
ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಅವರ ಮೇಲೆ ಬೆಟ್ಟದಷ್ಟು ಒತ್ತಡ ಇದೆ. ‘ಕೆಜಿಎಫ್: ಚಾಪ್ಟರ್ 1’ ಸಿನಿಮಾ ಮೂಲಕ ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್ವುಡ್ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದು ಅವರ ಹೆಚ್ಚುಗಾರಿಕೆ. ಈಗ ಅವರು ‘ಕೆಜಿಎಫ್: ಚಾಪ್ಟರ್ 2’ ಮತ್ತು ‘ಸಲಾರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಕೆಜಿಎಫ್ 2’ ಚಿತ್ರಕ್ಕೆ ಕೊನೇ ಹಂತದ ಕೆಲಸಗಳು ನಡೆಯುತ್ತಿದ್ದರೆ, ‘ಸಲಾರ್’ (Salaar) ಸಿನಿಮಾದ ಶೂಟಿಂಗ್ ಮಾಡಲಾಗುತ್ತಿದೆ. ಈ ವೇಳೆ ಪ್ರಶಾಂತ್ ನೀಲ್ ಅವರ ಕಣ್ಣು ತಪ್ಪಿಸಿ ಒಂದು ವಿಡಿಯೋವನ್ನು ಲೀಕ್ ಮಾಡಲಾಗಿದೆ. ಶೂಟಿಂಗ್ ಸೆಟ್ನಲ್ಲಿ ಪ್ರಭಾಸ್ (Prabhas) ನಡೆದುಬರುತ್ತಿರುವ ಈ ವಿಡಿಯೋವನ್ನು ಕದ್ದು ಮುಚ್ಚಿ ಶೂಟ್ ಮಾಡಲಾಗಿದೆ.
ಅದ್ದೂರಿಯಾಗಿ ಸೆಟ್ಗಳನ್ನು ನಿರ್ಮಿಸಿ, ಅದರಲ್ಲಿ ಸಲಾರ್ ಸಿನಿಮಾದ ಶೂಟಿಂಗ್ ಮಾಡಲಾಗುತ್ತಿದೆ. ಕಥೆ ಮತ್ತು ಪಾತ್ರದ ಬಗ್ಗೆ ಸುಳಿವು ಬಿಟ್ಟುಕೊಡಲು ಪ್ರಶಾಂತ್ ನೀಲ್ ಇಷ್ಟಪಡುವುದಿಲ್ಲ. ಹಾಗಾಗಿ ಚಿತ್ರೀಕರಣದ ಸೆಟ್ನಿಂದ ಯಾವುದೇ ಫೋಟೋ ಅಥವಾ ವಿಡಿಯೋ ಲೀಕ್ ಆಗದಂತೆ ಅವರು ಮುನ್ನೆಚ್ಚರಿಕೆ ವಹಿಸುತ್ತಾರೆ. ಆದರೂ ಅವರ ಕಣ್ಣು ತಪ್ಪಿಸಿ, ಚಿತ್ರೀಕರಿಸಿರುವ ಒಂದು ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದು ಸಹಜವಾಗಿಯೇ ಪ್ರಶಾಂತ್ ನೀಲ್ ಕೋಪಕ್ಕೆ ಕಾರಣವಾದರೂ ಅಚ್ಚರಿ ಇಲ್ಲ.ಇದು ಸಲಾರ್ ಸಿನಿಮಾ ಸೆಟ್ನಲ್ಲಿಯೇ ರೆಕಾರ್ಡ್ ಮಾಡಲಾಗಿರುವುದು ಎಂದು ಹೇಳಲಾಗುತ್ತಿದೆಯಾದರೂ ಅದಕ್ಕೆ ಯಾವುದೇ ಸಾಕ್ಷಿ ಇಲ್ಲ. ಅಲ್ಲದೆ, ಚಿತ್ರತಂಡದ ಯಾರೊಬ್ಬರೂ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.
ಸಲಾರ್ನಲ್ಲಿ ಪ್ರಭಾಸ್ಗೆ ಜೋಡಿಯಾಗಿ ನಟಿ ಶ್ರುತಿ ಹಾಸನ್ ಅಭಿನಯಿಸುತ್ತಿದ್ದಾರೆ. ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಜೊತೆ ಕೆಲಸ ಮಾಡುತ್ತಿರುವುದು ಅವರಿಗೆ ಹೆಚ್ಚು ಖುಷಿಕೊಟ್ಟಿದೆ. ಇತ್ತೀಚೆಗೆ ಪ್ರಶಾಂತ್ ನೀಲ್ ಜೊತೆ ಇರುವ ಒಂದು ಫೋಟೋವನ್ನು ಶೇರ್ ಮಾಡಿದ್ದ ಅವರು, ‘ನಾನು ಲೆಜೆಂಡ್ ಅನಿಸುತ್ತೆ. ಯಾಕೆಂದರೆ ನಾನು ಅವರನ್ನು ನಗಿಸಿದ್ದೇನೆ. ಸಲಾರ್ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವುದು ಖುಷಿ ಆಗುತ್ತಿದೆ’ ಎಂದು ಬರೆದುಕೊಂಡಿದ್ದರು.
ಪ್ರಭಾಸ್ ಅವರು ‘ಆದಿಪುರುಷ್’ ಚಿತ್ರದ ಶೂಟಿಂಗ್ನಲ್ಲಿಯೂ ತೊಡಗಿಕೊಂಡಿದ್ದಾರೆ. ಪೂಜಾ ಹೆಗ್ಡೆ ಜೊತೆ ಅವರು ನಟಿಸಿರುವ ‘ರಾಧೆ ಶ್ಯಾಮ್’ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, 2022ರ ಜ.14ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ.
ಇದನ್ನೂ ಓದಿ:
Prabhas: ಫೇಸ್ಬುಕ್ನಲ್ಲಿ ಪ್ರಭಾಸ್ಗೆ ಎಷ್ಟನೇ ಸ್ಥಾನ? ಬಾಲಿವುಡ್ ಮಂದಿ ಜೊತೆ ಪೈಪೋಟಿಗೆ ಇಳಿದ ಸೌತ್ ಸ್ಟಾರ್
ಸಲಾರ್ ಚಿತ್ರದಲ್ಲಿ 2 ಪ್ರಮುಖ ಬದಲಾವಣೆ; ಪ್ರಭಾಸ್, ಪ್ರಶಾಂತ್ ನೀಲ್ ಬಳಗದಲ್ಲಿ ಏನು ನಡೀತಿದೆ?