ಹಿರಿಯ ನಟಿ ವೈಜಯಂತಿಮಾಲಾ ಭೇಟಿ ಮಾಡಿ ಮೆಚ್ಚುಗೆಯ ಮಾತನಾಡಿದ ಪಿಎಂ ನರೇಂದ್ರ ಮೋದಿ

|

Updated on: Mar 05, 2024 | 11:07 AM

ಜನವರಿ ತಿಂಗಳಲ್ಲಿ ಪದ್ಮ ಪ್ರಶಸ್ತಿ ಪಡೆದವರ ಹೆಸರನ್ನು ಘೋಷಣೆ ಮಾಡಲಾಯಿತು. ಇದರಲ್ಲಿ ವೈಜಯಂತಿಮಾಲಾ ಹೆಸರು ಕೂಡ ಇತ್ತು. ಇವರಲ್ಲದೆ ಚಿರಂಜೀವಿ ಹಾಗೂ ಇನ್ನೂ 132 ಜನರಿಗೆ ಪದ್ಮ ಪ್ರಶಸ್ತಿ ಸಿಕ್ಕಿದೆ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಈಗ ಪ್ರಧಾನಿ ಮೋದಿ ಕೂಡ ವೈಜಯಂತಿಯನ್ನು ಭೇಟಿ ಮಾಡಿದ್ದಾರೆ.

ಹಿರಿಯ ನಟಿ ವೈಜಯಂತಿಮಾಲಾ ಭೇಟಿ ಮಾಡಿ ಮೆಚ್ಚುಗೆಯ ಮಾತನಾಡಿದ ಪಿಎಂ ನರೇಂದ್ರ ಮೋದಿ
ಮೋದಿ-ವೈಜಯಂತಿಮಾಲಾ
Follow us on

ಪದ್ಮ ವಿಭೂಷಣ ಪ್ರಶಸ್ತಿ ಪಡೆದ ಹಿರಿಯ ನಟಿ ವೈಜಯಂತಿ ಮಾಲಾ ಅವರನ್ನು ಪ್ರಧಾನಿ ನರೇಂದ್ರ ಮೋದಿ  (Narendra Modi) ಅವರು ಇತ್ತೀಚೆಗೆ ಭೇಟಿ ಮಾಡಿದ್ದಾರೆ. ತಮಿಳುನಾಡಿನ ಚೆನ್ನೈನಲ್ಲಿ ಈ ಭೇಟಿ ನಡೆದಿದೆ. ಈ ವಿಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ವೈಜಯಂತಿಮಾಲಾ ಅವರು ನೀಡಿದ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ಮರಿಸಿದ್ದಾರೆ.

ನರೇಂದ್ರ ಮೋದಿ ಹಂಚಿಕೊಂಡ ಮೊದಲ ಫೋಟೋದಲ್ಲಿ ಅವರು ವೈಜಯಂತಿ ಅವರಿಗೆ ಕೈಮುಗಿದು ನಮಿಸುತ್ತಿದ್ದಾರೆ. ಮತ್ತೊಂದು ಫೋಟೋದಲ್ಲಿ ಅವರ ಎದುರು ಕುಳಿತು ಚರ್ಚೆ ಮಾಡುತ್ತಿದ್ದಾರೆ. ಸಿನಿಮಾ ರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದ್ದಾರೆ ಮೋದಿ. ‘ಚೆನ್ನೈನಲ್ಲಿ ವೈಜಯಂತಿ ಮಾಲಾ ಅವರನ್ನು ಭೇಟಿ ಮಾಡಿದ್ದು ಖುಷಿ ನೀಡಿದೆ. ಅವರು ಪದ್ಮ ವಿಭೂಷಣ ಪ್ರಶಸ್ತಿ ಪಡೆದಿದ್ದಾರೆ ಮತ್ತು ಭಾರತೀಯ ಸಿನಿಮಾ ಜಗತ್ತಿಗೆ ನೀಡಿದ ಕೊಡುಗೆಗಾಗಿ ಭಾರತದಾದ್ಯಂತ ಮೆಚ್ಚುಗೆ ಪಡೆದಿದ್ದಾರೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಮೋದಿ ಮಾಡಿದ ಟ್ವೀಟ್..

ಜನವರಿಯಲ್ಲಿ ಪದ್ಮ ಪ್ರಶಸ್ತಿ ಪಡೆದವರ ಹೆಸರನ್ನು ಘೋಷಣೆ ಮಾಡಲಾಯಿತು. ಇದರಲ್ಲಿ ವೈಜಯಂತಿಮಾಲಾ ಹೆಸರು ಕೂಡ ಇತ್ತು. ಇವರಲ್ಲದೆ ಚಿರಂಜೀವಿ ಹಾಗೂ ಇನ್ನೂ 132 ಜನರಿಗೆ ಪದ್ಮ ಪ್ರಶಸ್ತಿ ಸಿಕ್ಕಿದೆ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ.

ಇದನ್ನೂ ಓದಿ: ಪದ್ಮ ಪ್ರಶಸ್ತಿ: ಮೇರು ನಟ ಅನಂತ್ ನಾಗ್​ ಮತ್ತೆ ನಿರ್ಲಕ್ಷ್ಯ

ವೈಜಯಂತಿಮಾಲಾ ಚಿತ್ರರಂಗಕ್ಕೆ ಕಾಲಿಡುವಾಗ ಅವರಿಗೆ 16 ವರ್ಷ ವಯಸ್ಸು. ಅವರು ನಟಿಸಿದ ಮೊದಲ ಸಿನಿಮಾ ‘ವಾಳ್ಕೈ’. ಈ ಚಿತ್ರ ರಿಲೀಸ್ ಆಗಿದ್ದು 1949ರಲ್ಲಿ. ಅವರ ಮೊದಲ ಹಿಂದಿ ಸಿನಿಮಾ 1951ರಲ್ಲಿ ರಿಲೀಸ್ ಆಯಿತು. 1954 ‘ಆಶಾ ನಿರಾಶಾ’ ಮೂಲಕ ಕನ್ನಡಕ್ಕೂ ಕಾಲಿಟ್ಟರು. ಹಿಂದಿಯಲ್ಲಿ ಅವರು ಹೆಚ್ಚಾಗಿ ನಟಿಸಿದ್ದಾರೆ. 1970ರ ಬಳಿಕ ಅವರು ಸಿನಿಮಾಗಳಲ್ಲಿ ಬಣ್ಣ ಹಚ್ಚಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ