ಕಾಪಿ ಹೊಡೆದು ಡಿಬಾರ್​ ಆಗಿದ್ದಕ್ಕೆ ಕೋರ್ಟ್ ಮೆಟ್ಟಿಲೇರಿದ್ದ ಪ್ರಶಾಂತ್​ ಸಂಬರಗಿ

|

Updated on: Mar 26, 2021 | 7:29 PM

ನಾನು ಪರೀಕ್ಷೆಯಲ್ಲಿ ಕಾಪಿ ಮಾಡೇ ಇಲ್ಲ ಎಂದು ಕೋರ್ಟ್​ಗೆ ಚಾಲೆಂಜ್​ ಮಾಡಿದ್ದೆ. ಇದುವೇ ಕೋರ್ಟ್​ನಲ್ಲಿ ನನ್ನ ಮೊದಲ ಪ್ರಕರಣ ಎಂದು ಪ್ರಶಾಂತ್​ ಹೇಳುತ್ತಿದ್ದಂತೆ ಎಲ್ಲರೂ ಚಪ್ಪಾಳೆ ಹೊಡೆದರು.

ಕಾಪಿ ಹೊಡೆದು ಡಿಬಾರ್​ ಆಗಿದ್ದಕ್ಕೆ ಕೋರ್ಟ್ ಮೆಟ್ಟಿಲೇರಿದ್ದ ಪ್ರಶಾಂತ್​ ಸಂಬರಗಿ
ಪ್ರಶಾಂತ್​ ಸಂಬರಗಿ
Follow us on

ಬಿಗ್​ ಬಾಸ್​ ಮನೆಯಲ್ಲಿ ಮಾರ್ಚ್​ 25ರ ಎಪಿಸೋಡ್​ನಲ್ಲಿ ಎಲ್ಲರೂ ತಾವು ಅನುಭವಿಸಿದ ಕಷ್ಟದ ಬಗ್ಗೆ ಹೇಳಿಕೊಂಡಿದ್ದರು. ಪ್ರತಿಯೊಬ್ಬರ ಕಥೆಗಳು ವೀಕ್ಷಕರಿಗೆ ಕಣ್ಣೀರು ತರಿಸಿದ್ದವು. ಮನೆಯಲ್ಲಿರುವ 14 ಸದಸ್ಯರ ಪೈಕಿ ಪ್ರಶಾಂತ್​ ಸಂಬರಗಿ ಮಾತ್ರ ತಮ್ಮ ಜೀವನದಲ್ಲಿ ನಡೆದ ವಿಚಿತ್ರ ಘಟನೆ ಬಗ್ಗೆ ಹೇಳಿಕೊಂಡರು. ಈ ಕಥೆ ಕೇಳಿ ಮನೆ ಮಂದಿಯೆಲ್ಲ ಬಿದ್ದು ಬಿದ್ದು ನಕ್ಕಿದ್ದಾರೆ. ಏಕೆಂದರೆ, ಪ್ರಶಾಂತ್ ಸಂಬರಗಿ ಪಿಯುಸಿ ಪರೀಕ್ಷೆ ಬರೆಯುವಾಗ ಹೆಚ್ಚು ಮಾರ್ಕ್ಸ್​ ಗಳಿಸ ಬೇಕು ಎಂದು ​ಕಾಪಿ ಹೊಡೆದು ಡಿಬಾರ್​ ಆಗಿದ್ದು ಮಾತ್ರವಲ್ಲ, ಕೋರ್ಟ್​ಗೆ ಮೇಲ್ಮನವಿ ಕೂಡ ಸಲ್ಲಿಕೆ ಮಾಡಿದ್ದರಂತೆ.

ವೇದಿಕೆ ಮೇಲೆ ಬಂದು ಮಾತನಾಡಿರುವ ಪ್ರಶಾಂತ್ ಸಂಬರಗಿ, ನನ್ನ ಗುಟ್ಟುಗಳು ಅನೇಕ ಇವೆ. 1994-95ರಲ್ಲಿ ಸೆಕೆಂಡ್ ಪಿಯುಸಿ ಪರೀಕ್ಷೆ ಬರೆಯುವಾಗ ಕಾಪಿ ಹೊಡೆದು ಡಿಬಾರ್ ಆದ ವ್ಯಕ್ತಿ ನಾನು. ಡಿಬಾರ್​ ಆಗಿದ್ದು ಮಾತ್ರವಲ್ಲ ಈ ಪ್ರಕರಣವನ್ನು ಕೋರ್ಟ್​​ನಲ್ಲಿ ಚಾಲೆಂಜ್​ ಮಾಡಿದ್ದೆ ಎಂದು ಅವರು ಮಾತು ಆರಂಭಿಸಿದ್ದಾರೆ.

ನಾನು ಪರೀಕ್ಷೆಯಲ್ಲಿ ಕಾಪಿ ಮಾಡೇ ಇಲ್ಲ ಎಂದು ಕೋರ್ಟ್​ಗೆ ಚಾಲೆಂಜ್​ ಮಾಡಿದ್ದೆ. ಇದುವೇ ಕೋರ್ಟ್​ನಲ್ಲಿ ನನ್ನ ಮೊದಲ ಪ್ರಕರಣ ಎಂದು ಪ್ರಶಾಂತ್​ ಹೇಳುತ್ತಿದ್ದಂತೆ ಎಲ್ಲರೂ ಚಪ್ಪಾಳೆ ಹೊಡೆದರು. ಮಾವ ನೀವು ಗ್ರೇಟ್​ ಎಂದು ಹರ್ಷೋದ್ಘಾರ ವ್ಯಕ್ತಪಡಿಸಿದರು.

ಡಿಬಾರ್​ ಆದ ನಂತರ ಏನಾಯ್ತು ಎನ್ನುವ ಬಗ್ಗೆಯೂ ಪ್ರಶಾಂತ್​ ವಿವರಿಸಿದ್ದಾರೆ. ಈ ಎಲ್ಲಾ ವಿಚಾರಗಳನ್ನು ನಾನು ಕ್ಲಿಯರ್​ ಮಾಡಿಕೊಂಡು ಡಿಗ್ರಿಗೆ ಬಂದಿದ್ದೆ. ಆಗ ನನ್ನ ಪಿಯುಸಿ ಕ್ಲಾಸ್​ಮೇಟ್ಸ್​ ಅಂತಿಮ ವರ್ಷದ ಪದವಿಯಲ್ಲಿದ್ರು. ಹೀಗಾಗಿ ಅವರೆಲ್ಲ ನನಗೆ ಡ್ಯಾಡಿ ಅಂತಿದ್ರು ಎಂದು ನಕ್ಕರು. ಅಲ್ಲದೆ, ಈ ಗುಟ್ಟು ನಿಮ್ಮಲ್ಲೇ ಇರಲಿ ಎಂದು ಕೂಡ ಹೇಳಿದರು.

ಬಿಗ್​ ಬಾಸ್​ ಮನೆಯಲ್ಲಿ ತುಪ್ಪ ಖಾಲಿ ಮಾಡಿದ್ದ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು. ಪ್ರಶಾಂತ್​ ತುಪ್ಪ ತಿಂದೂ ಕೂಡ ತಾಯಾಣೆ ನಾನು ತುಪ್ಪ ತಿಂದಿಲಲ್ಲ ಎಂದು ಆಣೆ ಪ್ರಮಾಣ ಮಾಡಿದ್ದರು. ಇದೇ ವಿಚಾರವನ್ನು ಇದಕ್ಕೆ ಹೋಲಿಕೆ ಮಾಡಿ ಅರವಿಂದ್ ಅವರು ಪ್ರಶಾಂತ್​ ಕಾಲೆಳೆದಿದ್ದಾರೆ. ಈಗ ಸ್ಟೇಜ್​ನಿಂದ ಇಳಿದ ನಂತರ ಪ್ರಶಾಂತ್​ ನಾನು ತಾಯಾಣೆ ಕಾಪಿ ಹೊಡೆದಿಲ್ಲ ಎನ್ನುತ್ತಾರೆ ಎಂದರು.

ಇದನ್ನೂ ಓದಿ: ನನ್ನ ಬಾಯಿ ಬಚ್ಚಲು ಮನೆ ಇದ್ದಂಗೆ; ಮಂಜು ಪಾವಗಡ ಹೀಗೆ ಹೇಳಿದ್ದು ಯಾಕೆ?

‘ಸ್ಕರ್ಟ್​ ಹಾಕ್ಕೊಂಡು ಮಲಗಿದ್ದಾಗ ನಮ್ಮ ತಂದೆಯೇ ಕೆಟ್ಟದಾಗಿ ನಡೆದುಕೊಂಡ್ರು’: ಬಿಗ್​ ಬಾಸ್​ ಚಂದ್ರಕಲಾ ಬದುಕಿನ ಕಹಿ ಘಟನೆ!