು. ಇದನ್ನು ವಿಜಯ್ ಫ್ಯಾನ್ಸ್ ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ. ಅವರು ನಟಿಯ ವಿರುದ್ಧ ಟೀಕೆ ಮಾಡುತ್ತಲೇ ಇರುತ್ತಾರೆ. ಅವರನ್ನು ಬೇಕಾಬಿಟ್ಟಿ ಟ್ರೋಲ್ ಮಾಡುತ್ತಾರೆ. ಅನಗತ್ಯವಾಗಿ ಅವರ ಹೆಸರನ್ನು ಬೇರೆಬೇರೆ ಕಡೆಗಳಲ್ಲಿ ಎಳೆದು ತರಲಾಗುತ್ತಿದೆ. ಈ ಬಗ್ಗೆ ಅನಸೂಯಾ ಸರಣಿ ಟ್ವೀಟ್ ಮಾಡಿದ್ದಾರೆ. ‘ನನಗೂ ಕುಟುಂಬ ಇದೆ. ನನ್ನ ಪಾಡಿಗೆ ನನ್ನ ಬಿಟ್ಟುಬಿಡಿ’ ಎಂದು ಅವರು ಕೋರಿದ್ದಾರೆ.

‘ಎಲ್ಲರಿಗೂ ನಮಸ್ಕಾರ. ಕಳೆದ ಕೆಲವು ದಿನಗಳಿಂದ ನನ್ನ ಬಗ್ಗೆ ಸಾಕಷ್ಟು ಟ್ವೀಟ್‌ಗಳನ್ನು ನೋಡುತ್ತಿದ್ದೇನೆ. ಸಿನಿಮಾ ಮತ್ತು ರಾಜಕೀಯ ಕ್ಷೇತ್ರದ ಪ್ರಮುಖರಿಗೆ ಅಗೌರವ ತೋರಲು ನನ್ನ ಹೆಸರನ್ನು ಬಳಸಲಾಗುತ್ತಿದೆ. ಇದನ್ನು ಮಾಡುತ್ತಿರುವುದರಿಂದ ನನ್ನ ಗೌರವಕ್ಕೆ ಧಕ್ಕೆ ಬರುತ್ತಿದೆ’ ಎಂದು ಮೊದಲ ಟ್ವೀಟ್​ನಲ್ಲಿ ಅನಸೂಯಾ ಹೇಳಿದ್ದಾರೆ.

‘ಇದು ನನ್ನ ಹೆಸರಿಗೆ ಮಾನಹಾನಿ ಮಾಡುತ್ತಿದೆ. ಅವರಿಗೂ ನನಗೂ ಯಾವುದೇ ಸಂಬಂಧವಿಲ್ಲ. ಇದರಿಂದ ಅನಗತ್ಯ ನೋವು ಉಂಟಾಗುತ್ತಿದೆ. ಇದು ನನ್ನ ಜೀವನ. ನನ್ನ ಇಷ್ಟದಂತೆ ಮುನ್ನಡೆಸುತ್ತಿದ್ದೇನೆ. ಅಲ್ಲದೆ ನಾನು ಯಾರ ಬಳಿಗೂ ಹೋಗಲು ಬಯಸುವುದಿಲ್ಲ. ನನ್ನ ಬಲದಿಂದ ನಾನು ಬೆಳೆದಿದ್ದೇನೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಬೋಲ್ಡ್ ಆಗಿ ಕಾಣಿಸಿಕೊಂಡ ಆ್ಯಂಕರ್; ಬಟ್ಟೆಯ ಮೇಲೆ ಕಣ್ಣಿಟ್ಟ ಫ್ಯಾನ್ಸ್

‘ಬಡಾಯಿ ಕೊಚ್ಚಿಕೊಳ್ಳಲು ನನ್ನ ಬಳಿ ಯಾವುದೇ ವಿಶೇಷ PR ತಂಡಗಳಿಲ್ಲ. ನನ್ನ ಬಗ್ಗೆ ನೀವು ಮೆಚ್ಚುಗೆ ಸೂಚಿಸಲು ಸಾಧ್ಯವಾಗದೇ ಇದ್ದರೆ ಕನಿಷ್ಠ ನನ್ನಿಂದ ದೂರವಿರಿ. ಸಂಬಂಧವಿಲ್ಲದ ವಿಷಯಗಳಲ್ಲಿ ನನ್ನ ಹೆಸರನ್ನು ಎಳೆದು ತರಬೇಡಿ. ದಯವಿಟ್ಟು ಮನುಷ್ಯರಂತೆ ವರ್ತಿಸಿ. ನನಗೊಂದು ಕುಟುಂಬವಿದೆ. ದಯವಿಟ್ಟು ಇದನ್ನು ಇಲ್ಲಿಗೆ ನಿಲ್ಲಿಸಿ, ನನ್ನ ಪಾಡಿಗೆ ನನ್ನ ಬಿಟ್ಟುಬಿಡಿ’ ಎಂದು ಅನಸೂಯಾ ಮನವಿ ಮಾಡಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ