‘ನಿನ್ನಿಂದ ಬೇಸತ್ತು ಹೋಗಿದ್ದೀನಿ’; ಫಹಾದ್ ಫಾಸಿಲ್ ವಿರುದ್ಧ ನಜ್ರಿಯಾ ಸಿಟ್ಟಾಗಿದ್ದೇಕೆ?

ಐಸ್​ಕ್ರೀಮ್ ಒಂದರ ಜಾಹೀರಾತಿನಲ್ಲಿ ಫಹಾದ್ ಹಾಗೂ ನಜ್ರಿಯಾ ಕಾಣಿಸಿಕೊಂಡಿದ್ದಾರೆ. ಸೆಲೆಬ್ರಿಟಿ ದಂಪತಿಗಳು ಜಾಹೀರಾತಿನಲ್ಲಿ ಕಾಣಿಸಿಕೊಂಡರೆ ಹೆಚ್ಚು ಜನರಿಗೆ ರೀಚ್ ಆಗುತ್ತದೆ ಎಂಬುದು ಬ್ರ್ಯಾಂಡ್​​ಗಳ ಆಲೋಚನೆ.

‘ನಿನ್ನಿಂದ ಬೇಸತ್ತು ಹೋಗಿದ್ದೀನಿ’; ಫಹಾದ್ ಫಾಸಿಲ್ ವಿರುದ್ಧ ನಜ್ರಿಯಾ ಸಿಟ್ಟಾಗಿದ್ದೇಕೆ?
ನಜ್ರಿಯಾ-ಫಹಾದ್
TV9kannada Web Team

| Edited By: Rajesh Duggumane

Sep 22, 2022 | 6:30 AM

ನಜ್ರಿಯಾ ನಜೀಮ್ (Nazriya Nazim) ಅವರು ಮಲಯಾಳಂನ ಬೇಡಿಕೆಯ ನಟಿ. ಅವರ ನಟನೆಗೆ, ಕ್ಯೂಟ್​ನೆಸ್​ಗೆ ಮನ ಸೋಲದವರೇ ಇಲ್ಲ. ‘ಬೆಂಗಳೂರು ಡೇಸ್​’ ಸಿನಿಮಾ (Bangalore Days Movie) ಮೂಲಕ ಅವರು ಕರ್ನಾಟಕಕ್ಕೂ ಹತ್ತಿರವಾದರು. ಸಹ ನಟ ಫಹಾದ್ ಫಾಸಿಲ್ ಅವರನ್ನೇ ಮದುವೆ ಆಗಿ ನಜ್ರಿಯಾ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಈ ಮಧ್ಯೆ ಇಬ್ಬರ ನಡುವೆ ಕಿತ್ತಾಟ ಆರಂಭ ಆಗಿದೆ! ‘ನನಗೆ ಹೇಳೋಕೆ ಏನೂ ಉಳಿದಿಲ್ಲ’ ಎಂದು ಫಹಾದ್ ಹೇಳಿದರೆ, ‘ನಿನ್ನಿಂದ ನಾನು ಬೇಸತ್ತು ಹೋಗಿದ್ದೇನೆ’ ಎಂದು ನಜ್ರಿಯಾ ಹೇಳಿದ್ದಾರೆ. ಇದೆಲ್ಲವೂ ಜಾಹೀರಾತಿಗಾಗಿ ಮಾಡಿದ ಡ್ರಾಮಾ ಅಷ್ಟೇ!

ಐಸ್​ಕ್ರೀಮ್ ಒಂದರ ಜಾಹೀರಾತಿನಲ್ಲಿ ಫಹಾದ್ ಹಾಗೂ ನಜ್ರಿಯಾ ಕಾಣಿಸಿಕೊಂಡಿದ್ದಾರೆ. ಸೆಲೆಬ್ರಿಟಿ ದಂಪತಿಗಳು ಜಾಹೀರಾತಿನಲ್ಲಿ ಕಾಣಿಸಿಕೊಂಡರೆ ಹೆಚ್ಚು ಜನರಿಗೆ ರೀಚ್ ಆಗುತ್ತದೆ ಎಂಬುದು ಬ್ರ್ಯಾಂಡ್​​ಗಳ ಆಲೋಚನೆ. ಈ ಕಾರಣಕ್ಕೆ ಸೆಲೆಬ್ರಿಟಿ ದಂಪತಿಗಳು ಜಾಹೀರಾತಿನಲ್ಲಿ ನಟಿದರೆ ದೊಡ್ಡ ಮೊತ್ತ ನೀಡಲಾಗುತ್ತದೆ. ಅದೇ ರೀತಿ ಫಹಾದ್ ಹಾಗೂ ನಜ್ರಿಯಾ ಕಾಣಿಸಿಕೊಂಡ ಅಡ್ವಟೈಸ್​​ಮೆಂಟ್​ ಎಲ್ಲರ ಗಮನ ಸೆಳೆದಿದೆ.

ಪಾರ್ಟಿ ಮುಗಿಸಿ ಇಬ್ಬರೂ ಕಾರಿನಲ್ಲಿ ಬಂದಿರುತ್ತಾರೆ. ‘ನಿನ್ನಲ್ಲಿ ಮಾತನಾಡೋಕೆ ಏನೂ ಉಳಿದಿಲ್ಲ’ ಎಂದು ಫಹಾದ್ ಹೇಳುತ್ತಾರೆ. ಇದಕ್ಕೆ ಸಿಟ್ಟಾಗುವ ನಜ್ರಿಯಾ ‘ಯಾವಾಗಲೂ ಮಾತನಾಡಬೇಡ’ ಎಂದು ಕೂಗಾಡುತ್ತಾರೆ. ಮನೆ ಒಳಗೆ ಎಂಟ್ರಿ ಕೊಡುತ್ತಿದ್ದಂತೆ ಫಹಾದ್ ಐಸ್​ಕ್ರೀಂ ಕೈಗೆತ್ತಿಕೊಳ್ಳುತ್ತಾರೆ. ಇಬ್ಬರ ನಡುವೆ ಜಗಳ ಮುಂದುವರಿದೇ ಇರುತ್ತದೆ. ಆದರೆ, ಫಹಾದ್ ಐಸ್​ಕ್ರೀಮ್ ಎಂಜಾಯ್ ಮಾಡುತ್ತಾ ಕೂರುತ್ತಾರೆ.

ಈ ಅಡ್ವಟೈಸ್​​ಮೆಂಟ್ ನೋಡಿದ ಅನೇಕರು ‘ಇದು ಬೆಂಗಳೂರೂ ಡೇಸ್​ ಸೀಕ್ವೆಲ್​ಗೆ ಸಿದ್ಧತೆಯೇ’ ಎಂದು ಪ್ರಶ್ನೆ ಮಾಡಿದ್ದಾರೆ. ‘ಬೆಂಗಳೂರು ಡೇಸ್​’ ಸಿನಿಮಾದಲ್ಲೂ ಇದೇ ರೀತಿಯ ಕಥೆ ಇದೆ. ಫಹಾದ್ ಹಾಗೂ ನಜ್ರಿಯಾ ಮದುವೆ ಆಗಿರುತ್ತಾರೆ. ಆದರೆ, ಇಬ್ಬರೂ ಹೆಚ್ಚು ಮಾತನಾಡುವುದೇ ಇಲ್ಲ. ಇಬ್ಬರ ಮಧ್ಯೆ ಯಾವಾಗಲೂ ಜಗಳ ಮಾತ್ರ ಇರುತ್ತದೆ. ಈ ಕಾರಣಕ್ಕೆ ಫ್ಯಾನ್ಸ್​​ಗೆ ಜಾಹೀರಾತು ‘ಬೆಂಗಳೂರು ಡೇಸ್​’ ಸಿನಿಮಾವನ್ನು ನೆನಪಿಸಿದೆ. ಸದ್ಯ ಈ ಜಾಹೀರಾತು ಸಾಕಷ್ಟು ಗಮನ ಸೆಳೆದಿದೆ.

ಇದನ್ನೂ ಓದಿ: ಫಹಾದ್ ಫಾಸಿಲ್​ಗೆ ಬರ್ತ್​​ಡೇ ವಿಶ್ ಮಾಡಿದ ಹೊಂಬಾಳೆ ಫಿಲ್ಮ್ಸ್​​; ಪವನ್​ ಕುಮಾರ್ ನಿರ್ದೇಶನ?

ಇದನ್ನೂ ಓದಿ

ಫಹಾದ್ ಫಾಸಿಲ್​ಗೆ ಸಾಕಷ್ಟು ಆಫರ್​ಗಳು ಸಿಗುತ್ತಿವೆ. ‘ಪುಷ್ಪ 2’ ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ವಿಕ್ರಮ್’ ಚಿತ್ರದಿಂದ ಅವರ ಜನಪ್ರಿಯತೆ ಹೆಚ್ಚಿದೆ. ಕನ್ನಡದ ಹೊಂಬಾಳೆ ಫಿಲ್ಮ್ಸ್​ ಜತೆ ಅವರು ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada