ಮಹೇಶ್ ಬಾಬು ಸಿನಿಮಾಕ್ಕೆ ಬ್ರೇಕ್, ಮತ್ತೆ ‘ಬಾಹುಬಲಿ’ಗೆ ಕೈಹಾಕಿದ ರಾಜಮೌಳಿ
SS Rajamouli and Bahubali movie: ರಾಜಮೌಳಿ ಪ್ರಸ್ತುತ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ನಟಿಸುತ್ತಿರುವ ಸಾಹಸಮಯ ಸಿನಿಮಾದ ನಿರ್ದೇಶನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದರೆ ಆ ಸಿನಿಮಾಕ್ಕೆ ಬ್ರೇಕ್ ನೀಡಿ ಹಠಾತ್ತನೆ ಮತ್ತೊಮ್ಮೆ ‘ಬಾಹುಬಲಿ’ ಸಿನಿಮಾಕ್ಕೆ ಕೈ ಹಾಕಿದ್ದಾರೆ. ಕಾರಣವೇನು? ಇಲ್ಲಿದೆ ನೋಡಿ ಮಾಹಿತಿ...

ಪ್ಯಾನ್ ವರ್ಲ್ಡ್ ನಿರ್ದೇಶಕ ಎಸ್ಎಸ್ ರಾಜಮೌಳಿ (SS Rajamouli) ಪ್ರಸ್ತುತ ಮಹೇಶ್ ಬಾಬು ಮತ್ತು ಪ್ರಿಯಾಂಕಾ ಚೋಪ್ರಾ ನಟನೆಯ ಹೊಸ ಸಿನಿಮಾದ ನಿರ್ದೇಶನದಲ್ಲಿ ತೊಡಗಿದ್ದಾರೆ. ಹೈದರಾಬಾದ್, ರಾಜಸ್ಥಾನ, ಅಸ್ಸಾಂ, ಕೀನ್ಯಾಗಳಲ್ಲಿ ಸಿನಿಮಾದ ಚಿತ್ರೀಕರಣವನ್ನು ರಾಜಮೌಳಿ ಮುಗಿಸಿದ್ದಾರೆ. ಇತ್ತೀಚೆಗಷ್ಟೆ ಕೀನ್ಯಾ, ನೈರೋಬಿ ಇನ್ನಿತರೆ ದೇಶಗಳಲ್ಲಿ ಚಿತ್ರೀಕರಣ ಮುಗಿಸಿ ಮರಳಿ ಬಂದಿರುವ ರಾಜಮೌಳಿ, ಹಠಾತ್ತನೆ ಮಹೇಶ್ ಬಾಬು ಸಿನಿಮಾಕ್ಕೆ ಬ್ರೇಕ್ ಕೊಟ್ಟಿದ್ದು, ಮತ್ತೆ ‘ಬಾಹುಬಲಿ’ ಸಿನಿಮಾಗೆ ಕೈ ಹಾಕಿದ್ದಾರೆ.
‘ಬಾಹುಬಲಿ’ ಸಿನಿಮಾ ಬಿಡುಗಡೆ ಆಗಿ 10 ವರ್ಷಗಳಾಗಿವೆ. ಇಡೀ ಭಾರತೀಯ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ಸಿನಿಮಾ ಅದು. ರಾಜಮೌಳಿ ನಿರ್ದೇಶನದ ಆ ಸಿನಿಮಾ ಭಾರತೀಯ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಸಿನಿಮಾ ಆಗಿದೆ. ಸಿನಿಮಾದ ಎರಡು ಭಾಗಗಳು ಮುಗಿದು ಹೋಗಿದ್ದು, ಕತೆಯೂ ಪೂರ್ಣವಾಗಿದೆ. ಆದರೆ ಇದೀಗ ಮತ್ತೊಮ್ಮೆ ನಿರ್ದೇಶಕ ರಾಜಮೌಳಿ ‘ಬಾಹುಬಲಿ’ ಸಿನಿಮಾಕ್ಕೆ ಕೈ ಹಾಕಿದ್ದಾರೆ. ಅದೂ ಮಹೇಶ್ ಬಾಬು ಸಿನಿಮಾಕ್ಕೆ ಬ್ರೇಕ್ ನೀಡಿ.
ಅಸಲಿಗೆ ‘ಬಾಹುಬಲಿ’ ಸಿನಿಮಾ ಬಿಡುಗಡೆ ಆಗಿ ಹತ್ತು ವರ್ಷಗಳಾದ ಕಾರಣ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗುತ್ತಿದೆ. ಎಲ್ಲರಿಗೂ ಗೊತ್ತಿರುವಂತೆ ‘ಬಾಹುಬಲಿ’ ಸಿನಿಮಾ ಎರಡು ಭಾಗದಲ್ಲಿ ಬಿಡುಗಡೆ ಆಗಿತ್ತು. 2015 ರಲ್ಲಿ ಒಂದು ಹಾಗೂ 2017 ರಲ್ಲಿ ಮತ್ತೊಂದು ಸಿನಿಮಾ ಬಿಡುಗಡೆ ಆಗಿತ್ತು. ಎರಡೂ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿದ್ದವು. ಇದೀಗ ಈ ಸಿನಿಮಾ ಮರು ಬಿಡುಗಡೆ ಆಗುತ್ತಿದ್ದು, ಎರಡು ಸಿನಿಮಾಗಳ ಬದಲಾಗಿ ಒಂದೇ ಸಿನಿಮಾ ಆಗಿ ಮರು ಬಿಡುಗಡೆ ಆಗಲಿರುವುದು ವಿಶೇಷ.
ಇದನ್ನೂ ಓದಿ:ರಾಜಮೌಳಿಯ ಭೇಟಿಯಾಗದೆ ಓಡಿ ಹೋಗಿದ್ದ ತರುಣ್ ಸುಧೀರ್
ಅಕ್ಟೋಬರ್ 31 ರಂದು ‘ಬಾಹುಬಲಿ: ದಿ ಎಪಿಕ್’ ಹೆಸರಿನಲ್ಲಿ ‘ಬಾಹುಬಲಿ’ ಸಿನಿಮಾದ ಎರಡೂ ಭಾಗಗಳು ಒಂದೇ ಸಿನಿಮಾ ಆಗಿ ಬಿಡುಗಡೆ ಆಗಲಿದೆ. ‘ಬಾಹುಬಲಿ’ ಸಿನಿಮಾದ ಎರಡು ಭಾಗಗಳನ್ನು ಒಂದೇ ಭಾಗವನ್ನಾಗಿ ಮಾಡುವ ಕಾರ್ಯದಲ್ಲಿ ಇದೀಗ ರಾಜಮೌಳಿ ತೊಡಗಿಕೊಂಡಿದ್ದಾರೆ. ‘ಬಾಹುಬಲಿ: ದಿ ಬಿಗಿನಿಂಗ್’ ಮತ್ತು ‘ಬಾಹುಬಲಿ: ದಿ ಕನ್ಕ್ಲೂಷನ್’ ಎರಡೂ ಸಿನಿಮಾಗಳು ಸೇರಿ ಐದು ಗಂಟೆಗೂ ಹೆಚ್ಚು ಅವಧಿ ಆಗುತ್ತದೆ. ಆದರೆ ಇದೀಗ ರಾಜಮೌಳಿ ಅವರು ಎಡಿಟಿಂಗ್ ಜವಾಬ್ದಾರಿ ವಹಿಸಿಕೊಂಡು ಸಿನಿಮಾದ ಅವಧಿಯನ್ನು 3:30 ಗಂಟೆಗೆ ಇಳಿಸುತ್ತಿದ್ದಾರೆ.
‘ಬಾಹುಬಲಿ’ ಸಿನಿಮಾಗಳನ್ನು ಕೋಟಗಿರಿ ವೆಂಕಟೇಶ್ವರ ರಾವ್ ಅವರು ಸಂಕಲನ ಮಾಡಿದ್ದರು. ಇದೀಗ ರಾಜಮೌಳಿ ಅವರು ಇತರೆ ಸಂಕಲನಕಾರರ ಸಹಾಯದೊಂದಿಗೆ ಎರಡೂ ಸಿನಿಮಾಗಳ ಹಲವು ದೃಶ್ಯಗಳನ್ನು ತೆಗೆದು, ಕೆಲವು ವಾಯ್ಸ್ ಓವರ್ಗಳನ್ನು ಸೇರಿಸಿ, ಹಾಡುಗಳನ್ನು ತೆಗೆದು ಒಟ್ಟಾರೆಯಾಗಿ 3:30 ನಿಮಿಷಕ್ಕೆ ಇಳಿಸಿದ್ದಾರೆ. ಸಿನಿಮಾಕ್ಕೆ ‘ಬಾಹುಬಲಿ: ದಿ ಎಪಿಕ್’ ಎಂದು ಹೆಸರಿಡಲಾಗಿದ್ದು, ಸಿನಿಮಾ ಅಕ್ಟೋಬರ್ 31ರಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:10 pm, Sat, 4 October 25




