ಪ್ರಭಾಸ್ (Prabhas) ನಟನೆಯ, ನಾಗ್ ಅಶ್ವಿನ್ ನಿರ್ದೇಶನದ ‘ಕಲ್ಕಿ 2898 ಎಡಿ’ ಸಿನಿಮಾ ಇಂದು (ಜೂನ್ 27) ರಿಲೀಸ್ ಆಗಿದೆ. ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಿದೆ. 600 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾದ ಈ ಚಿತ್ರವನ್ನು ಜನರು ಹೊಗಳುತ್ತಿದ್ದಾರೆ. ಒಬ್ಬೊಬ್ಬರಿಗೆ ಒಂದೊಂದು ವಿಚಾರ ಇಷ್ಟ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಟ್ವೀಟ್ ಮಾಡುವ ಕೆಲಸ ಆಗುತ್ತಿದೆ.
ಪ್ರಭಾಸ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಅವರು ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಸೈನ್ಸ್ ಫಿಕ್ಷನ್ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿದೆ. ಚಿತ್ರದ ಟ್ರೇಲರ್ ರಿಲೀಸ್ ಆದಾಗಲೇ ಜನರಿಗೆ ಸಾಕಷ್ಟು ನಿರೀಕ್ಷೆ ಇತ್ತು. ಸಿನಿಮಾ ನೋಡಿದವರಿಗೆ ನಿರೀಕ್ಷೆ ಸುಳ್ಳಲಾಗಿಲ್ಲ.
ಇದನ್ನೂ ಓದಿ: ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತಾ ‘ಕಲ್ಕಿ 2898 ಎಡಿ’ ಸಿನಿಮಾ?
‘ಕಲ್ಕಿ ಸಿನಿಮಾ ಸೈನ್ಸ್ ಫಿಕ್ಷನ್ ಚಿತ್ರ. ಇದು ಸಾಮಾನ್ಯ ಕಥೆಗಿಂತ ಭಿನ್ನವಾಗಿದೆ. ಸಿನಿಮಾದ ದೃಶ್ಯಗಳು ಹಾಗೂ ಸಿನಿಮಾದಲ್ಲಿ ಬರೋ ಜಗತ್ತನ್ನು ಕಟ್ಟಿಕೊಟ್ಟಿರೋದು ಇದೇ ಮೊದಲು’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ಇದನ್ನು ಥಿಯೇಟರ್ನಲ್ಲೇ ನೋಡಬೇಕು. ನಾಗ್ ಅಶ್ವಿನ್, ಪ್ರಭಾಸ್ ಬಗ್ಗೆ ಹೆಮ್ಮೆ ಆಗುತ್ತದೆ. ಅಮಿತಾಭ್ ಬಚ್ಚನ್ ಅವರು ತಾವು ಏಕೆ ಲೆಜೆಂಡ್ ಎಂಬುದನ್ನು ಸಾಬೀತು ಮಾಡುತ್ತಾರೆ’ ಎಂದಿದ್ದಾರೆ ಕೆಲವರು.
#Kalki2898AD is a larger than life Sci-FI Action Experience. The visuals and world building by Nag Ashwin are never before from Indian Cinema. However, Nag Ashwin shows some inexperience in building a proper drama and emotional connect with somewhat of a flat screenplay.
Still,…
— Venky Reviews (@venkyreviews)
Review: #Kalki2898AD deserves a watch for its visuals and world-building
Kalki begins with the Kurukshetra war in which the great Aswatthama (#AmitabhBachchan) is cursed by Krishna to remain immortal all his life and be witness to all the suffering in the world in the age of… pic.twitter.com/KKUWR984Nm
— Cinemania (@CinemaniaIndia) June 26, 2024
Review: #Kalki2898AD deserves a watch for its visuals and world-building
Kalki begins with the Kurukshetra war in which the great Aswatthama (#AmitabhBachchan) is cursed by Krishna to remain immortal all his life and be witness to all the suffering in the world in the age of… pic.twitter.com/KKUWR984Nm
— Cinemania (@CinemaniaIndia) June 26, 2024
#Kalki2898AD Review 🎥
1️⃣Visual Masterpiece: The visuals and setup are a dazzling spectacle, presenting a grandeur never before witnessed in Indian cinema. Every frame🔥 captivates the audience, making it a must-watch for its stunning imagery.
2️⃣Intriguing Storyline: The… https://t.co/7kRLIF19Yf pic.twitter.com/ScmmelfSPj
— AP360 (@andhraa360) June 26, 2024
‘ಕಲ್ಕಿ ಚಿತ್ರಕ್ಕೆ ಐತಿಹಾಸಿಕದ ಟಚ್ ಕೊಟ್ಟಿದ್ದು ಸಹಕಾರಿ ಆಗಿದೆ. ಕೊನೆಯ 30 ನಿಮಿಷ ಥ್ರಿಲ್ಲಿಂಗ್ ಆಗಿದೆ. ಪ್ರಭಾಸ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ ಅವರ ನಟನೆ ಅದ್ಭುತ. ಕಲರ್ ಗ್ರೇಡಿಂಗ್ ಅದ್ಭುತವಾಗಿದೆ’ ಎಂದು ಅವರು ಬರೆದುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.