AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೂಗಲ್, ಫೇಸ್​​ಬುಕ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದ ಪ್ರೀತಿ ಜಿಂಟಾ

Preity Zinta: ರಶ್ಮಿಕಾ, ಈಗ ರುಕ್ಮಿಣಿ ಸೇರಿದಂತೆ ಹಲವಾರು ನಟಿಯರಿಗೆ ಡೀಪ್​​ಫೇಕ್ ವಿಡಿಯೋಗಳು ಕಾಟ ಕೊಟ್ಟಿವೆ. ಕೆಲವು ನಟಿಯರು ಈ ಬಗ್ಗೆ ಸೈಬರ್ ಪೊಲೀಸರಿಗೆ ದೂರು ನೀಡಿ ಸುಮ್ಮನಾಗಿದ್ದಾರೆ. ಆದರೆ ನಟಿ ಪ್ರೀತಿ ಜಿಂಟಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗುತ್ತಿದ್ದು, ಗೂಗಲ್ ಮತ್ತು ಫೇಸ್​​ಬುಕ್ (ಮೆಟಾ) ವಿರುದ್ಧವೇ ದೂರು ನೀಡಲು ಸಜ್ಜಾಗಿದ್ದಾರೆ. ಅವರ ಈ ಸಾಹಸಕ್ಕೆ ನ್ಯಾಯಾಲಯದ ಅನುಮತಿಯೂ ಸಹ ದೊರಕಿದೆ.

ಗೂಗಲ್, ಫೇಸ್​​ಬುಕ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದ ಪ್ರೀತಿ ಜಿಂಟಾ
Priety Zinta
ಮಂಜುನಾಥ ಸಿ.
|

Updated on:Jun 18, 2026 | 1:17 PM

Share

ನಟಿಯರಿಗೆ ಡೀಫ್​​ಫೇಕ್ ಕಾಟ ಇತ್ತೀಚೆಗೆ ಬಹಳ ಹೆಚ್ಚಾಗಿದೆ. ಹಲವಾರು ನಟಿಯರು ಡೀಪ್​​ಫೇಕ್ ಕಾಟಕ್ಕೆ ಬಲಿಯಾಗಿದ್ದಾರೆ. ರಶ್ಮಿಕಾ, ಈಗ ರುಕ್ಮಿಣಿ ಸೇರಿದಂತೆ ಹಲವಾರು ನಟಿಯರಿಗೆ ಡೀಪ್​​ಫೇಕ್ ವಿಡಿಯೋಗಳು ಕಾಟ ಕೊಟ್ಟಿವೆ. ಕೆಲವು ನಟಿಯರು ಈ ಬಗ್ಗೆ ಸೈಬರ್ ಪೊಲೀಸರಿಗೆ ದೂರು ನೀಡಿ ಸುಮ್ಮನಾಗಿದ್ದಾರೆ. ಆದರೆ ನಟಿ ಪ್ರೀತಿ ಜಿಂಟಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗುತ್ತಿದ್ದು, ಗೂಗಲ್ ಮತ್ತು ಫೇಸ್​​ಬುಕ್ (ಮೆಟಾ) ವಿರುದ್ಧವೇ ದೂರು ನೀಡಲು ಸಜ್ಜಾಗಿದ್ದಾರೆ. ಅವರ ಈ ಸಾಹಸಕ್ಕೆ ನ್ಯಾಯಾಲಯದ ಅನುಮತಿಯೂ ಸಹ ದೊರಕಿದೆ.

ನಟಿ ಪ್ರೀತಿ ಜಿಂಟಾ ಅವರು ತಮ್ಮ ವೈಯಕ್ತಿಕ ಫೋಟೋಗಳು ಮತ್ತು ವಿಡಿಯೋಗಳನ್ನು ಬಳಸಿ ಎಐ ಮೂಲಕ ಡೀಪ್‌ಫೇಕ್ ವಿಡಿಯೋಗಳನ್ನು ಹರಿಬಿಡಲಾಗಿತ್ತು. ಗೂಗಲ್, ಫೇಸ್​​ಬುಕ್ (ಮೆಟಾ ಪ್ಲಾಟ್‌ಫಾರ್ಮ್ಸ್) ಸೇರಿದಂತೆ ಹಲವು ವೆಬ್‌ಸೈಟ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮ ವ್ಯಕ್ತಿತ್ವ ಹಕ್ಕುಗಳು, ಹಕ್ಕುಸ್ವಾಮ್ಯ ಮತ್ತು ಖ್ಯಾತಿಗೆ ಧಕ್ಕೆ ಉಂಟಾಗಿದೆ ಎಂದು ದೂರಿ, ಈ ಕುರಿತು ಸಮಗ್ರ ಸಿವಿಲ್ ಮೊಕದ್ದಮೆ ಹೂಡಲು ನ್ಯಾಯಾಲಯವು ನಟಿಗೆ ಅನುಮತಿ ಕೋರಿದ್ದರು, ಅಂತೆಯೇ ನ್ಯಾಯಾಲಯವು ಅವರಿಗೆ ಅನುಮತಿ ನೀಡಿದೆ.

ನಟಿ ಪ್ರೀತಿ ಜಿಂಟಾ, ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳ ಪ್ರಕಾರ, ಅನೇಕ ಪ್ಲಾಟ್‌ಫಾರ್ಮ್‌ಗಳು ಮತ್ತು ವೆಬ್‌ಸೈಟ್‌ಗಳು ತಮ್ಮ ಅನುಮತಿಯಿಲ್ಲದೆ, ಕೃತಕ ಬುದ್ಧಿಮತ್ತೆಯ ಮೂಲಕ ಸೃಷ್ಟಿಸಲಾದ ಡೀಪ್‌ಫೇಕ್ ವಿಡಿಯೋಗಳು, ತಿರುಚಿದ ಚಿತ್ರಗಳು, ಮೀಮ್‌ಗಳು ಮತ್ತು ಚಾಟ್‌ಬಾಟ್ ವ್ಯಕ್ತಿತ್ವಗಳನ್ನು ಹಂಚಿಕೊಳ್ಳಲಾಗಿದೆ ಎಂದು ಪ್ರೀತಿ ಜಿಂಟಾ ಆರೋಪಿಸಿದ್ದಾರೆ.

ಇದನ್ನೂ ಓದಿ:ನಟಿ ಪ್ರೀತಿ ಜಿಂಟಾ ಮಾಡಿದರು ಜಗ ಮೆಚ್ಚುವ ಕಾರ್ಯ, ಭೇಷ್ ಎಂದ ಅಭಿಮಾನಿಗಳು

ಜೂನ್ 16 ರಂದು ನ್ಯಾಯಮೂರ್ತಿ ಅಭಯ್ ಅಹುಜಾ ಅವರ ಏಕಸದಸ್ಯ ಪೀಠದ ಮುಂದೆ ನಟಿಯ ಪರವಾಗಿ ವಾದ ಮಂಡಿಸಿದ ವಕೀಲ ರೋಹನ್ ಕದಮ್, ಪ್ರತಿವಾದಿಗಳು (ಗೂಗಲ್ ಮತ್ತು ಫೇಸ್​​ಬುಕ್) ನಟಿಯ ಡೀಪ್​​ಫೇಕ್ ಚಿತ್ರ, ವಿಡಿಯೋಗಳನ್ನು ವಿವಿಧ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿದ್ದಾರೆ ಎಂದು ತಿಳಿಸಿದರು. ಇಂತಹ ವಿಷಯಗಳು ತಮ್ಮ ಕಾನೂನುಬದ್ಧ ಹಕ್ಕುಗಳನ್ನು ಉಲ್ಲಂಘಿಸುತ್ತವೆ ಮತ್ತು ಸಾರ್ವಜನಿಕವಾಗಿ ತಮ್ಮ ಇಮೇಜ್‌ಗೆ ಹಾನಿ ಮಾಡುತ್ತಿವೆ ಎಂದು ನಟಿ ಪರ ವಕೀಲರು ವಾದಿಸಿದ್ದಾರೆ.

ಈ ರೀತಿ ತಿರುಚಿದ, ಸುಳ್ಳು ಚಿತ್ರ, ವಿಡಿಯೋಗಳನ್ನು ಹರಡುತ್ತಿರುವುದರಿಂದ ತಮ್ಮ ಖ್ಯಾತಿ ಮತ್ತು ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. ಈ ಮೊಕದ್ದಮೆಯು ಹಕ್ಕುಸ್ವಾಮ್ಯ ಕಾಯಿದೆಯಡಿ ತಮ್ಮ ನೈತಿಕ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸುತ್ತದೆ. ಈ ವಿವಾದಾತ್ಮಕ ವಿಷಯಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಜಾಗತಿಕವಾಗಿ ಹರಡಿರುವುದರಿಂದ, ಇದರ ಪರಿಣಾಮವು ತುಂಬಾ ವ್ಯಾಪಕವಾಗಿದೆ ಎಂದು ವಕೀಲ ಕದಮ್ ನ್ಯಾಯಾಲಯಕ್ಕೆ ತಿಳಿಸಿದರು. ಇದೀಗ ನಟಿಯೂ ಗೂಗಲ್ ಮತ್ತು ಫೇಸ್​​ಬುಕ್ ಸೇರಿದಂತೆ ಇನ್ನೂ ಕೆಲವು ವೆಬ್​​ಸೈಟ್​​ಗಳ ವಿರುದ್ಧ ದಾವೆ ಹೂಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:16 pm, Thu, 18 June 26

Follow Us