ಶ್ರೀಲೀಲಾ ಇರುವಿಕೆಯಿಂದ ಪೂಜಾ ಹೆಗ್ಡೆಗೆ ಕಾಡಿದೆ ಚಿಂತೆ? ಸೈಲೆಂಟ್ ಆದ ಮಂಗಳೂರು ಬೆಡಗಿ

ಶ್ರೀಲೀಲಾ ಏಳ್ಗೆ ಕಂಡು ಪೂಜಾ ಹೆಗ್ಡೆ ಈರ್ಷೆಪಟ್ಟುಕೊಳ್ಳುತ್ತಿದ್ದಾರೆ ಎಂದು ವರದಿ ಆಗಿದೆ. ಹಾಗಂತ ಇದನ್ನು ಪೂಜಾ ಬಾಯಿಬಿಟ್ಟು ಹೇಳಿಲ್ಲ. ಆದರೆ, ಅವರ ಮೌನ ಈ ರೀತಿಯ ಅನುಮಾನ ಹುಟ್ಟುಹಾಕಿದೆ.

ಶ್ರೀಲೀಲಾ ಇರುವಿಕೆಯಿಂದ ಪೂಜಾ ಹೆಗ್ಡೆಗೆ ಕಾಡಿದೆ ಚಿಂತೆ? ಸೈಲೆಂಟ್ ಆದ ಮಂಗಳೂರು ಬೆಡಗಿ
ಪೂಜಾ-ಶ್ರೀಲೀಲಾ

Updated on: Jun 17, 2023 | 6:30 AM

ಸ್ಟಾರ್​​ಗಳ ವೃತ್ತಿಜೀವನದಲ್ಲಿ ಏರಿಳಿತಗಳು ಸರ್ವೇ ಸಾಮಾನ್ಯ. ತಮ್ಮ ಸಿನಿಮಾಗಳು ಸಾಲು ಸಾಲಾಗಿ ಫ್ಲಾಪ್ ಆಗುತ್ತಿರುವಾಗ ಮತ್ತೊಬ್ಬರು ದೊಡ್ಡ ಯಶಸ್ಸು ಕಂಡರೆ ಸಹಜವಾಗಿಯೇ ಹೊಟ್ಟೆ ಉರಿ ಆಗುತ್ತದೆ. ಈಗ ಕನ್ನಡದ ನಟಿ ಶ್ರೀಲೀಲಾ (Sreeleela) ಏಳ್ಗೆ ಕಂಡು ಪೂಜಾ ಹೆಗ್ಡೆ ಈರ್ಷೆಪಟ್ಟುಕೊಳ್ಳುತ್ತಿದ್ದಾರೆ ಎಂದು ವರದಿ ಆಗಿದೆ. ಹಾಗಂತ ಇದನ್ನು ಪೂಜಾ (Pooja Hegde) ಬಾಯಿಬಿಟ್ಟು ಹೇಳಿಲ್ಲ. ಆದರೆ, ಅವರ ಮೌನ ಈ ರೀತಿಯ ಅನುಮಾನ ಹುಟ್ಟುಹಾಕಿದೆ. ಅಷ್ಟಕ್ಕೂ ಏನಿದು ವಿಚಾರ? ಆ ಬಗ್ಗೆ ಇಲ್ಲಿದೆ ವಿವರ

ಪೂಜಾ ಹೆಗ್ಡೆ ಹಾಗೂ ಶ್ರೀಲೀಲಾ ಎರಡು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಚಿತ್ರದಲ್ಲಿ ಪೂಜಾ ಹಾಗೂ ಶ್ರೀಲೀಲಾ ನಟಿಸೋದು ಅಧಿಕೃತವಾಗಿದೆ. ಈ ಚಿತ್ರದಲ್ಲಿ ಶ್ರೀಲೀಲಾ ಎರಡನೇ ಹೀರೋಯಿನ್ ಎನ್ನಲಾಗಿದೆ. ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಚಿತ್ರದಲ್ಲಿ ಶ್ರೀಲೀಲಾ ಬಣ್ಣ ಹಚ್ಚುತ್ತಿದ್ದಾರೆ. ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ಕೂಡ ನಟಿಸುತ್ತಾರೆ ಎನ್ನುತ್ತಿವೆ ಮೂಲಗಳು. ಶ್ರೀಲೀಲಾ ಇರುವಿಕೆ ಪೂಜಾಗೆ ಆತಂಕ ಮೂಡಿಸಿದೆ.

ಇದನ್ನೂ ಓದಿ: ಗ್ಲಾಮರ್ ಪಾತ್ರಕ್ಕೆ ನೋ ಎಂದ ಶ್ರೀಲೀಲಾ? ಮಹತ್ವದ ನಿರ್ಧಾರ ತೆಗೆದುಕೊಂಡ ನಟಿ

ಶ್ರೀಲೀಲಾ ದಿನೇದಿನೇ ಖ್ಯಾತಿ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಮತ್ತೊಂದು ಕಡೆ ಪೂಜಾ ಹೆಗ್ಡೆ ಬ್ಯಾಕ್ ಟು ಬ್ಯಾಕ್ ಸೋಲು ಕಾಣುತ್ತಿದ್ದಾರೆ. ‘ರಾಧೆ ಶ್ಯಾಮ್​’, ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್’ ಸೇರಿ ಅನೇಕ ಚಿತ್ರಗಳು ಸೋತಿವೆ. ತಮ್ಮ ಸ್ಥಾನವನ್ನು ಶ್ರೀಲೀಲಾ ಆಕ್ರಮಿಸಿಕೊಂಡರೆ ಎನ್ನುವ ಭಯ ಪೂಜಾ ಹೆಗ್ಡೆಗೆ ಕಾಡಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ರಶ್ಮಿಕಾ ಹಿಂದಿಕ್ಕಿದ ಶ್ರೀಲೀಲಾ ಸಿನಿಮಾಗಳ ಪಟ್ಟಿ ಇಲ್ಲಿದೆ

ಇತ್ತೀಚೆಗೆ ‘ಗುಂಟೂರು ಖಾರಂ’ ಹಾಗೂ ‘ಉಸ್ತಾದ್ ಭಗತ್ ಸಿಂಗ್’ ತಂಡಗಳು ಶ್ರೀಲೀಲಾಗೆ ಬರ್ತ್​ಡೇ ವಿಶ್ ಮಾಡಿ ಪೋಸ್ಟರ್ ಹಂಚಿಕೊಂಡಿದ್ದವು. ಇದನ್ನು ಪೂಜಾ ಹೆಗ್ಡೆ ಶೇರ್ ಮಾಡಿಕೊಳ್ಳುತ್ತಾರೆ ಎಂದು ಅನೇಕರು ಊಹಿಸಿದ್ದರು. ಆದರೆ, ಅದು ಸುಳ್ಳಾಗಿದೆ. ಪೂಜಾ ಹೆಗ್ಡೆ ಈ ವಿಚಾರದಲ್ಲಿ ಸೈಲೆಂಟ್ ಆಗಿದ್ದಾರೆ. ಅವರ ಸೈಲೆನ್ಸ್ ಸಾಕಷ್ಟು ಕುತೂಹಲ ಮೂಡಿಸಿದೆ. ಶ್ರೀಲೀಲಾ ಏಳ್ಗೆ ಬಗ್ಗೆ ಪೂಜಾ ಹೆಗ್ಡೆಗೆ ಅಸಮಾಧಾನ ಆಗಿದೆಯೇ ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us