AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮ್​ ಚರಣ್​ ಫ್ಯಾನ್​ ಪೇಜ್​ನಲ್ಲಿ ಶಿವಣ್ಣನ ವಿಡಿಯೋ ವೈರಲ್​; ಏನಿದೆ ಇದರಲ್ಲಿ?

ಟಾಲಿವುಡ್​ ನಟ ರಾಮ್​ ಚರಣ್​ ಅಭಿನಯಿಸಲಿರುವ 16ನೇ ಸಿನಿಮಾ ಸೆಟ್ಟೇರಿದೆ. ಈ ಚಿತ್ರದಲ್ಲಿ ಕನ್ನಡದ ಸ್ಟಾರ್​ ನಟ ಶಿವರಾಜ್​ಕುಮಾರ್​ ಕೂಡ ಒಂದು ಮುಖ್ಯ ಪಾತ್ರ ಮಾಡಲಿದ್ದಾರೆ ಎಂಬುದು ವಿಶೇಷ. ಈ ಸಿನಿಮಾದ ಬಗ್ಗೆ ಶಿವಣ್ಣ ಮಾತನಾಡಿದ ವಿಡಿಯೋ ವೈರಲ್​ ಆಗಿದೆ. ರಾಮ್​ ಚರಣ್​ ಅವರ ಫ್ಯಾನ್ಸ್​​ ಪೇಜ್​ಗಳಲ್ಲಿ ಈ ವಿಡಿಯೋವನ್ನು ಶೇರ್​ ಮಾಡಿಕೊಳ್ಳಲಾಗಿದೆ.

ರಾಮ್​ ಚರಣ್​ ಫ್ಯಾನ್​ ಪೇಜ್​ನಲ್ಲಿ ಶಿವಣ್ಣನ ವಿಡಿಯೋ ವೈರಲ್​; ಏನಿದೆ ಇದರಲ್ಲಿ?
ಶಿವರಾಜ್​ಕುಮಾರ್​, ರಾಮ್​ ಚರಣ್​
ಮದನ್​ ಕುಮಾರ್​
|

Updated on: Mar 20, 2024 | 4:24 PM

Share

ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ (Shivarajkumar) ಅವರು ಈಗ ಪರಭಾಷೆಯಲ್ಲೂ ಸಖತ್​ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ‘ಜೈಲರ್​’ ಸಿನಿಮಾದಲ್ಲಿ ಅವರು ನಟಿಸಿದ ಬಳಿಕ ತಮಿಳು ಮತ್ತು ತೆಲುಗು ನಿರ್ಮಾಪಕರು ಶಿವಣ್ಣನ ಕಾಲ್​ಶೀಟ್​ಗಾಗಿ ಮುಗಿಬಿದ್ದಿದ್ದಾರೆ. ರಾಮ್​ ಚರಣ್​ (Ram Charan) ನಟಿಸಲಿರುವ 16ನೇ ಸಿನಿಮಾದಲ್ಲಿ ಶಿವರಾಜ್​ಕುಮಾರ್​ ಕೂಡ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ‘ಉಪ್ಪೆನಾ’ ಖ್ಯಾತಿಯ ಬುಚ್ಚಿ ಬಾಬು ಸನಾ ಅವರು ನಿರ್ದೇಶನ ಮಾಡಲಿದ್ದಾರೆ. ಇನ್ನೂ ಶೀರ್ಷಿಕೆ ಅಂತಿಮವಾಗದ ಈ ಸಿನಿಮಾವನ್ನು ಸದ್ಯಕ್ಕೆ RC16 ಎಂದು ಕರೆಯಲಾಗುತ್ತಿದೆ. ಈ ಸಿನಿಮಾಗೆ ಸಂಬಂಧಿಸಿದಂತೆ ಶಿವಣ್ಣ (Shivanna)​ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.

ಹೈದರಾಬಾದ್​ನಲ್ಲಿ ‘RC16’ ಸಿನಿಮಾದ ಮುಹೂರ್ತ ಕಾರ್ಯಕ್ರಮ ಇಂದು (ಮಾರ್ಚ್​ 20) ನಡೆದಿದೆ. ಟಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದಾರೆ. ಕಾರಣಾಂತರಗಳಿಂದ ಶಿವರಾಜ್​ಕುಮಾರ್​ ಅವರು ಈ ಇವೆಂಟ್​ನಲ್ಲಿ ಭಾಗಿಯಾಗಿಲ್ಲ. ಆದರೂ ಸಂದರ್ಶವೊಂದರಲ್ಲಿ ಈ ಸಿನಿಮಾದ ಬಗ್ಗೆ ಶಿವಣ್ಣ ಮಾತನಾಡಿರುವ ವಿಡಿಯೋ ವೈರಲ್​ ಆಗಿದೆ. ರಾಮ್​ ಚರಣ್​ ಅಭಿಮಾನಿಗಳು ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ.

ಪತ್ರಕರ್ತ ಬಿ. ಗಣಪತಿ ಅವರಿಗೆ ನೀಡಿದ ಸಂದರ್ಶನದಲ್ಲಿ ಶಿವರಾಜ್​ಕುಮಾರ್​ ಅವರು ನಿರ್ದೇಶಕ ಬುಚ್ಚಿ ಬಾಬು ಸನಾ ಹಾಗೂ ರಾಮ್​ ಚರಣ್​ ಬಗ್ಗೆ ಮಾತನಾಡಿದ್ದಾರೆ. ‘ರಾಮ್​ ಚರಣ್​ ಅವರ ಒಂದು ತೆಲುಗು ಸಿನಿಮಾ ಆಫರ್​ ಬಂದಿದೆ. ಅದು ಬೇರೆ ಥರ ಇದೆ. ಆ ಪಾತ್ರದ ತೂಕ, ಅವರು ಹೆಂಗೆ ಯೋಚನೆ ಮಾಡುತ್ತಾರೆ ಎಂಬುದೇ ಗೊತ್ತಿಲ್ಲ. ರಾಮ್​ ಚರಣ್​ ಕೂಡ ಥ್ರಿಲ್​ ಆಗಿಬಿಟ್ಟರು. ‘ಶಿವಣ್ಣ ಆ್ಯಕ್ಟ್​ ಮಾಡುತ್ತಾರಾ. ನಂಗೆ ಬಹಳ ಇಷ್ಟ’ ಅಂದ್ರು. ನನಗೂ ರಾಮ್​ ಚರಣ್​ ಅಂದ್ರೆ ತುಂಬ ಇಷ್ಟ’ ಎಂದು ಶಿವಣ್ಣ ಹೇಳಿದ್ದಾರೆ.

ಶಿವರಾಜ್​ಕುಮಾರ್​ ಮಾತನಾಡಿರುವ ವೈರಲ್​ ವಿಡಿಯೋ:

‘ರಾಮ್​ ಚರಣ್​ ಒಬ್ಬ ಅದ್ಭುತವಾದ ವ್ಯಕ್ತಿ. ಅದ್ಭುತವಾದ ನಟ. ನನ್ನ ಪಾತ್ರದಲ್ಲಿ ವಿಭಿನ್ನತೆ ಇದೆ, ಒಂದು ಉದ್ದೇಶ ಉದೆ. ಆ ಪಾತ್ರ ನಾನು ಮಾಡಿದರೆ ಆ ಉದ್ದೇಶಕ್ಕೆ ಅರ್ಥ ಎಂದು ನಿರ್ದೇಶಕ ಬುಚ್ಚಿ ಬಾಬು ಸನಾ ಹೇಳಿದ್ರು. ಅವರು ಕೈ ಕಟ್ಟಿಕೊಂಡು ಕುಳಿತು ಕಥೆ ಹೇಳಿದರು. ನಿರ್ದೇಶಕರಾದ ನೀವು ಈ ರೀತಿ ಕುಳಿತುಕೊಳ್ಳಬಾರದು, ಆರಾಮಾಗಿ ಕುಳಿತುಕೊಂಡು ಕಥೆ ಹೇಳಿ ಎಂದೆ. ಕಥೆ ಹೇಳಲು ಅರ್ಧ ಗಂಟೆ ಕೊಡಿ ಎಂದಿದ್ದರು. ನಾನು ಒಂದೂವರೆ ಗಂಟೆ ಕಥೆ ಕೇಳಿದೆ. ಅವರು ಇಡೀ ಕಥೆ ಹೇಳಿದರು’ ಎಂದಿದ್ದಾರೆ ಶಿವಣ್ಣ.

ಇದನ್ನೂ ಓದಿ: ‘ಅಪ್ಪಾಜಿಗೂ ಪಾಲಿಟಿಕ್ಸ್​ ಬೇಕು, ಅದಕ್ಕಾಗಿಯೇ..’: ಮನದ ಮಾತು ತಿಳಿಸಿದ ಶಿವಣ್ಣ

ಕನ್ನಡದಲ್ಲಿ ಶಿವಣ್ಣ ಮಾತನಾಡಿದ್ದನ್ನು ರಾಮ್​ ಚರಣ್​ ಅವರ ಅಭಿಮಾನಿಗಳು ತೆಲುಗಿಗೆ ಭಾಷಾಂತರ ಮಾಡಿಕೊಂಡು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ದೊಡ್ಡ ಪರದೆಯಲ್ಲಿ ಶಿವರಾಜ್​ಕುಮಾರ್​ ಮತ್ತು ರಾಮ್​ ಚರಣ್​ ಅವರ ಕಾಂಬಿನೇಷನ್​ ನೋಡಲು ಫ್ಯಾನ್ಸ್​ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್