ಲಡಾಖ್​ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಕಾಶ್ ರಾಜ್; ವಾಂಗ್​ಚುಕ್ ಸತ್ಯಾಗ್ರಹಕ್ಕೆ ಬೆಂಬಲ

|

Updated on: Mar 26, 2024 | 2:27 PM

ಮಂಗಳವಾರ ಪ್ರಕಾಶ್ ರಾಜ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಜನ್ಮದಿನದಂದು ಒಂದೊಳ್ಳೆಯ ಕೆಲಸ ಮಾಡಬೇಕು ಎನ್ನುವ ಕಾರಣಕ್ಕೆ ಅವರು ವಾಂಗ್​ಚುಕ್ ಚಳವಳಿಯನ್ನು ಬೆಂಬಲಿಸಿದ್ದಾರೆ. ಇವರನ್ನು ಬೆಂಬಲಿಸಲು ಅವರು ಸ್ವತಃ ಚಳವಳಿ ನಡೆಯವ ಸ್ಥಳಕ್ಕೆ ತೆರಳಿದ್ದರು ಅನ್ನೋದು ವಿಶೇಷ. ‘

ಲಡಾಖ್​ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಕಾಶ್ ರಾಜ್; ವಾಂಗ್​ಚುಕ್ ಸತ್ಯಾಗ್ರಹಕ್ಕೆ ಬೆಂಬಲ
ವಾಂಗ್​ಚುಕ್-ಪ್ರಕಾಶ್ ರಾಜ್
Follow us on

ಲಡಾಖ್‌ನ ಹಕ್ಕುಗಳು ಮತ್ತು ಪರಿಸರವನ್ನು ರಕ್ಷಿಸಲು ಇಂಜಿನಿಯರ್ ಮತ್ತು ಶಿಕ್ಷಣ ಸುಧಾರಕ ಸೋನಮ್ ವಾಂಗ್​ಚುಕ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಮಾರ್ಚ್ 6ರಂದು ‘ಕ್ಲೈಮೇಟ್ ಫಾಸ್ಟ್’ ಹೆಸರಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಅವರ ಆಂದೋಲನಕ್ಕೆ ಪರಿಸರವಾದಿಗಳು, ಸ್ಥಳೀಯ ಜನರು, ಸೆಲೆಬ್ರಿಟಿಗಳು, ವಿವಿಧ ಸಮುದಾಯಗಳು ಬೆಂಬಲ ನೀಡುತ್ತಿವೆ. ಈಗ ನಟ ಪ್ರಕಾಶ್ ರಾಜ್ ಕೂಡ ಅವರನ್ನು ಬೆಂಬಲಿಸಿದ್ದಾರೆ. ಈ ಕುರಿತು ಅವರು ಟ್ವಿಟರ್​ನಲ್ಲಿ ಪೋಸ್ಟ್ ಹಾಕಿದ್ದಾರೆ.

ಮಂಗಳವಾರ (ಮಾರ್ಚ್ 26) ಪ್ರಕಾಶ್ ರಾಜ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಜನ್ಮದಿನದಂದು ಒಂದೊಳ್ಳೆಯ ಕೆಲಸ ಮಾಡಬೇಕು ಎನ್ನುವ ಕಾರಣಕ್ಕೆ ಅವರು ವಾಂಗ್​ಚುಕ್ ಚಳವಳಿಯನ್ನು ಬೆಂಬಲಿಸಿದ್ದಾರೆ. ಇವರನ್ನು ಬೆಂಬಲಿಸಲು ಅವರು ಸ್ವತಃ ಚಳವಳಿ ನಡೆಯವ ಸ್ಥಳಕ್ಕೆ ತೆರಳಿದ್ದರು ಅನ್ನೋದು ವಿಶೇಷ. ‘ಇವರನ್ನು ಬೆಂಬಲಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದೇನೆ’ ಎಂದು ಅವರು ವಿಡಿಯೋ ಪೋಸ್ಟ್ ಮಾಡಿದ್ದಾರೆ.

‘ಇಂದು ನನ್ನ ಬರ್ತ್​ಡೇ. ಹೀಗಾಗಿ ನಾನು ಈ ದಿನವನ್ನು ಲೇಹ್ ಲಡಾಕ್​ನಲ್ಲಿ ಕಳೆಯಲು ನಿರ್ಧರಿಸಿದೆ. ಈ ಜನ ತಮಗಾಗಿ ಹೋರಾಡುತ್ತಿಲ್ಲ. ಇಲ್ಲಿನ ಜನರು ನಮ್ಮ ದೇಶ, ನಮ್ಮ ಪರಿಸರ ಮತ್ತು ನಮ್ಮ ಭವಿಷ್ಯಕ್ಕಾಗಿ ಹೋರಾಡುತ್ತಿದ್ದಾರೆ. ಅವರ ಬೆಂಬಲಕ್ಕೆ ನಿಲ್ಲೋಣ’ ಎಂದು ವಿಡಿಯೋದಲ್ಲಿ ಹೇಳೊದ್ದಾರೆ. ಇದರಲ್ಲಿ ಸಾವಿರಾರು ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವುದು ಕಂಡು ಬಂದಿದೆ.

ಪ್ರಕಾಶ್ ರೈ ಟ್ವೀಟ್..


‘ಲಡಾಖ್ ಮತ್ತು ಹಿಮಾಲಯವನ್ನು ಉಳಿಸಿ’ ಎಂಬ ವಾಂಗ್‌ಚುಕ್ ಅವರ ಉಪವಾಸ 21 ದಿನಗಳನ್ನು ತಲುಪಿದೆ. ಪ್ರತಿಭಟನೆಗೆ ರಾಜಕೀಯ ನಾಯಕರಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವಾಂಗ್​ಚುಕ್ ಟ್ವೀಟ್ ಮಾಡಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಅವರು ಅಪ್‌ಡೇಟ್‌ ನೀಡುತ್ತಾ ಬರುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಶೀಘ್ರವೇ ಸ್ಪಂದನೆ ಸಿಗುವ ಭರವಸೆಯಲ್ಲಿ ಅವರಿದ್ದಾರೆ.

ಪ್ರಕಾಶ್ ರೈ ಅವರು ಸಿನಿಮಾ ಜೊತೆಗೆ ಅನೇಕ ಸಾಮಾಜಿಕ ಕೆಲಸ ಮಾಡುವ ಮೂಲಕವೂ ಗುರುತಿಸಿಕೊಂಡಿದ್ದಾರೆ. ಪುನೀತ್ ಹೆಸರಲ್ಲಿ ಅವರು ಆ್ಯಂಬುಲೆನ್ಸ್ ಸೇವೆ ಕೂಡ ಆರಂಭಿಸಿದ್ದಾರೆ ಅನ್ನೋದು ವಿಶೇಷ. ಇನ್ನೂ ಹಲವು ಸಾಮಾಜಿಕ ಕೆಲಸಗಳು ಅವರ ಕಡೆಯಿಂದ ಆಗುತ್ತಿವೆ.

Published On - 2:27 pm, Tue, 26 March 24