ಡ್ರಗ್ ಕೇಸ್​: ದೊಡ್ಡ ನಟರ ಹೆಸರು ಬಾಯ್ಬಿಡ್ತಾರೆ ‘ಕಬಾಲಿ’ ನಿರ್ಮಾಪಕ? ಶುರುವಾಗಿದೆ ಆತಂಕ

ಹೈದರಾಬಾದ್​ನ ಕಿಸ್ಮತ್​ಪುರದಲ್ಲಿರುವ ಮನೆಯಿಂದ ಹೊರಟ ಕೆ.ಪಿ. ಚೌದರಿ ಅವರನ್ನು ಇತ್ತೀಚೆಗೆ ವಿಶೇಷ ತನಿಖಾ ತಂಡದ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದರು. ಈಗ ಕೆಲ ನಟರಿಗೆ ಆತಂಕ ಶುರುವಾಗಿದೆ.

ಡ್ರಗ್ ಕೇಸ್​: ದೊಡ್ಡ ನಟರ ಹೆಸರು ಬಾಯ್ಬಿಡ್ತಾರೆ ‘ಕಬಾಲಿ’ ನಿರ್ಮಾಪಕ? ಶುರುವಾಗಿದೆ ಆತಂಕ
ಕೆಪಿ ಚೌದರಿ
Follow us
ರಾಜೇಶ್ ದುಗ್ಗುಮನೆ
|

Updated on: Jun 21, 2023 | 12:21 PM

ಇತ್ತೀಚೆಗೆ ಡ್ರಗ್ಸ್ ಪ್ರಕರಣದ ಸದ್ದು ಜೋರಾಗಿದೆ. ಹಲವು ಸೆಲೆಬ್ರಿಟಿಗಳ ಹೆಸರು ಈ ಪ್ರಕರಣದಲ್ಲಿ ಕೇಳಿ ಬಂದಿದೆ. ರಜನಿಕಾಂತ್ (Rajanikanth) ನಟನೆಯ ‘ಕಬಾಲಿ’ ಚಿತ್ರದ ತೆಲುಗು ನಿರ್ಮಾಪಕ ಕೆಪಿ ಚೌದರಿ ಅವರನ್ನು ಇತ್ತೀಚೆಗೆ ಡ್ರಗ್ ಕೇಸ್​ನಲ್ಲಿ ಬಂಧಿಸಲಾಗಿತ್ತು. ಈಗ ಅವರನ್ನು ಕೋರ್ಟ್ ಎದುರು ಹಾಜರುಪಡಿಸಲಾಗಿದೆ. ಈಗ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಎರಡು ದಿನಗಳ ಕಾಲ ಅವರ ವಿಚಾರಣೆ ನಡೆಯಲಿದೆ. ಈ ಬೆಳವಣಿಗೆಯಿಂದ ಅನೇಕ ಸೆಲೆಬ್ರಿಟಿಗಳಿಗೆ ಆತಂಕ ಶುರುವಾಗಿದೆ ಎನ್ನಲಾಗುತ್ತಿದೆ.

ಹೈದರಾಬಾದ್​ನ ಕಿಸ್ಮತ್​ಪುರದಲ್ಲಿರುವ ಮನೆಯಿಂದ ಹೊರಟ ಕೆ.ಪಿ. ಚೌದರಿ ಅವರನ್ನು ಇತ್ತೀಚೆಗೆ ವಿಶೇಷ ತನಿಖಾ ತಂಡದ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದರು. ಕೆ.ಪಿ. ಚೌದರಿ ಅವರ ಮನೆ ಮೇಲೆ ದಾಳಿ ಮಾಡಿದಾಗ 90 ಪ್ಯಾಕೆಟ್​ ಕೊಕೇನ್​ ಸಿಕ್ಕಿತ್ತು. ಗೋವಾದಿಂದ ಅವರು 100 ಪ್ಯಾಕೆಟ್​ಗಳಲ್ಲಿ ಮಾದಕ ವಸ್ತು ಖರೀದಿಸಿದ್ದರು. ಈಗ ಇವರನ್ನು ಕೋರ್ಟ್ ಮುಂದೆ ಹಾಜರುಪಡಿಸಿ, ಎರಡು ದಿನ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

ಕೆ.ಪಿ.ಚೌದರಿ ಅವರು ಹೈದರಾಬಾದ್​ನಲ್ಲಿ ಡ್ರಗ್ಸ್‌ ಸರಬರಾಜು ಮಾಡುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಪಾರ್ಟಿಗಳಿಗೆ ಇವರು ಡ್ರಗ್ಸ್ ಪೂರೈಸುತ್ತಿದ್ದರು ಎನ್ನಲಾಗಿದೆ. ಈ ಪಾರ್ಟಿಗಳಲ್ಲಿ ಸಿನಿಮಾ ಮತ್ತು ರಾಜಕೀಯ ಗಣ್ಯರು ಭಾಗವಹಿಸಿದ್ದರು ಅನ್ನೋದು ಮೂಲಗಳ ಮಾಹಿತಿ. ಟಾಲಿವುಡ್ ಸೆಲೆಬ್ರಿಟಿಗಳು ಮತ್ತು ದಕ್ಷಿಣ ಭಾರತದ ಕೆಲ ಕಲಾವಿದರೊಂದಿಗೆ ಕೆಪಿ ನಿಕಟ ಸಂಬಂಧ ಹೊಂದಿದ್ದಾರೆ ಎಂಬುದು ಪೊಲೀಸರ ಹೇಳಿಕೆ.

ಕೆಪಿ ಬಳಸುತ್ತಿದ್ದ 4 ಮೊಬೈಲ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೆಪಿ ನೀಡಿರುವ ಮಾಹಿತಿ ಆಧರಿಸಿ ಡ್ರಗ್ಸ್ ಸೇವಿಸಿದ ಸೆಲೆಬ್ರಿಟಿಗಳಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ. ಇದರಿಂದ ಟಾಲಿವುಡ್ ಸೆಲೆಬ್ರಿಟಿಗಳಲ್ಲಿ ಭಯ ಶುರುವಾಗಿದೆ. ಸುಶಾಂತ್ ಸಿಂಗ್ ರಜಪೂತ್ ಮೃತಪಟ್ಟ ಬಳಿಕ ಡ್ರಗ್ ವಿಚಾರ ಬೆಳಕಿಗೆ ಬಂತು. ಅನೇಕ ಸೆಲೆಬ್ರಿಟಿಗಳು ಡ್ರಗ್ ಕೇಸ್​ನಲ್ಲಿ ವಿಚಾರಣೆ ಎದುರಿಸಿದರು. ಆದರೆ ದೊಡ್ಡ ಸ್ಟಾರ್​ಗಳ್ಯಾರೂ ಅರೆಸ್ಟ್ ಆಗಿಲ್ಲ.

ಇದನ್ನೂ ಓದಿ: KP Chowdary: ಡ್ರಗ್ಸ್​ ಮಾರಾಟ ಮಾಡುತ್ತಿದ್ದ ‘ಕಬಾಲಿ’ ಸಿನಿಮಾ ನಿರ್ಮಾಪಕ ಕೆ.ಪಿ. ಚೌದರಿ ಬಂಧನ; 90 ಪಾಕೆಟ್​ ಮಾದಕ ವಸ್ತು ವಶ

ಕೆ.ಪಿ. ಚೌದರಿ ಅವರು 2016ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ‘ಕಬಾಲಿ’ ಸಿನಿಮಾದ ತೆಲುಗು ವರ್ಷನ್​​ಗೆ ಅವರು ಹಣ ಹಾಕಿದ್ದರು. ‘ಸರ್ದಾರ್​ ಗಬ್ಬರ್​ ಸಿಂಗ್​’ ಹಾಗೂ ‘ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು’ ಸಿನಿಮಾಗಳನ್ನು ಅವರು ವಿತರಿಸಿದ್ದರು. ಆದರೆ ಈ ವ್ಯವಹಾರದಿಂದ ಅವರಿಗೆ ಹೆಚ್ಚು ಹಣ ಬರಲಿಲ್ಲ. ಅವರು ಗೋವಾದಲ್ಲಿ ತಮ್ಮದೇ ಕ್ಲಬ್​ ಹೊಂದಿದ್ದಾರಂತೆ. ಅನೇಕ ಸೆಲೆಬ್ರಿಟಿಗಳು ಅಲ್ಲಿಗೆ ಆಗಾಗ ಭೇಟಿ ನೀಡುತ್ತಾರೆ ಎಂಬ ಸುದ್ದಿಯೂ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ