ಮಲಯಾಳಂನ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ‘ಪ್ರೇಮಲು’ (Premalu Movie) ಸೂಪರ್ ಹಿಟ್ ಆಗಿದೆ. ಫಹಾದ್ ಫಾಸಿಲ್ ನಿರ್ಮಾಣದ ಈ ಚಿತ್ರ ದೊಡ್ಡ ಮಟ್ಟದ ಗೆಲುವು ಕಂಡಿದೆ. ಇತ್ತೀಚೆಗೆ ಈ ಸಿನಿಮಾದ ಸಕಸ್ಸ್ ಇವೆಂಟ್ ನಡೆದಿದೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ರೂಪಾಯಿ ಬಾಚಿಕೊಂಡಿದ್ದೂ ಅಲ್ಲದೆ, ಒಟಿಟಿಯಲ್ಲೂ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಈಗ ಈ ಚಿತ್ರಕ್ಕೆ ಸೀಕ್ವೆಲ್ ಮಾಡುವ ಬಗ್ಗೆ ಸಕ್ಸಸ್ಮೀಟ್ನಲ್ಲಿ ಮಾಹಿತಿ ನೀಡಲಾಗಿದೆ.
‘ಪ್ರೇಮಲು’ ಸಿನಿಮಾದ ಸೀಕ್ವೆಲ್ಗೆ ‘ಪ್ರೇಮಲು 2’ ಎಂದು ಟೈಟಲ್ ಇಡಲಾಗಿದೆ. ಈ ಬಗ್ಗೆ ನಿರ್ದೇಶಕ ಗಿರಿಶ್ ಎಡಿ ಮಾಹಿತಿ ನೀಡಿದ್ದಾರೆ. ‘ಪ್ರೇಮಲು ಚಿತ್ರಕ್ಕಿಂತ ಹೆಚ್ಚಿನ ಫನ್ ಹಾಗೂ ಎನರ್ಜಿ’ ಸಿಗಲಿದೆ ಎಂದು ನಿರ್ದೇಶಕರು ಹೇಳಿದ್ದಾರೆ. ಈ ಸಿನಿಮಾ 2025ರಲ್ಲಿ ರಿಲೀಸ್ ಆಗಲಿದೆಯಂತೆ. ಈ ಚಿತ್ರದ ಪ್ರಮುಖ ನಿರ್ಮಾಪಕ ಫಹಾದ್ ಫಾಸಿಲ್ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಖಚಿತಪಡಿಸಿದ್ದಾರೆ.
ಪ್ರೇಮಲು ಸಿನಿಮಾ 2024ರ ಫೆಬ್ರವರಿ 9ರಂದು ರಿಲೀಸ್ ಆಯಿತು. ಈ ಚಿತ್ರವನ್ನು ಗಿರಿಶ್ ಎಡಿ ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ನಸ್ಲೆನ್ ಗಫೂರ್, ಮಮಿತಾ ಬೈಜು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಕಾಂಬಿನೇಷನ್ ಫ್ಯಾನ್ಸ್ಗೆ ಸಖತ್ ಇಷ್ಟ ಆಗಿದೆ. ಸಂಗೀತ್ ಪ್ರತಾಪ್, ಶ್ಯಾಮ್ ಮೋಹನ್, ಅಖಿಲಾ ಭಾರ್ಗವನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೇ ಪಾತ್ರವರ್ಗ ‘ಪ್ರೇಮಲು 2’ ಚಿತ್ರದಲ್ಲಿ ಮುಂದುವರಿಯಲಿದೆಯೇ ಎನ್ನುವ ಕುತೂಹಲ ಅಭಿಮಾನಿಗಳಿಗೆ ಮೂಡಿದೆ.
ಇದನ್ನೂ ಓದಿ: ‘ನಿನ್ನಿಂದ ಬೇಸತ್ತು ಹೋಗಿದ್ದೀನಿ’; ಫಹಾದ್ ಫಾಸಿಲ್ ವಿರುದ್ಧ ನಜ್ರಿಯಾ ಸಿಟ್ಟಾಗಿದ್ದೇಕೆ?
‘ಭಾವನಾ ಸ್ಟುಡಿಯೋಸ್’, ‘ಫಹಾದ್ ಫಾಸಿಲ್ ಆ್ಯಂಡ್ ಫ್ರೆಂಡ್ಸ್’ ಹಾಗೂ ವರ್ಕಿಂಗ್ ಕ್ಲಾಸ್ ಹೀರೋ’ ಬ್ಯಾನರ್ ಅಡಿಯಲ್ಲಿ ಫಹಾದ್ ಫಾಸಿಲ್, ದಿಲೀಶ್ ಪೋತನ್, ಶ್ಯಾಮ್ ಪುಷ್ಕರನ್ ಈ ಚಿತ್ರ ನಿರ್ಮಾಣ ಮಾಡಿದ್ದರು. ಈ ಚಿತ್ರಕ್ಕೆ ವಿಷ್ಣು ವಿಜಯ್ ಸಂಗೀತ ಸಂಯೋಜನೆ ಮಾಡಿದ್ದಾರೆ. 3 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾ 136 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಚಿತ್ರದಿಂದ ಫಹಾದ್ ಫಾಸಿಲ್ ದೊಡ್ಡ ಗೆಲುವು ಕಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ