ಎರಡು ಪಾರ್ಟ್​ನಲ್ಲಿ ಬರಲಿದೆ ನೀಲ್​-ಜೂ. ಎನ್​ಟಿಆರ್ ಸಿನಿಮಾ? ‘ಕೆಜಿಎಫ್ 3’ ಕಥೆ ಏನು?

| Updated By: ರಾಜೇಶ್ ದುಗ್ಗುಮನೆ

Updated on: Mar 26, 2024 | 9:30 AM

ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್’ ಎರಡು ಪಾರ್ಟ್​ನಲ್ಲಿ ಮೂಡಿ ಬಂದಿದೆ. ಮೂರನೇ ಪಾರ್ಟ್ ಕೂಡ ಸಿದ್ಧಗೊಳ್ಳಲಿದೆ. ಅದೇ ರೀತಿ ಜೂನಿಯರ್ ಎನ್​ಟಿಆರ್ ಜೊತೆ ಅವರು ಮಾಡಲಿರುವ ಸಿನಿಮಾ ಕೂಡ ಎರಡು ಪಾರ್ಟ್​ನಲ್ಲಿ ರಿಲೀಸ್ ಆಗಲಿದೆ.

ಎರಡು ಪಾರ್ಟ್​ನಲ್ಲಿ ಬರಲಿದೆ ನೀಲ್​-ಜೂ. ಎನ್​ಟಿಆರ್ ಸಿನಿಮಾ? ‘ಕೆಜಿಎಫ್ 3’ ಕಥೆ ಏನು?
ಜೂನಿಯರ್ ಎನ್​ಟಿಆರ್- ಪ್ರಶಾಂತ್ ನೀಲ್
Follow us on

ಇತ್ತೀಚೆಗೆ ಸಿನಿಮಾಗಳನ್ನು ಎರಡು ಪಾರ್ಟ್​ನಲ್ಲಿ ರಿಲೀಸ್ ಮಾಡೋ ಟ್ರೆಂಡ್ ಜೋರಾಗಿದೆ. ಹಲವು ಸಿನಿಮಾಗಳನ್ನು ಎರಡು ಪಾರ್ಟ್​ಗಳಲ್ಲಿ ರಿಲೀಸ್ ಮಾಡಲಾಗುತ್ತಿದೆ. ಮೊದಲಿಗೆ ‘ಬಾಹುಬಲಿ’ ಎರಡು ಪಾರ್ಟ್​ನಲ್ಲಿ ಬಂತು. ಆ ಬಳಿಕ ‘ಕೆಜಿಎಫ್’ (KGF), ‘ಪುಷ್ಪ’ ಸೇರಿ ಅನೇಕ ಸಿನಿಮಾಗಳು ಈ ಟ್ರೆಂಡ್​ನ ಫಾಲೋ ಮಾಡಿವೆ. ಒಂದು ಕಥೆಯನ್ನು ವಿಸ್ತಾರವಾಗಿ ಹೇಳಲು ಇದು ಹೆಚ್ಚು ಸಹಕಾರಿ. ಈಗ ಈ ಸಾಲಿಗೆ ಮತ್ತೊಂದು ಸಿನಿಮಾ ಸೇರ್ಪಡೆ ಆಗೋ ಸೂಚನೆ ಸಿಕ್ಕಿದೆ. ಜೂನಿಯರ್ ಎನ್​ಟಿಆರ್ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಕೂಡ ಎರಡು ಪಾರ್ಟ್​ನಲ್ಲಿ ರಿಲೀಸ್ ಆಗಲಿದೆ ಎನ್ನಲಾಗಿದೆ.

ಜೂನಿಯರ್ ಎನ್​ಟಿಆರ್ ಅವರು ಈಗಾಗಲೇ ‘ದೇವರ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಫ್ಯಾನ್ಸ್​ಗೆ ಹೆಚ್ಚು ನಿರೀಕ್ಷೆ ಇದೆ. ಈ ಸಿನಿಮಾ ಕೂಡ ಎರಡು ಪಾರ್ಟ್​ನಲ್ಲಿ ರಿಲೀಸ್ ಆಗಲಿದೆ. ಈ ಆ್ಯಕ್ಷನ್ ಸಿನಿಮಾದ ಸೆಟ್​ನ ಫೋಟೋಗಳು ಲೀಕ್ ಆಗುತ್ತಿವೆ. ಹೀಗಿರುವಾಗಲೇ ಹೊಸ ಸುದ್ದಿ ಒಂದು ಹರಿದಾಡಿದೆ. ಪ್ರಶಾಂತ್ ನೀಲ್ ಜೊತೆ ಅವರು ಮಾಡುತ್ತಿರುವ ಸಿನಿಮಾ ಕೂಡ ಎರಡು ಪಾರ್ಟ್​ನಲ್ಲಿ ಬರಲಿದೆಯಂತೆ.

ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್’ ಎರಡು ಪಾರ್ಟ್​ನಲ್ಲಿ ಮೂಡಿ ಬಂದಿದೆ. ಮೂರನೇ ಪಾರ್ಟ್ ಕೂಡ ಸಿದ್ಧಗೊಳ್ಳಲಿದೆ. ಅದೇ ರೀತಿ ‘ಸಲಾರ್’ ಸಿನಿಮಾದ ಒಂದು ಪಾರ್ಟ್ ರಿಲೀಸ್ ಆಗಿದ್ದು, ಎರಡನೇ ಪಾರ್ಟ್​ನ ಕೆಲಸ ಇನ್ನಷ್ಟೇ ಆರಂಭ ಆಗಬೇಕಿದೆ. ಅದೇ ರೀತಿ ಜೂನಿಯರ್ ಎನ್​ಟಿಆರ್ ಜೊತೆ ಅವರು ಮಾಡಲಿರುವ ಸಿನಿಮಾ ಕೂಡ ಎರಡು ಪಾರ್ಟ್​ನಲ್ಲಿ ರಿಲೀಸ್ ಆಗಲಿದೆ.

ಜೂನಿಯರ್ ಎನ್​ಟಿಆರ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರ ದೊಡ್ಡ ಬಜೆಟ್​ನಲ್ಲಿ ಸಿದ್ಧವಾಗುತ್ತಿದೆ. ಮೊದಲ ಪಾರ್ಟ್​ ರಿಲೀಸ್​ ಆದ ಬಳಿಕ ಎರಡನೇ ಪಾರ್ಟ್ ಶೂಟ್ ಮಾಡಲು ಪ್ರಶಾಂತ್ ನೀಲ್ ನಿರ್ಧರಿಸಿದ್ದಾರೆ. ಇದನ್ನು ಕೇವಲ ಸೆಟ್​ನಲ್ಲಿ ಶೂಟ್ ಮಾಡದೇ 10ಕ್ಕೂ ಅಧಿಕ ದೇಶಗಳಲ್ಲಿ ಇದನ್ನು ಶೂಟ್ ಮಾಡುವ ಆಲೋಚನೆ ಪ್ರಶಾಂತ್ ನೀಲ್ ಅವರಿಗೆ ಇದೆ.

ಇದನ್ನೂ ಓದಿ: ‘ಪ್ರಶಾಂತ್ ನೀಲ್ ಮಾತು ಟಚ್ ಆಯ್ತು’; ತಮ್ಮ ಬಗ್ಗೆ ಮಾತನಾಡಿದ ನಿರ್ದೇಶಕನಿಗೆ ಉಪೇಂದ್ರ ಧನ್ಯವಾದ

ಪ್ರಶಾಂತ್ ನೀಲ್ ಅವರು ‘ಕೆಜಿಎಫ್ 3’ ಕೆಲಸಗಳಲ್ಲೂ ತೊಡಗಿಕೊಳ್ಳಬೇಕಿದೆ. ಆದರೆ, ಸದ್ಯಕ್ಕಂತೂ ಈ ಸಿನಿಮಾ ಸೆಟ್ಟೇರೋದು ಅನುಮಾನ ಎಂದು ಹೇಳಲಾಗುತ್ತಿದೆ. ಪ್ರಶಾಂತ್ ನೀಲ್ ಅವರು ‘ಸಲಾರ್​’ ಸಿನಿಮಾದ ಎರಡನೇ ಪಾರ್ಟ್​ ಕೆಲಸಗಳಲ್ಲೂ ತೊಡಗಿಕೊಳ್ಳಬೇಕಿದೆ. ಈ ಚಿತ್ರದ ಕೆಲಸಗಳು ಶುರುವಾಗೋದು ಯಾವಾಗ ಎನ್ನುವ ಪ್ರಶ್ನೆ ಮೂಡಿದೆ.  ಯಶ್ ಅವರು ಸದ್ಯ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಶೂಟಿಂಗ್ ಗೋವಾದಲ್ಲಿ ನಡೆಯುತ್ತಿದೆ. ಈ ಸಿನಿಮಾ ರಿಲೀಸ್ ಆದ ಬಳಿಕ ‘ಕೆಜಿಎಫ್ 3’ ಸೆಟ್ಟೇರಲಿದೆಯೇ ಎನ್ನುವ ಪ್ರಶ್ನೆಯೂ ಅಭಿಮಾನಿಗಳಲ್ಲಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ