‘ಗುಂಟೂರು ಖಾರಂ’ ಚಿತ್ರಕ್ಕೆ ಪೂಜಾ ಹೆಗ್ಡೆ ಬದಲು ಯುವ ನಟಿಗೆ ಮಣೆ ಹಾಕಿದ ಮಹೇಶ್ ಬಾಬು

Guntur Karam Movie: ‘ಗುಂಟೂರು ಖಾರಂ’ ಸಿನಿಮಾ 2024ರ ಜನವರಿ ತಿಂಗಳಲ್ಲಿ ತೆರೆಗೆ ಬರುತ್ತಿದೆ. ಈ ಚಿತ್ರಕ್ಕೆ ಪೂಜಾ ಬದಲು ಮೀನಾಕ್ಷಿ ಚೌಧರಿ ಎಂಟ್ರಿ ಆಗಿದೆ.

‘ಗುಂಟೂರು ಖಾರಂ’ ಚಿತ್ರಕ್ಕೆ ಪೂಜಾ ಹೆಗ್ಡೆ ಬದಲು ಯುವ ನಟಿಗೆ ಮಣೆ ಹಾಕಿದ ಮಹೇಶ್ ಬಾಬು
ಮಹೇಶ್ ಬಾಬು-ಮೀನಾಕ್ಷಿ

Updated on: Jun 27, 2023 | 12:18 PM

‘ಸರ್ಕಾರು ವಾರಿ ಪಾಟ’ ಸಿನಿಮಾ (Sarkaru Vaari Paata) ಬಳಿಕ ಮಹೇಶ್ ಬಾಬು ಅವರು ತ್ರಿವಿಕ್ರಂ ಶ್ರೀನಿವಾಸ್ ಜೊತೆ ಕೈ ಜೋಡಿಸಿದರು. ಈ ಸಿನಿಮಾಗೆ ‘ಗುಂಟೂರು ಖಾರಂ’ ಎಂಬ ಶೀರ್ಷಿಕೆ ಇಡಲಾಗಿದ್ದು, ಚಿತ್ರದ ಕೆಲಸಗಳು ಸಾಕಷ್ಟು ವಿಳಂಬ ಆಗುತ್ತಲೇ ಇದೆ. ತಂದೆ-ತಾಯಿ ಕಳೆದುಕೊಂಡಿದ್ದರಿಂದ ಮಹೇಶ್ ಬಾಬುಗೆ ಹೆಚ್ಚು ನೋವಾಯಿತು. ಈಗ ಮತ್ತೆ ಸಿನಿಮಾ ಕೆಲಸ ಆರಂಭ ಆಗಬೇಕು ಎಂದುಕೊಂಡಿದ್ದಾಗಲೇ ಸಿನಿಮಾ ಹೀರೋಯಿನ್ ಬದಲಾಗಿದ್ದಾರೆ. ಪೂಜಾ ಹೆಗ್ಡೆ (Pooja Hegde)  ಇತ್ತೀಚೆಗೆ ಸಿನಿಮಾ ತಂಡದಿಂದ ಹೊರ ನಡೆದರು. ಈಗ ಚಿತ್ರಕ್ಕೆ ಮೀನಾಕ್ಷಿ ಚೌಧರಿ ಎಂಟ್ರಿ ಆಗಿದೆ. ಈ ವಿಚಾರ ಅಭಿಮಾನಿಗಳಿಗೆ ಖುಷಿ ನೀಡಿದೆ.

‘ಗುಂಟೂರು ಖಾರಂ’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಹೆಚ್ಚಿದೆ. ಮಹೇಶ್ ಬಾಬು ಅವರ ಲುಕ್ ಈಗಾಗಲೇ ವೈರಲ್ ಆಗಿದೆ. ಈ ಚಿತ್ರಕ್ಕೆ ತ್ರಿವಿಕ್ರಂ ಶ್ರೀನಿವಾಸ್ ನಿರ್ದೇಶನ ಮಾಡುತ್ತಿದ್ದಾರೆ ಅನ್ನೋದು ವಿಶೇಷ. ಈ ಸಿನಿಮಾ 2024ರ ಜನವರಿ ತಿಂಗಳಲ್ಲಿ ತೆರೆಗೆ ಬರುತ್ತಿದೆ. ಈ ಚಿತ್ರಕ್ಕೆ ಪೂಜಾ ಬದಲು ಮೀನಾಕ್ಷಿ ಚೌಧರಿ ಎಂಟ್ರಿ ಆಗಿದೆ.

2021ರಲ್ಲಿ ಮೀನಾಕ್ಷಿ ಚೌಧರಿ ಚಿತ್ರರಂಗಕ್ಕೆ ಕಾಲಿಟ್ಟರು. ಅದಕ್ಕೂ ಮೊದಲು ಅವರು ಕಿರುತೆರೆಯಲ್ಲಿ ಬ್ಯುಸಿ ಇದ್ದರು. ಕಳೆದ ಎರಡು ವರ್ಷಗಳಲ್ಲಿ ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಹಿಟ್​: ದಿ ಸೆಕೆಂಡ್ ಕೇಸ್’ ಸಿನಿಮಾದಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಈಗ ಅವರಿಗೆ ‘ಗುಂಟೂರು ಖಾರಂ’ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಈ ವಿಚಾರ ಅವರ ಖುಷಿ ಹೆಚ್ಚಿಸಿದೆ.

ಇದನ್ನೂ ಓದಿ: ಮಹೇಶ್ ಬಾಬು ಸಿನಿಮಾದಿಂದ ಪೂಜಾ ಹೆಗ್ಡೆ ಹೊರಕ್ಕೆ: ಶ್ರೀಲೀಲಾ ಕಾರಣವೇ?

ಪೂಜಾ ಹೆಗ್ಡೆ ಹಾಗೂ ಶ್ರೀಲೀಲಾ ‘ಗುಂಟೂರು ಖಾರಂ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ತಂಡದವರು ಘೋಷಣೆ ಮಾಡಿದ್ದರು. ಆದರೆ, ನಿರ್ದೇಶಕರಿಗೆ ಸ್ಕ್ರಿಪ್ಟ್​ನಲ್ಲಿ ಬದಲಾವಣೆ ಮಾಡುವ ಅನಿವಾರ್ಯತೆ ಎದುರಾಯಿತು. ಈ ಕಾರಣಕ್ಕೆ ಪೂಜಾ ಹೆಗ್ಡೆಗೆ ಡೇಟ್ಸ್ ಹೊಂದಿಸಲು ಸಾಧ್ಯವಾಗಿಲ್ಲ ಎಂದು ವರದಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:17 pm, Tue, 27 June 23

ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us