ಶ್ರೀಲಂಕಾಕ್ಕೆ ಹೊರಟ ಪ್ರಶಾಂತ್ ನೀಲ್ ಮತ್ತು ಜೂ ಎನ್​​ಟಿಆರ್

Prashanth Neel and Jr NTR: ಇದೀಗ ಜೂ ಎನ್​​ಟಿಆರ್ ನಟನೆಯ ‘ಡ್ರ್ಯಾಗನ್’ ಸಿನಿಮಾ ಚಿತ್ರೀಕರಣವನ್ನು ನೀಲ್ ಮಾಡುತ್ತಿದ್ದು, ಈ ಸಿನಿಮಾಕ್ಕಾಗಿ ತಮ್ಮ ಹಳೆಯ ಪದ್ಧತಿಗಳನ್ನು ಮುರಿದಿದ್ದಾರೆ ಪ್ರಶಾಂತ್ ನೀಲ್. ‘ಡ್ರ್ಯಾಗನ್’ ಸಿನಿಮಾಕ್ಕಾಗಿ ಪ್ರಶಾಂತ್ ನೀಲ್ ವಿದೇಶಗಳನ್ನು ಸುತ್ತುತ್ತಿದ್ದಾರೆ. ಈಗಾಗಲೇ ಒಂದು ದೇಶಕ್ಕೆ ಹೋಗಿ ಬಂದಿರುವ ನೀಲ್ ಮತ್ತು ಎನ್​​ಟಿಆರ್, ಈಗ ಶ್ರೀಲಂಕಾದತ್ತ ಮುಖ ಮಾಡಿದ್ದಾರೆ.

ಶ್ರೀಲಂಕಾಕ್ಕೆ ಹೊರಟ ಪ್ರಶಾಂತ್ ನೀಲ್ ಮತ್ತು ಜೂ ಎನ್​​ಟಿಆರ್
Dragon

Updated on: Jun 09, 2026 | 11:21 AM

ಪ್ರಶಾಂತ್ ನೀಲ್ (Prashanth Neel) ಸಾಮಾನ್ಯವಾಗಿ ತಮ್ಮ ಸಿನಿಮಾಗಳನ್ನು ಸೆಟ್​​ಗಳಲ್ಲಿಯೇ ಚಿತ್ರೀಕರಿಸುತ್ತಾರೆ. ಅವರು ಚಿತ್ರೀಕರಣಕ್ಕಾಗಿ ಬೇರೆ ಬೇರೆ ಸ್ಥಳಗಳಿಗೆ ಹೋಗುವುದು ಬಹಳ ಕಡಿಮೆ. ಅದರಲ್ಲೂ ವಿದೇಶದಲ್ಲಿ ಚಿತ್ರೀಕರಣವೆಂದರೆ ಅವರಿಗೆ ಆಗದು. ಇದೀಗ ಜೂ ಎನ್​​ಟಿಆರ್ ನಟನೆಯ ‘ಡ್ರ್ಯಾಗನ್’ ಸಿನಿಮಾ ಚಿತ್ರೀಕರಣವನ್ನು ನೀಲ್ ಮಾಡುತ್ತಿದ್ದು, ಈ ಸಿನಿಮಾಕ್ಕಾಗಿ ತಮ್ಮ ಹಳೆಯ ಪದ್ಧತಿಗಳನ್ನು ಮುರಿದಿದ್ದಾರೆ ಪ್ರಶಾಂತ್ ನೀಲ್. ‘ಡ್ರ್ಯಾಗನ್’ ಸಿನಿಮಾಕ್ಕಾಗಿ ಪ್ರಶಾಂತ್ ನೀಲ್ ವಿದೇಶಗಳನ್ನು ಸುತ್ತುತ್ತಿದ್ದಾರೆ. ಈಗಾಗಲೇ ಒಂದು ದೇಶಕ್ಕೆ ಹೋಗಿ ಬಂದಿರುವ ನೀಲ್ ಮತ್ತು ಎನ್​​ಟಿಆರ್, ಈಗ ಶ್ರೀಲಂಕಾದತ್ತ ಮುಖ ಮಾಡಿದ್ದಾರೆ.

ಪ್ರಶಾಂತ್ ನೀಲ್ ಅವರು ಜೂ ಎನ್​​ಟಿಆರ್ ಅವರನ್ನು ಕರೆದುಕೊಂಡು ಶ್ರೀಲಂಕಾದತ್ತ ಪಯಣ ಬೆಳೆಸಿದ್ದಾರೆ. ಅಲ್ಲಿ ಒಂದು ಪ್ರಮುಖ ಆಕ್ಷನ್ ದೃಶ್ಯದ ಜೊತೆಗೆ ಮಾದಕ ವಸ್ತು ಬೆಳೆಯುವ ಗುಂಪಿನ ದೃಶ್ಯಗಳನ್ನು ಸಹ ಚಿತ್ರೀಕರಣ ಮಾಡಲಿದ್ದಾರಂತೆ. ಶ್ರೀಲಂಕಾನಲ್ಲಿ ಬೀಚ್​​ಗಳ ಜೊತೆಗೆ ಪರ್ವತಶೃಂಗಗಳು, ದಟ್ಟ ಅರಣ್ಯ ಮತ್ತು ಸಾಕಷ್ಟು ಟೀ-ಕಾಫಿ ಪ್ಲಾಂಟೇಶನ್​​ಗಳು ಇದ್ದು, ಇದು ‘ಡ್ರ್ಯಾಗನ್’ ಸಿನಿಮಾದ ಚಿತ್ರೀಕರಣಕ್ಕೆ ಸೂಕ್ತವೆಂಬ ಕಾರಣಕ್ಕೆ ನೀಲ್, ಶ್ರೀಲಂಕಾದತ್ತ ಹೊರಟಿದ್ದಾರೆ.

ನೀಲ್ ಸಾಮಾನ್ಯವಾಗಿ ಸೆಟ್ಟುಗಳಲ್ಲಿ ಚಿತ್ರೀಕರಣ ಮಾಡುತ್ತಾರೆ. ಅಲ್ಲದೆ, ಅವರು ಹೆಣೆಯುವ ಕತೆಗಳು ಸಹ ಬಹುತೇಕ ಒಂದೇ ಸ್ಥಳದಲ್ಲಿ ಸ್ಥಿತವಾಗಿರುವ ವ್ಯಕ್ತಿಗಳ ಕುರಿತಾಗಿರುತ್ತದೆ. ಆದರೆ ಈ ಬಾರಿ ‘ಡ್ರ್ಯಾಗನ್’ನಲ್ಲಿ ಅವರು ಮಾದಕ ವಸ್ತು ‘ಉದ್ಯಮ’ದ ಕುರಿತು ಕತೆ ಹೇಳುತ್ತಿದ್ದಾರೆ. ಹಾಗಾಗಿ ಸೆಟ್​​ನಲ್ಲಿ ಅಲ್ಲದೆ ನಿಜವಾದ ಲೊಕೇಶನ್​​ಗಳಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಮತ್ತೊಂದು ಆಕ್ಷನ್ ದೃಶ್ಯದ ಚಿತ್ರೀಕರಣಕ್ಕಾಗಿ ಜೋರ್ಡನ್​​ಗೆ ಹೋಗಿದ್ದರು ನೀಲ್ ಮತ್ತು ಜೂ ಎನ್​​ಟಿಆರ್. ಜೋರ್ಡನ್​​ನ ಮರು ಭೂಮಿಯಲ್ಲಿ ಅದ್ಧೂರಿ ಆಕ್ಷನ್ ದೃಶ್ಯದ ಚಿತ್ರೀಕರಣದಲ್ಲಿ ಜೂ ಎನ್​​ಟಿಆರ್ ಭಾಗಿ ಆಗಿದ್ದರಂತೆ. ಈಗ ಜೋರ್ಡನ್ ಬಳಿಕ ಶ್ರೀಲಂಕಾಕ್ಕೆ ತೆರಳಿದೆ ಚಿತ್ರತಂಡ.

ಇದನ್ನೂ ಓದಿ:‘ಧುರಂಧರ್’ ನೋಡಿ ‘ಡ್ರ್ಯಾಗನ್’ ಕತೆ ಬದಲಾಯಿಸಿದರೇ ಪ್ರಶಾಂತ್ ನೀಲ್?

‘ಡ್ರ್ಯಾಗನ್’ ಸಿನಿಮಾ ನೀಲ್ ಅವರ ನಿರ್ದೇಶನದ ಐದನೆ ಸಿನಿಮಾ ಆಗಿದ್ದು, ಈ ಹಿಂದಿನ ಸಿನಿಮಾಗಳಿಗಿಂತಲೂ ಹೆಚ್ಚು ರಿಚ್ ಆಗಿ ಮತ್ತು ಹೆಚ್ಚು ಆಕ್ಷನ್ ಭರಿತವಾಗಿ ನಿರ್ದೇಶಿಸುತ್ತಿದ್ದಾರೆ. ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಟೀಸರ್​​ನಲ್ಲಿ ಸಿನಿಮಾನಲ್ಲಿರುವ ದುಷ್ಟ ಕೂಟವನ್ನು ಮತ್ತು ಅದರ ನಾಯಕನಂತಿರುವ ಜೂ ಎನ್​​ಟಿಆರ್ ಪಾತ್ರವನ್ನು ಖಡಕ್ ಆಗಿ ತೋರಿಸಿದ್ದಾರೆ. ಸಿನಿಮಾನಲ್ಲಿ ಜೂ ಎನ್​​ಟಿಆರ್ ಜೊತೆಗೆ ಕನ್ನಡತಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಬಾಲಿವುಡ್ ನಟ ಅನಿಲ್ ಕಪೂರ್ ಪವರ್​​ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಬಿಜು ಮೆನನ್, ಆಶುತೋಶ್ ರಾಣಾ, ಖುಷ್ಬು ಸುಂದರ್ ಅವರುಗಳು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us