Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷ್ಣ-ಕುಚೇಲನ ಸಂಬಂಧ: ಧ್ರುವ ಸರ್ಜಾ ಬಗ್ಗೆ ‘ಕೆರೆಬೇಟೆ’ ಹೀರೋ ಹೇಳಿದ್ದೇನು?

‘ಈ ಮಾತನ್ನು ನಾನು ಎಗ್ಸೈಟ್​ಮೆಂಟ್​ನಲ್ಲಿ ಹೇಳುತ್ತಿಲ್ಲ. ನಾನು ಪ್ರಾಕ್ಟಿಕಲ್​ ಮನುಷ್ಯ. ನನ್ನ ಸ್ನೇಹಿತ ನನ್ನೊಂದಿಗೆ ಯಾವ ರೀತಿ ನಡೆದುಕೊಳ್ಳುತ್ತಾನೆ ಎಂಬ ಅಂಜಿಕೆ ನನ್ನಲ್ಲಿ ಇತ್ತು. ಆದರೆ ತುಂಬ ಚೆನ್ನಾಗಿ ಮಾತಾಡಿಸಿ ಸಪೋರ್ಟ್​​ ಮಾಡಿದ್ದಾನೆ. ಆ ಗುಣದಿಂದಲೇ ಧ್ರುವ ಸರ್ಜಾ ಇಂದು ಆ್ಯಕ್ಷನ್​ ಪ್ರಿನ್ಸ್​ ಆಗಿರುವುದು’ ಎಂದು ‘ಕೆರೆಬೇಟೆ’ ನಟ ಗೌರಿ ಶಂಕರ್​ ಹೇಳಿದ್ದಾರೆ.

ಕೃಷ್ಣ-ಕುಚೇಲನ ಸಂಬಂಧ: ಧ್ರುವ ಸರ್ಜಾ ಬಗ್ಗೆ ‘ಕೆರೆಬೇಟೆ’ ಹೀರೋ ಹೇಳಿದ್ದೇನು?
ಧ್ರುವ ಸರ್ಜಾ, ಗೌರಿಶಂಕರ್​
Follow us
ಮದನ್​ ಕುಮಾರ್​
|

Updated on: Mar 20, 2024 | 10:25 PM

ನಟ ಧ್ರುವ ಸರ್ಜಾ ಅವರು ಕೆರೆಬೇಟೆ’ ಸಿನಿಮಾ (Kerebete Movie) ವೀಕ್ಷಿಸಿದ್ದಾರೆ. ಬಳಿಕ ಅವರು ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ. ಈ ಸಿನಿಮಾದ ಹೀರೋ ಗೌರಿಶಂಕರ್​ (Gowrishankar) ಹಾಗೂ ಧ್ರುವ ಸರ್ಜಾ ಅವರು ಬಹುಕಾಲದ ಸ್ನೇಹಿತರು. ತಮ್ಮ ಗೆಳೆತನಕ್ಕಾಗಿ ಧ್ರುವ ಅವರು ಇಂದು (ಮಾರ್ಚ್​ 20) ‘ಕೆರೆಬೇಟೆ’ ಚಿತ್ರ ನೋಡಿದ್ದಾರೆ. ಸಿನಿಮಾ ಚೆನ್ನಾಗಿದೆ ಎಂದು ಮನಸಾರೆ ಹೊಗಳಿದ್ದಾರೆ. ಧ್ರುವ ಸರ್ಜಾ (Dhruva Sarja) ಅವರ ಬಗ್ಗೆ ಗೌರಿಶಂಕರ್​ ಮಾತನಾಡಿದ್ದಾರೆ. ತಮ್ಮಿಬ್ಬರ ಸ್ನೇಹವನ್ನು ಕೃಷ್ಣ-ಕುಚೇಲರ ಸ್ನೇಹಕ್ಕೆ ಹೋಲಿಸಿದ್ದಾರೆ ಗೌರಿಶಂಕರ್​. ‘ಕೆರೆಬೇಟೆ’ ಸಿನಿಮಾಗೆ ಸ್ಯಾಂಡಲ್​ವುಡ್​ನ ಅನೇಕ ಸೆಲೆಬ್ರಿಟಿಗಳು ಉತ್ತಮ ವಿಮರ್ಶೆ ನೀಡಿದ್ದಾರೆ.

‘ನಮ್ಮ ಕೆರೆಬೇಟೆ ಸಿನಿಮಾ ರಿಲೀಸ್​ ಆಗಿ ಐದು ದಿನ ಕಳೆದಿದೆ. ಎಲ್ಲ ಕಡೆಗಳಿಂದ ತುಂಬ ಉತ್ತಮ ವಿಮರ್ಶೆ ಸಿಕ್ಕಿದೆ. ನಾವು ಅಂದುಕೊಂಡ ಮಟ್ಟಕ್ಕೆ ಕಲೆಕ್ಷನ್​ ಆಗುತ್ತಿಲ್ಲ ಎಂಬುದು ಬಿಟ್ಟರೆ ಸಿನಿಮಾದ ಬಗ್ಗೆ ಒಳ್ಳೆಯ ರಿಪೋರ್ಟ್​ ಸಿಕ್ಕಿರುವುದಕ್ಕೆ ನಮಗೆ ಬಹಳ ಖುಷಿ ಇದೆ. ನೀವೆಲ್ಲರೂ ಬಂದು ಸಿನಿಮಾ ನೋಡಿ ಕೈ ಹಿಡಿದರೆ ಇದು ಮೆಗಾ ಹಿಟ್​ ಆಗುತ್ತದೆ’ ಎಂದು ಗೌರಿಶಂಕರ್​ ಹೇಳಿದ್ದಾರೆ.

‘ಸಿನಿಮಾದಲ್ಲಿ ಫೇಸ್​ ವ್ಯಾಲ್ಯು ಎಂಬುದು ಬಹಳ ಮುಖ್ಯ. ಅದನ್ನು ಸ್ವಲ್ಪ ಬದಿಗಿಟ್ಟು ಚಿತ್ರಮಂದಿರಕ್ಕೆ ಬಂದರೆ ನಿಮಗೆ ಈ ಸಿನಿಮಾ ಖಂಡಿತಾ ಇಷ್ಟ ಆಗುತ್ತದೆ. ನನಗೆ ಚಿತ್ರರಂಗದವರು ಮತ್ತು ಮಾಧ್ಯಮದವರು ತುಂಬ ಚೆನ್ನಾಗಿ ಸಪೋರ್ಟ್​ ಮಾಡಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಧ್ರುವ ಸರ್ಜಾ ಬೆಂಬಲ ಸಿಕ್ಕಿದೆ. ನಾನು ಮತ್ತು ಇವನು ಒಟ್ಟಿಗೆ ಜಿಮ್ನಾಸ್ಟಿಕ್​ ಪ್ರಾಕ್ಟೀಸ್​ ಮಾಡುತ್ತಿದ್ವಿ’ ಎಂದಿರುವ ಗೌರಿಶಂಕರ್​ ಅವರು ಗೆಳೆಯನ ಸಹಾಯಕ್ಕೆ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ: ‘ಕೆರೆಬೇಟೆ 100 ಪರ್ಸೆಂಟ್​ ಚೆನ್ನಾಗಿದೆ’; ಗೆಳೆಯನ ಸಿನಿಮಾ ನೋಡಿ ಮೆಚ್ಚಿದ ಧ್ರುವ ಸರ್ಜಾ

‘ಇವತ್ತು ಧ್ರುವ ಸರ್ಜಾ ಮತ್ತು ನನ್ನ ಸಂಬಂಧ ಕೃಷ್ಣ ಹಾಗೂ ಕುಚೇಲನ ರೀತಿ ಆಗಿದೆ. ಕೃಷ್ಣನ ಬಳಿ ಕುಚೇಲ ಹೋದಾಗ ಏನಾಗುತ್ತದೆ ಎಂಬುದು ನಿಮಗೆ ಗೊತ್ತಿದೆ. ನಾನು ಇವನ ಬಳಿ ಹೋದಾಗ ಹೇಗೆ ಕೇಳೋದು ಅಂತ ಅಳುಕು ಇತ್ತು. ಯಾಕೆಂದರೆ, ಸ್ನೇಹಿತನ ಬಳಿ ಹೋಗಿ ಸಹಾಯ ಕೇಳಬೇಕು ಎಂದರೆ ನಾನು ಯೋಗ್ಯತೆ ಇರುವ ಏನನ್ನಾದರೂ ಮಾಡಿರಬೇಕು. ಆ ಅಂಜಿಕೆಯಲ್ಲೇ ಹೋದೆ. ಹೇಗೆ ಮಾತನಾಡಿಸುತ್ತಾನೋ ಎಂಬ ಪ್ರಶ್ನೆ ಇತ್ತು. ಆದರೆ ನನ್ನನ್ನು ಒಬ್ಬ ಸಹೋದರನ ರೀತಿ ಮಾತಾಡಿಸಿದ. ಇಷ್ಟು ಒಳ್ಳೆಯ ವಿಮರ್ಶೆ ಇಟ್ಟುಕೊಂಡು ಇಷ್ಟು ದಿನ ಯಾಕೆ ಹೇಳಲಿಲ್ಲ ಅಂತ ಕೇಳಿದ. ಒಳ್ಳೆಯ ಮನಸ್ಸು ಇರುವ ಗೆಳೆಯ. ಅವನಿಗೆ ಒಳ್ಳೆಯದಾಗಬೇಕು. ಅವನು ಯಾವಾಗಲೂ ಸೂಪರ್​ ಸ್ಟಾರ್​ ಆಗಿರಬೇಕು. ಅವನ ಸಹಕಾರದಿಂದ ನನ್ನ ಸಿನಿಮಾವನ್ನು ಜನರು ಕೈ ಹಿಡಿಯುತ್ತಾರೆ ಎಂಬ ನಂಬಿಕೆ ನನಗೆ ಇದೆ’ ಎಂದು ಗೌರಿಶಂಕರ್​ ಹೇಳಿದ್ದಾರೆ.

ಗೌರಿಶಂಕರ್​ ಮಾತನಾಡಿದ ವಿಡಿಯೋ:

‘ಈ ಸಿನಿಮಾವನ್ನು ಗೆಲ್ಲಿಸಿಕೊಳ್ಳಲೇಬೇಕು ಎಂಬುದು ನಮ್ಮ ಪ್ರಯತ್ನ. ಯಾಕೆಂದರೆ ಈ ರೀತಿಯ ಇನ್ನೊಂದು ಸಿನಿಮಾ ನಾವು ಮಾಡಬೇಕು ಎಂದರೆ ಮೊದಲು ಈ ಸಿನಿಮಾ ಗೆಲ್ಲಬೇಕು. ಈ ಸಿನಿಮಾ ಗೆದ್ದರೆ ಇನ್ನೂ ಹತ್ತಾರು ಪ್ರಯತ್ನವನ್ನು ನಮ್ಮ ತಂಡದವರು ಮಾಡುತ್ತೇವೆ. ಈ ರೀತಿ ಶ್ರಮ ಹಾಕುವ ಹೊಸ ತಂಡಗಳಿಗೆ ಧೈರ್ಯ ಬರುತ್ತದೆ. ಎಲ್ಲರಿಂದ ಉತ್ತಮ ವಿಮರ್ಶೆ ಸಿಕ್ಕಿದೆ. ಅದು ನಮ್ಮ ಗೆಲುವು. ಹಾಗಿದ್ದರೂ ಈ ಚಿತ್ರವನ್ನು ಜನರು ನೋಡಿಲ್ಲ ಎಂದರೆ ಅದು ಕನ್ನಡದ ಜನತೆಯ ಸೋಲಾಗುತ್ತದೆ. ಅವರು ಈ ರೀತಿಯ ಪ್ರಯತ್ನಕ್ಕೆ ಬೆನ್ನು ತಟ್ಟಿದರೆ ಮಾತ್ರ ಹತ್ತಾರು ಒಳ್ಳೆಯ ಚಿತ್ರ ಬರುತ್ತದೆ. ಇಲ್ಲದಿದ್ದರೆ ಕೇವಲ ಪರಭಾಷೆಯ ಸುದ್ದಿ ಕೇಳಿ ಸಮಾಧಾನಪಟ್ಟುಕೊಳ್ಳುವಂತೆ ಆಗುತ್ತದೆ’ ಎಂದು ಗೌರಿಶಂಕರ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್