Mahesh Babu: ರಾಜಮೌಳಿ-ಮಹೇಶ್ ಬಾಬು ಚಿತ್ರಕ್ಕೆ ಸಿಕ್ಕ ಖಡಕ್ ವಿಲನ್

|

Updated on: Jul 03, 2024 | 6:57 AM

ರಾಜಮೌಳಿ ನಿರ್ದೇಶನದ ಹೊಸ ಸಿನಿಮಾ ಬಗ್ಗೆ ಆಗಾಗ ಸುದ್ದಿ ಹರಿದಾಡುತ್ತಲೇ ಇರುತ್ತದೆ. ಈವರೆಗೆ ಚಿತ್ರದ ಪಾತ್ರವರ್ಗದ ಬಗ್ಗೆ ಮಾಹಿತಿ ರಿವೀಲ್ ಆಗಿಲ್ಲ. ಈಗ ಚಿತ್ರದ ವಿಲನ್ ಬಗ್ಗೆ ಸುದ್ದಿ ಒಂದು ಹರಿದಾಡಿದೆ. ಪೃಥ್ವಿರಾಜ್ ಸುಕುಮಾರನ್ ಸಿನಿಮಾಗೆ ವಿಲನ್​ ಎಂದು ವರದಿ ಆಗಿದೆ.

Mahesh Babu: ರಾಜಮೌಳಿ-ಮಹೇಶ್ ಬಾಬು ಚಿತ್ರಕ್ಕೆ ಸಿಕ್ಕ ಖಡಕ್ ವಿಲನ್
ಮಹೇಶ್​-ರಾಜಮೌಳಿ
Follow us on

ಎಸ್​ಎಸ್ ರಾಜಮೌಳಿ ನಿರ್ದೇಶನದ ಮುಂದಿನ ಚಿತ್ರದ ಬಗ್ಗೆ ಭರ್ಜರಿ ನಿರೀಕ್ಷೆ ಇದೆ. ಇದಕ್ಕೆ ಕಾರಣ ಈ ಚಿತ್ರಕ್ಕೆ ಮಹೇಶ್ ಬಾಬು ಹೀರೋ. ಅವರ ನಟನೆಯ 29ನೇ ಸಿನಿಮಾ ಇದು. ‘ಗುಂಟೂರು ಖಾರಂ’ ಸಿನಿಮಾ ಸಾಧಾರಣ ಯಶಸ್ಸು ಕಂಡ ಬೆನ್ನಲ್ಲೇ ಮಹೇಶ್ ಬಾಬು ಈ ಚಿತ್ರದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ಅವರು ದಪ್ಪ ಆಗುತ್ತಿದ್ದಾರೆ. ಸ್ಟ್ರಿಕ್ಟ್ ಡಯಟ್ ಫಾಲೋ ಮಾಡುತ್ತಿದ್ದಾರೆ. ಈ ಮಧ್ಯೆ ಸಿನಿಮಾದ ವಿಲನ್ ಬಗ್ಗೆ ಅಪ್​ಡೇಟ್ ಒಂದು ಸಿಕ್ಕಿದೆ.

ರಾಜಮೌಳಿ ಸಿನಿಮಾಗಳಲ್ಲಿ ವಿಲನ್​ಗೂ ಹೆಚ್ಚು ಪ್ರಾಮುಖ್ಯತೆ ಇರುತ್ತದೆ. ವಿಲನ್​ಗಳನ್ನು ಭರ್ಜರಿಯಾಗಿ ಸಿದ್ಧಪಡಿಸುತ್ತಾರೆ ಅವರು. ‘ಈಗ’ ಚಿತ್ರದಲ್ಲಿ ಸುದೀಪ್, ‘ಬಾಹುಬಲಿ’ ಚಿತ್ರದಲ್ಲಿ ರಾಣಾ ದಗ್ಗುಬಾಟಿ ಹೀಗೆ ಅವರ ಸಿನಿಮಾದ ವಿಲನ್​ಗಳು ಗಮನ ಸೆಳೆದಿದ್ದಾರೆ. ಈಗ ರಾಜಮೌಳಿ ಹೊಸ ಚಿತ್ರಕ್ಕೂ ಖಡಕ್ ವಿಲನ್​ನ ಆಯ್ಕೆ ಮಾಡಿಕೊಂಡಿದ್ದಾರೆ. ಅವರು ಬೇರಾರೂ ಅಲ್ಲ ಪೃಥ್ವಿರಾಜ್ ಸುಕುಮಾರನ್.

ಇತ್ತೀಚೆಗಷ್ಟೇ ರಿಲೀಸ್ ಆದ ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾದಲ್ಲಿ ಪೃಥ್ವಿರಾಜ್ ವಿಲನ್ ಮಾಡಿದ್ದರು. ಈ ಸಿನಿಮಾ ಸೋತಿದ್ದರೂ ಪೃಥ್ವಿರಾಜ್ ನಟನೆಗೆ ಭರ್ಜರಿ ಮೆಚ್ಚುಗೆ ಸಿಕ್ಕಿತ್ತು. ಈ ಪವರ್​ಫುಲ್ ಪಾತ್ರವನ್ನು ಜನರು ಕೊಂಡಾಡಿದ್ದರು. ಈಗ ರಾಜಮೌಳಿ ಕೂಡ ಪೃಥ್ವಿರಾಜ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಪೃಥ್ವಿರಾಜ್ ಅವರು ಈ ಸಿನಿಮಾದ ಆಫರ್​ನ ಖುಷಿಯಿಂದ ಒಪ್ಪಿಕೊಂಡಿದ್ದಾರಂತೆ.

ಸದ್ಯ ರಾಜಮೌಳಿ ಅವರು ಪಾತ್ರವರ್ಗದ ಆಯ್ಕೆಯಲ್ಲಿ ಬ್ಯುಸಿ ಇದ್ದಾರೆ. ಈಗಾಗಲೇ ಸ್ಕ್ರಿಪ್ಟ್ ಕೆಲಸವನ್ನು ಅವರು ಪೂರ್ಣಗೊಳಿಸಿದ್ದಾರೆ. ಆಫ್ರಿಕಾದ ಕಾಡುಗಳಲ್ಲಿ ಸಿನಿಮಾದ ಕಥೆ ಸಾಗಲಿದೆಯಂತೆ. ಇದಕ್ಕಾಗಿ ಸೋನಿ ಪಿಕ್ಚರ್ಸ್ ಅಥವಾ ಡಿಸ್ನಿ ಸ್ಟುಡಿಯೋದಲ್ಲಿ ಸೆಟ್​ ಹಾಕುವ ಆಲೋಚನೆ ರಾಜಮೌಳಿಗೆ ಇದೆ. 2025ರಲ್ಲಿ ಸಿನಿಮಾ ತೆರೆಗೆ ಬರಬಹುದು.

ಇದನ್ನೂ ಓದಿ: ಎರಡು ಬಾರಿ ಮೆಗಾಸ್ಟಾರ್ ಸಿನಿಮಾ ಅವಕಾಶ ನಿರಾಕರಿಸಿದ್ದ ಪೃಥ್ವಿರಾಜ್ ಸುಕುಮಾರನ್

ಇತ್ತೀಚೆಗೆ ಪೃಥ್ವಿರಾಜ್ ಸುಕುಮಾರನ್ ಬೇಡಿಕೆ ಹೆಚ್ಚಿದೆ. ಅವರು ಕೇವಲ ಮಲಯಾಳಂ ಮಾತ್ರವಲ್ಲದೆ ಇತರ ಭಾಷೆಗಳ ಸಿನಿಮಾ ಆಫರ್​ಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಈ ಮೂಲಕ ಅವರು ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಹೀರೋ ಹಾಗೂ ವಿಲನ್ ಪಾತ್ರವನ್ನು ಅವರು ಒಪ್ಪಿ ನಟಿಸುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.