ಎರಡು ಬಾರಿ ಮೆಗಾಸ್ಟಾರ್ ಸಿನಿಮಾ ಅವಕಾಶ ನಿರಾಕರಿಸಿದ್ದ ಪೃಥ್ವಿರಾಜ್ ಸುಕುಮಾರನ್

|

Updated on: Mar 20, 2024 | 4:52 PM

Prithviraj Sukumaran: ಬಹುಭಾಷಾ ಬಟ ಪೃಥ್ವಿರಾಜ್ ಸುಕುಮಾರನ್, ಚಿರಂಜೀವಿ ಅವರೊಟ್ಟಿಗೆ ಕೆಲಸ ಮಾಡುವ ಅವಕಾಶವನ್ನು ಎರಡು ಬಾರಿ ಕಳೆದುಕೊಂಡಿದ್ದು ಹೇಗೆಂದು ಹೇಳಿಕೊಂಡಿದ್ದಾರೆ.

ಎರಡು ಬಾರಿ ಮೆಗಾಸ್ಟಾರ್ ಸಿನಿಮಾ ಅವಕಾಶ ನಿರಾಕರಿಸಿದ್ದ ಪೃಥ್ವಿರಾಜ್ ಸುಕುಮಾರನ್
Follow us on

ಪೃಥ್ವಿರಾಜ್ ಸುಕುಮಾರನ್ (prithviraj sukumaran) ಮಲಯಾಳಂ ಚಿತ್ರರಂಗದಿಂದ ಭಾರತೀಯ ಚಿತ್ರರಂಗಕ್ಕೆ ಸಿಕ್ಕ ಅದ್ಭುತ ಪ್ರತಿಭೆಗಳಲ್ಲಿ ಒಂದು. ಮಲಯಾಳಂ ಚಿತ್ರರಂಗದಲ್ಲಿ ಸ್ಟಾರ್ ಆಗಿರುವ ಪೃಥ್ವಿರಾಜ ಸುಕುಮಾರನ್, ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಅವರೇ ಹೇಳಿಕೊಂಡಿರುವಂತೆ ವಾರಕ್ಕೆ ಎರಡು ಮೂರು ಪರಭಾಷೆ ಅವಕಾಶಗಳು ಬರುತ್ತಲೇ ಇರುತ್ತವೆ ಆದರೆ ವಿಶೇಷ ಅನಿಸದ ಸಿನಿಮಾಗಳನ್ನು ಅವರು ಒಪ್ಪಿಕೊಳ್ಳುತ್ತಿಲ್ಲವಂತೆ. ಆದರೆ ತೆಲುಗಿನ ಸ್ಟಾರ್ ನಟ ಮೆಗಾಸ್ಟಾರ್ ಚಿರಂಜೀವಿ ಅವರೊಟ್ಟಿಗೆ ಕೆಲಸ ಮಾಡುವ ಅವಕಾಶ ಎರಡು ಬಾರಿ ಪೃಥ್ವಿರಾಜ್ ಸುಕುಮಾರನ್ ಗೆ ಸಿಕ್ಕಿತ್ತಂತೆ ಆದರೆ ಒಲ್ಲದ ಮನಸ್ಸಿನಿಂದಲೇ ಅವಕಾಶವನ್ನು ನಿರಾಕರಿಸಿದರಂತೆ ಪೃಥ್ವಿರಾಜ್.

ಕನ್ನಡದ ಕಿಚ್ಚ ಸುದೀಪ್ ನಟಿಸಿರುವ ಮೆಗಾಸ್ಟಾರ್ ಚಿರಂಜೀವಿ ನಾಯಕನಟರಾಗಿ ಕಾಣಿಸಿಕೊಂಡಿರುವ ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾದಲ್ಲಿ ನಟಿಸುವ ಅವಕಾಶ 2018 ರಲ್ಲಿ ಪೃಥ್ವಿರಾಜ್ ಸುಕುಮಾರನ್ ಅವರನ್ನು‌ ಅರಸಿ ಬಂದಿತ್ತಂತೆ. ಸ್ವತಃ ಚಿರಂಜೀವಿ ಅವರೇ ಪೃಥ್ವಿರಾಜ್ ಸುಕುಮಾರನ್ ಅವರಿಗೆ ಆಫರ್ ಕೊಟ್ಟಿದ್ದರಂತೆ. ಆದರೆ ಆಗ ‘ಆಡುಜೀವಿತಂ’ ಸಿನಿಮಾದ ಶೂಟಿಂಗ್ ಗಾಗಿ ಗಡ್ಡ ಬಿಟ್ಟು ತೂಕ ಇಳಿಸಿಕೊಂಡಿದ್ದ ಪೃಥ್ವಿರಾಜ್ ಸುಕುಮಾರನ್, ವಿಧಿ ಇಲ್ಲದೆ ಆ ಅವಕಾಶವನ್ನು ಕೈಬಿಟ್ಟರಂತೆ.

ಇದನ್ನೂ ಓದಿ:‘ಸಲಾರ್’ ನಟ ಪೃಥ್ವಿರಾಜ್ ಸುಕುಮಾರನ್ ಸಿನಿಮಾ, ಕುಟುಂಬ ಇತ್ಯಾದಿ ಮಾಹಿತಿ

ಅದಾದ ಬಳಿಕ 2019 ರಲ್ಲಿ ಚಿರಂಜೀವಿ ಅವರು ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾ ಪ್ರಚಾರಕ್ಕೆ ಕೇರಳಕ್ಕೆ ಹೋಗಿದ್ದರಂತೆ, ಅದೇ ಸಮಯದಲ್ಲಿ ಮೋಹನ್ ಲಾಲ್ ನಟನೆ ‘ಲುಸೀಫರ್’ ಸಿನಿಮಾ ಬಿಡುಗಡೆ ಆಗಿತ್ತು. ಆ ಸಿನಿಮಾವನ್ನು ಪೃಥ್ವಿರಾಜ್ ಸುಕುಮಾರನ್ ಅವರೇ ನಿರ್ದೇಶಿಸಿದ್ದರು. ‘ಲುಸಿಫರ್’ ಸಿನಿಮಾದ ತೆಲುಗು ಬಿಡುಗಡೆ ಹಕ್ಕನ್ನು ಸ್ವತಃ ಚಿರಂಜೀವಿ ಖರೀದೊಸಿದ್ದರು. ಅದಾಗಿ ಕೆಲ ವರ್ಷಗಳಾದ ಬಳಿಕ ‘ಲುಸಿಫರ್’ ಸಿನಿಮಾದ ತೆಲುಗು ರೀಮೇಕ್ ಅನ್ನು ನಿರ್ದೇಶನ ಮಾಡುವಂತೆ ಸ್ವತಃ ಚಿರಂಜೀವಿ ಅವರೇ ಪೃಥ್ವಿರಾಜ್ ಸುಕುಮಾರನ್ ಅವರಲ್ಲಿ ಕೇಳಿದರಂತೆ. ಲಿಜೆಂಡ್ ನಟನಿಗೆ ಆಕ್ಷನ್ ಕಟ್ ಹೇಳುವ ಅವಕಾಶ ಕೈಯಲ್ಲಿದ್ದರೂ ಒಲ್ಲೆ ಎನ್ನಬೇಕಾಯ್ತಂತೆ. ಈ ಕಠಿಣ ನಿರ್ಧಾರಕ್ಕೆ ಕಾರಣವಾಗಿದ್ದು ಮತ್ತೆ ಅದೇ ‘ಆಡುಜೀವಿತಂ’ ಸಿನಿಮಾ.

‘ಆಡುಜೀವಿತಂ’ ಸಿನಿಮಾಕ್ಕೆ ತಾವು ಎಷ್ಟು ಕಮಿಟ್ ಆಗಿದ್ದೆ, ಅದೊಂದು ಸಿನಿಮಾಕ್ಕಾಗಿ ಎಷ್ಟು ಸಿನಿಮಾ ಅವಕಾಶಗಳ ಕೈವಿಟ್ಟೆ ಎಂದು ಪೃಥ್ವಿರಾಜ್ ಸುಕುಮಾರನ್ ಮೇಲಿನ ಘಟನೆಗಳನ್ನು ಹೇಳಿದ್ದಾರೆ. ‘ಆಟುಜೀವಿತಂ’ ಸಿನಿಮಾ ಪ್ರಾರಂಭವಾಗಿ ಬರೋಬ್ಬರಿ 10 ವರ್ಷಗಳಾಗಿವೆ. ನಿಜ ಘಟನೆಯನ್ನು ಆಧರಿಸಿದ ಸಿನಿಮಾ ಇದಾಗಿದೆ. ಸಿನಿಮಾ ಮಾರ್ಚ್ 28 ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ