ಹಿಟ್ ಸಿಗದೆ ಒದ್ದಾಡುತ್ತಿರುವ ಹೀರೋ ಜೊತೆ ಡೇಟಿಂಗ್ ಶುರು ಹಚ್ಚಿಕೊಂಡ ಪೂಜಾ ಹೆಗ್ಡೆ

ಇತ್ತೀಚೆಗೆ ಬಹುಭಾಷಾ ನಟಿ ಪೂಜಾ ಹೆಗ್ಡೆ ಸಿನಿಮಾ ಯಶಸ್ಸು ಕಾಣುತ್ತಿಲ್ಲ. ಅವರು ರೋಹನ್ ಮೆಹ್ರಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ದಿ. ವಿನೋದ್ ಮೆಹ್ರಾ ಪುತ್ರ ರೋಹನ್, 'ಬಜಾರ್' ನಟ. ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡು ಹಲವು ಊಹಾಪೋಹಗಳಿಗೆ ಕಾರಣವಾಗಿದ್ದಾರೆ. ಇವರ ಸಂಬಂಧದ ಕುರಿತು ಯಾವುದೇ ಅಧಿಕೃತ ದೃಢೀಕರಣವಿಲ್ಲ.

ಹಿಟ್ ಸಿಗದೆ ಒದ್ದಾಡುತ್ತಿರುವ ಹೀರೋ ಜೊತೆ ಡೇಟಿಂಗ್ ಶುರು ಹಚ್ಚಿಕೊಂಡ ಪೂಜಾ ಹೆಗ್ಡೆ
ಪೂಜಾ-ರೋಹನ್

Updated on: Apr 29, 2026 | 11:19 AM

ಮಂಗಳೂರು ಮೂಲದ ಬಹುಭಾಷಾ ನಟಿ ಪೂಜಾ ಹೆಗ್ಡೆ ಅವರಿಗೆ ಇತ್ತೀಚೆಗೆ ದೊಡ್ಡ ಯಶಸ್ಸು ಸಿಗುತ್ತಿಲ್ಲ. ಅವರು ಒಪ್ಪಿಕೊಂಡ ಸಿನಿಮಾಗಳಿಂದಲೂ ಹಿಂದಕ್ಕೆ ಸರಿಯುತ್ತಿದ್ದಾರೆ. ಹೀಗಿರುವಾಗಲೇ ಅವರು ಡೇಟಿಂಗ್ ವಿಷಯಕ್ಕೆ ಸುದ್ದಿ ಆಗಿದ್ದಾರೆ. ಪೂಜಾ ಹೆಗ್ಡೆ ಅವರು ‘ಬಜಾರ್’ ಹೆಸರಿನ ಸಿನಿಮಾ ಮಾಡಿದ್ದ ರೋಹನ್ ಮೆಹ್ರಾ ಜೊತೆ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ.

ರೋಹನ್ ಮೆಹ್ರಾ ಅವರು ಹಿಂದಿ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದಿದ್ದ ವಿನೋದ್ ಮೆಹ್ರಾ ಅವರ ಮಗ. ಈ ಕಾರಣಕ್ಕೆ ವಿನೋದ್ ಅವರಿಗೆ ಚಿತ್ರರಂಗದಲ್ಲಿ ಸಿನಿಮಾ ಆಫರ್​​ಗಳು ಸಿಕ್ಕವು. 2015ರಲ್ಲಿ ಬಂದ ‘ಬಾಜಿರಾವ್ ಮಸ್ತಾನಿ’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ರೋಹನ್ ಮೆಹ್ರಾ ನಟಿಸಿದರು. ಆ ಬಳಿಕ ಕಿರುಚಿತ್ರ ಒಂದನ್ನು ಮಾಡಿದರು. 2018ರಲ್ಲಿ ‘ಬಜಾರ್’ ಹೆಸರಿನ ಸಿನಿಮಾ ಮಾಡಿದರು. ಈ ಚಿತ್ರವೂ ಮೆಚ್ಚುಗೆ ಪಡೆದಿಲ್ಲ.‘420 ಐಪಿಸಿ’, ‘ಅದ್ಭುತ್’ ಹೆಸರಿನ ಚಿತ್ರವನ್ನು ರೋಹನ್ ಮೆಹ್ರಾ ಮಾಡಿದರು. ಸದ್ಯ ಅವರ ಕೈಯಲ್ಲಿ ಯಾವುದೇ ಹೊಸ ಸಿನಿಮಾ ಇಲ್ಲ.

ಪೂಜಾ ಹೆಗ್ಡೆ ಹಾಗೂ ರೋಹನ್ ಒಟ್ಟಾಗಿ ಸಿನಿಮಾ ಮಾಡಿಲ್ಲ. ಆದರೆ, ಇಬ್ಬರ ಮಧ್ಯೆ ಪರಿಚಯ ಬೆಳೆದಿದೆ. ಇಬ್ಬರೂ ಅನೇಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಎಲ್ಲಿಯೂ ಇವರು ಡೇಟಿಂಗ್ ವಿಷಯ ರಿವೀಲ್ ಮಾಡಿಲ್ಲ. ಈಗ ಇವರು ಗುಟ್ಟಾಗಿ ಸುತ್ತಾಡುತ್ತಿರುವುದು ಸ್ಪಷ್ಟವಾಗಿದೆ.

ಈ ವಿಷಯವನ್ನು ಪೂಜಾ ಹೆಗ್ಡೆ ಆಗಲೀ, ರೋಹನ್ ಮೆಹ್ರಾ ಆಗಲಿ ಖಚಿತಪಡಿಸಿಲ್ಲ. ಆದರೆ, ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಎಂಬ ಮಾತನ್ನು ಅನೇಕರು ನೆನಪಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇಬ್ಬರೂ ವಿವಾಹ ಆಗುವ ಘೋಷಣೆ ಮಾಡಿದ್ದರೂ ಅಚ್ಚರಿ ಏನಿಲ್ಲ.

ಇದನ್ನೂ ಓದಿ: ಮುಂಬೈ ಸೋಲುತ್ತಿದ್ದಂತೆ ಮುಖ ಮುಚ್ಚಿಕೊಂಡ ಪೂಜಾ ಹೆಗ್ಡೆ

ಈ ಮೊದಲು ವರುಣ್ ಧವನ್ ಜೊತೆ ಪೂಜಾ ಹೆಗ್ಡೆ ಆಪ್ತವಾಗಿದ್ದ ವಿಷಯ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಇವರ ಮಧ್ಯೆ ಏನೋ ನಡೆಯುತ್ತಿದೆ ಎಂದು ಹೇಳಲಾಗಿತ್ತು. ಆದರೆ, ಹಾಗಾಗಿಲ್ಲ. ಈಗ ಈ ವಿಷಯವೂ ಅದೇ ರೀತಿಯೇ ಎಂಬ ಪ್ರಶ್ನೆ ಹುಟ್ಟುಹಾಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us