
ಬಾಹುಬಲಿ’ ಸಿನಿಮಾ ಬಿಡುಗಡೆ ಆಗಿ 10 ವರ್ಷಗಳಾಗಿವೆ. ಭಾರತೀಯ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ಸಿನಿಮಾ ಅದು. ಬಾಕ್ಸ್ ಆಫೀಸ್ನಲ್ಲಿ ಭಾರಿ ದೊಡ್ಡ ದಾಖಲೆಗಳನ್ನು ಬರೆದ ಸಿನಿಮಾ ಅದು. ರಾಜಮೌಳಿ ನಿರ್ದೇಶಿಸಿದ ಸಿನಿಮಾದ ಎರಡು ಭಾಗಗಳು ಬಿಡುಗಡೆ ಆಗಿದ್ದವು, ಅಣ್ಣ-ತಮ್ಮಂದಿರ ಕತೆಯನ್ನು ಎರಡು ಭಾಗಗಳಲ್ಲಿ ರಾಜಮೌಳಿ ಹೇಳಿದ್ದರು. ಎರಡನೇ ಭಾಗದಲ್ಲಿ ಕತೆಯನ್ನು ಅಂತ್ಯಗೊಳಿಸಿದ್ದರು. ಸಿನಿಮಾ ಬಿಡುಗಡೆ ಆಗಿ 10 ವರ್ಷವಾದ ನೆನಪಿನಲ್ಲಿ ‘ಬಾಹುಬಲಿ’ ಸಿನಿಮಾ ಮರು ಬಿಡುಗಡೆ ಆಗಲಿದೆ.
‘ಬಾಹುಬಲಿ: ದಿ ಬಿಗಿನಿಂಗ್’ ಮತ್ತು ‘ಬಾಹುಬಲಿ: ದಿ ಕನ್ಕ್ಲೂಷನ್’ ಸಿನಿಮಾ ಎರಡನ್ನೂ ಒಟ್ಟಿಗೆ ಅಂದರೆ ಎರಡೂ ಸಿನಿಮಾ ಸೇರಿಸಿ ಒಂದೇ ಸಿನಿಮಾ ಅನ್ನಾಗಿ ಮಾಡಿ ಮರು ಬಿಡುಗಡೆ ಮಾಡಲಾಗುತ್ತಿದೆ. ಸ್ವತಃ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರೇ ಮುಂದೆ ನಿಂತು ‘ಬಾಹುಬಲಿ’ ಸಿನಿಮಾದ ಎರಡೂ ಭಾಗಗಳನ್ನು ಸರಿಯಾಗಿ ಎಡಿಟ್ ಮಾಡಿಸಿ, ಅನವಶ್ಯಕ ಎನಿಸಿದ ದೃಶ್ಯಗಳನ್ನು ತೆಗೆದು, ಕೆಲವೆಡೆ ವಾಯ್ಸ್ ಓವರ್ಗಳನ್ನು ಸೇರಿಸಿ ಎರಡು ಸಿನಿಮಾಗಳನ್ನು ಒಂದೇ ಸಿನಿಮಾ ಅನ್ನಾಗಿ ಮಾಡಿದ್ದಾರೆ.
These frames carried the first heartbeat of a dream that became #Baahubali ❤️#BaahubaliTheEpic #BaahubaliTheEpicOn31stOct pic.twitter.com/KCuKTtQweR
— Baahubali (@BaahubaliMovie) October 11, 2025
‘ಬಾಹುಬಲಿ: ದಿ ಬಿಗಿನಿಂಗ್’ ಮತ್ತು ‘ಬಾಹುಬಲಿ: ದಿ ಕನ್ಕ್ಲೂಷನ್’ ಸಿನಿಮಾಗಳ ಒಟ್ಟು ಅವಧಿ ಐದು ಗಂಟೆಗೂ ಹೆಚ್ಚಾಗಿದೆ. ಈಗ ರಾಜಮೌಳಿ ಹಾಗೂ ತಂಡ ಈ ಅವಧಿಯನ್ನು 3:40 ನಿಮಿಷಕ್ಕೆ ಇಳಿಸಿದ್ದಾರೆ. ಈ ಸಿನಿಮಾಕ್ಕೆ ‘ಬಾಹುಬಲಿ: ದಿ ಎಪಿಕ್’ ಎಂದು ಹೆಸರಿಡಲಾಗಿದೆ. ಈ ಸಿನಿಮಾದ ಮರು ಬಿಡುಗಡೆ ವೀಕ್ಷಿಸಲು ಹೋದವರಿಗೆ ಹಲವು ಸರ್ಪ್ರೈಸ್ಗಳು ಸಿಗಲಿವೆ ಎಂದು ಸಿನಿಮಾದ ನಿರ್ಮಾಪಕ ಶೋಭು ಯರ್ಲಗಡ್ಡ ಹೇಳಿದ್ದಾರೆ.
ಇದನ್ನೂ ಓದಿ:ಮಹೇಶ್ ಬಾಬು ಸಿನಿಮಾಕ್ಕೆ ಬ್ರೇಕ್, ಮತ್ತೆ ‘ಬಾಹುಬಲಿ’ಗೆ ಕೈಹಾಕಿದ ರಾಜಮೌಳಿ
‘ಬಾಹುಬಲಿ’ ಸಿನಿಮಾದ ಮುಂದಿನ ಭಾಗ ಬರಬೇಕು ಎಂಬುದು ಅಭಿಮಾನಿಗಳ ಒತ್ತಾಯ ಆಗಿತ್ತು. ಇದೀಗ ನಿರ್ಮಾಪಕ ಶೋಭು ಯರ್ಲಗಡ್ಡ ಈ ಬಗ್ಗೆ ಮಾತನಾಡಿದ್ದು, ‘ಬಾಹುಬಲಿ 3’ ಸಿನಿಮಾ ಖಂಡಿತ ಬರಲಿದೆ ಎಂದಿದ್ದಾರೆ. ಅಲ್ಲದೆ ‘ಬಾಹುಬಲಿ: ದಿ ಎಪಿಕ್’ ಸಿನಿಮಾನಲ್ಲಿ ಅದರ ಹಿಂಟ್ ಇದೆ. ಅದು ಮಾತ್ರವೇ ಇನ್ನೂ ಹಲವು ಸರ್ಪ್ರೈಸ್ಗಳು ಸಿನಿಮಾನಲ್ಲಿ ಇರಲಿವೆ ಎಂದು ಶೋಭು ಹೇಳಿದ್ದಾರೆ. ‘ಬಾಹುಬಲಿ: ದಿ ಎಪಿಕ್’ ಸಿನಿಮಾ ಅಕ್ಟೋಬರ್ 31ರಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:55 pm, Sat, 11 October 25