Prakash Raj: ‘ದ್ವೇಷ, ಧರ್ಮಾಂಧತೆಯನ್ನು ಒದ್ದೋಡಿಸಿದ ಕರುನಾಡಿಗೆ ಧನ್ಯವಾದ’: ಕಾಂಗ್ರೆಸ್ ಗೆಲುವಿಗೆ ಪ್ರಕಾಶ್ ರೈ ಪ್ರತಿಕ್ರಿಯೆ
Prakash Rai Twitter: ಕರ್ನಾಟಕದಲ್ಲಿ ಬಿಜೆಪಿ ಸೋಲಲಿದೆ ಎಂದು ಪ್ರಕಾಶ್ ರಾಜ್ ಅವರು ಮೊದಲೇ ಊಹಿಸಿದ್ದರು. ಕಾಂಗ್ರೆಸ್ ಗೆಲುವು ಸಾಧಿಸಿದ ಬಳಿಕ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಪಕ್ಷಕ್ಕೆ ಬಹುಮತ ಸಿಕ್ಕಿದೆ. ಸರ್ಕಾರ ರಚಿಸಲು ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ. 135 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ ಕಾಂಗ್ರೆಸ್ಗೆ ಅನೇಕರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ನಟ ಪ್ರಕಾಶ್ ರಾಜ್ ಅವರು ಕೂಡ ಟ್ವಿಟರ್ ಮೂಲಕ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಮೊದಲಿನಿಂದಲೂ ಬಿಜೆಪಿ (BJP) ನಿಲುವುಗಳನ್ನು ವಿರೋಧಿಸಿಕೊಂಡು ಬಂದಿರುವ ಪ್ರಕಾಶ್ ರೈ (Prakash Rai) ಅವರಿಗೆ ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಖುಷಿ ನೀಡಿದೆ. ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್, ಅಮಿತ್ ಶಾ ಅವರನ್ನು ವ್ಯಂಗ್ಯಮಾಡುವ ರೀತಿಯ ಫೋಟೋ ಹಂಚಿಕೊಂಡಿದ್ದಾರೆ ಪ್ರಕಾಶ್ ರಾಜ್. ಅವರ ಟ್ವೀಟ್ ವೈರಲ್ ಆಗಿದ್ದು, ಅನೇಕರು ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಪ್ರಕಾಶ್ ರಾಜ್ ಅವರ ಮಾತುಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಪ್ರಕಾಶ್ ರಾಜ್ ಟ್ವೀಟ್ನಲ್ಲಿ ಏನಿದೆ?
‘ದ್ವೇಷ ಮತ್ತು ಧರ್ಮಾಂಧತೆಯನ್ನು ಒದ್ದೋಡಿಸಿದ್ದಕ್ಕಾಗಿ ಕರ್ನಾಟಕಕ್ಕೆ ಧನ್ಯವಾದಗಳು. ಬೆತ್ತಲೆಯಾದ ಚಕ್ರವರ್ತಿ’ ಎಂದು ಪ್ರಕಾಶ್ ರಾಜ್ ಅವರು ಟ್ವೀಟ್ ಮಾಡಿದ್ದಾರೆ. ಈ ಬರಹದೊಂದಿಗೆ ಅವರು ಎಂದಿನಂತೆ ಜಸ್ಟ್ ಆಸ್ಕಿಂಗ್ ಎಂಬ ಹ್ಯಾಷ್ಟ್ಯಾಗ್ ಬಳಸಿದ್ದಾರೆ.
Thank you Karnataka for Kicking OUT Hatred and Bigotry ..The Emperor is NAKED … ದ್ವೇಶ…ಬೂಟಾಟಿಕೆಯನ್ನು …ಓದ್ದೋಡಿಸಿದ ಸ್ವಾಭಿಮಾನಿ ಕನ್ನಡಿಗರಿಗೆ ದನ್ಯವಾದಗಳು …..ಬೆತ್ತಲೆಯಾದ ಚಕ್ರವರ್ತಿ.#justasking pic.twitter.com/pVD4GuuaQO
— Prakash Raj (@prakashraaj) May 13, 2023
ಕರ್ನಾಟಕದಲ್ಲಿ ಬಿಜೆಪಿ ಸೋಲಲಿದೆ ಎಂದು ಪ್ರಕಾಶ್ ರಾಜ್ ಅವರು ಮೊದಲೇ ಊಹಿಸಿದ್ದರು. ನರೇಂದ್ರ ಮೋದಿ ನಡೆಸಿದ್ದ ರೋಡ್ ಶೋ ಅನ್ನು ಟೀಕಿಸಿ ಅವರು ಟ್ವೀಟ್ ಮಾಡಿದ್ದರು. ಕಿಚ್ಚ ಸುದೀಪ್ ಅವರು ಬಿಜೆಪಿಗೆ ಬೆಂಬಲ ಸೂಚಿಸಿದಾಗಲೂ ಪ್ರಕಾಶ್ ರಾಜ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಅಂತಿಮವಾಗಿ ಚುನಾವಣೆಯಲ್ಲಿ ಬಿಜೆಪಿಗೆ ಸೋಲು ಉಂಟಾಗಿದೆ. ಈ ಕುರಿತು ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯಿಸುತ್ತಿದ್ದಾರೆ.
ಇದನ್ನೂ ಓದಿ: ಸುದೀಪ್, ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ, ಜನ ದನಿ ಎದುರಿಸಲು ತಯಾರಾಗಿ: ಪ್ರಕಾಶ್ ರಾಜ್
ರಾಹುಲ್ ಗಾಂಧಿಗೆ ಕಮಲ್ ಹಾಸನ್ ಅಭಿನಂದನೆ:
ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಭಾರಿಸಿದೆ. ಈ ನಡುವೆ ನಟ, ರಾಜಕಾರಣಿ ಕಮಲ್ ಹಾಸನ್ ಅವರು ರಾಹುಲ್ ಗಾಂಧಿಗೆ ಅಭಿನಂದನೆ ಸಲ್ಲಿಸಿದ್ದಾರೆ. ರಾಹುಲ್ ಗಾಂಧಿ ಅವರೊಟ್ಟಿಗೆ ನಡೆಯುತ್ತಿರುವ ತಮ್ಮ ಫೋಟೋ ಹಂಚಿಕೊಂಡಿರುವ ಕಮಲ್ ಹಾಸನ್, ‘ರಾಹುಲ್ ಗಾಂಧಿಯವರೇ.. ಈ ಅದ್ಭುತ ವಿಜಯಕ್ಕೆ ನಿಮಗೆ ಅಭಿನಂದನೆಗಳು. ಗಾಂಧೀಜಿಯಂತೆ, ನೀವು ಜನರ ಹೃದಯದ ಒಳಕ್ಕೆ ನಡೆದುಕೊಂಡು ಹೋದಿರಿ. ಸೌಮ್ಯವಾದ ರೀತಿಯಿಂದಲೇ ಜಗತ್ತಿನ ದೊಡ್ಡ ಶಕ್ತಿಗಳನ್ನು ಅಲುಗಿಸಬಹುದು ಎಂಬ ಅವರ ರೀತಿಯಲ್ಲಿಯೇ ಪ್ರೀತಿ ಮತ್ತು ನಮ್ರತೆಯಿಂದ ದೊಡ್ಡ ಶಕ್ತಿಗಳನ್ನು ಅಲುಗಾಡಿಸಬಹುದು ಎಂಬುದನ್ನು ಪ್ರದರ್ಶಿಸಿದ್ದೀರಿ. ಬಡಾಯಿ ಅಥವಾ ಬೊಗಳೆತನವಿಲ್ಲದೆ ನಿಮ್ಮ ವಿಶ್ವಾಸಾರ್ಹತೆಯಿಂದ ಜನರಿಗೆ ಹೊಸತನ್ನು ಪರಿಚಯಿಸಿದ್ದೀರಿ’ ಎಂದಿದ್ದಾರೆ.
Shri @RahulGandhi ji, Heartiest Congratulations for this significant victory!
Just as Gandhiji, you walked your way into peoples hearts and as he did you demonstrated that in your gentle way you can shake the powers of the world -with love and humility. Your credible and… pic.twitter.com/0LnC5g4nOm
— Kamal Haasan (@ikamalhaasan) May 13, 2023
‘ವಿಭಜನೆಯನ್ನು, ವಿಭಜಕರನ್ನು ತಿರಸ್ಕರಿಸುತ್ತಾರೆ ಎಂದು ಕರ್ನಾಟಕದ ಜನರನ್ನು ನೀವು ನಂಬಿದ್ದೀರಿ. ಅವರು ನಿಮ್ಮ ಮೇಲೆ ನಂಬಿಕೆ ಇರಿಸುವ ಮೂಲಕ ಒಗ್ಗಟ್ಟಿನಿಂದ ಪ್ರತಿಕ್ರಿಯೆ ನೀಡಿದ್ದಾರೆ. ಗೆಲುವಿಗಾಗಿ ಮಾತ್ರವಲ್ಲದೆ ಗೆಲುವಿನ ವಿಧಾನಕ್ಕೂ ಅಭಿನಂದನೆಗಳು’ ಎಂದಿದ್ದಾರೆ ಕಮಲ್ ಹಾಸನ್. ಕೋಮು ವಿಷಯಗಳು, ದ್ವೇಷದ ವಿಷಯಗಳನ್ನು ಎಳೆದು ತರದೆ ಗಂಭೀರವಾಗಿ ಚುನಾವಣೆ ಎದುರಿಸಿ ಕಾಂಗ್ರೆಸ್ ಗೆಲುವು ಸಾಧಿಸಿದೆ ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.