ಭೀಕರ ರಸ್ತೆ ಅಪಘಾತ: ನಜ್ಜುಗುಜ್ಜಾದ ಕಾರು, ಖ್ಯಾತ ಗಾಯಕ ಸ್ಥಳದಲ್ಲೇ ಸಾವು

|

Updated on: Mar 30, 2021 | 6:45 PM

ಮಂಗಳವಾರ (ಮಾ.30) ಮುಂಜಾನೆ ಬೆಳಗ್ಗೆ ಅಮೃತ್​ಸರದಿಂದ ಕರ್ತಾಪುರ್​ನಲ್ಲಿರುವ ತಮ್ಮ ನಿವಾಸಕ್ಕೆ ದಿಲ್​​ಜಾನ್​ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಟ್ರಕ್​ಗೆ ಡಿಕ್ಕಿ ಗುದ್ದಿದೆ.

ಭೀಕರ ರಸ್ತೆ ಅಪಘಾತ: ನಜ್ಜುಗುಜ್ಜಾದ ಕಾರು, ಖ್ಯಾತ ಗಾಯಕ ಸ್ಥಳದಲ್ಲೇ ಸಾವು
ಮೃತಪಟ್ಟ ದಿಲ್​ಜಾನ್​
Follow us on

ಅಮೃತ್​ ಸರದ ಜಂಡಿಯಾಲಾ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಖ್ಯಾತ ಪಂಜಾಬಿ ಸಿಂಗರ್​ ದಿಲ್​ಜಾನ್​ (31) ಅವರು ಮೃತಪಟ್ಟಿದ್ದಾರೆ. ಅವರ ಸಾವಿಗೆ ಟ್ವಿಟರ್​ನಲ್ಲಿ ಶೋಕ ವ್ಯಕ್ತವಾಗಿದೆ. ಮಂಗಳವಾರ (ಮಾ.30) ಮುಂಜಾನೆ ಬೆಳಗ್ಗೆ ಅಮೃತ್​ಸರದಿಂದ ಕರ್ತಾಪುರ್​ನಲ್ಲಿರುವ ತಮ್ಮ ನಿವಾಸಕ್ಕೆ ದಿಲ್​​ಜಾನ್​ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಟ್ರಕ್​ಗೆ ಡಿಕ್ಕಿ ಗುದ್ದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು. ದಿಲ್​ಜಾನ್​ ಹೆಂಡತಿ ಹಾಗೂ ಮಕ್ಕಳು ಕೆನಡಾದಲ್ಲಿ ವಾಸವಾಗಿದ್ದಾರೆ.

ಅಪಘಾತವಾಗಿದ್ದು ಹೇಗೆ?
ದಿಲ್​ಜಾನ್​ ಕರ್ತಾಪುರ್​​ದಲ್ಲಿ ವಾಸವಾಗಿದ್ದಾರೆ. ಮಂಗಳವಾರ ಮುಂಜಾನೆ ಅಮೃತ್​ಸರ-ಜಲಂದರ್​ ಜಿಟಿ ರಸ್ತೆಯಲ್ಲಿ ದಿಲ್​ಜಾನ್​ ತಮ್ಮ ಕಾರಿನಲ್ಲಿ ಸಾಗುತ್ತಿದ್ದರು. ಅಪಘಾತವಾದ ರಭಸಕ್ಕೆ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು ಎನ್ನುವ ಮಾಹಿತಿ ಕೂಡ ಕೇಳಿ ಬಂದಿದೆ. ಈ ಅಪಘಾತಕ್ಕೆ ಕಾರಣವೇನು ಎನ್ನುವ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದಿಲ್​ಜಾನ್​ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕೆಲ ವರದಿಗಳ ಪ್ರಕಾರ ಕಾರು ವೇಗವಾಗಿ ಸಾಗುತ್ತಿತ್ತಂತೆ. ಹೀಗಾಗಿ, ಕಾರು ನಿಯಂತ್ರಣ ಕಳೆದುಕೊಂಡು ಲಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ.

ಪಂಜಾಬಿ ಇಂಡಸ್ಟ್ರಿ ಕಂಬನಿ
ದಿಲ್​ಜಾನ್​ ಸಾವಿಗೆ ಪಂಜಾಬಿ ಸಂಗೀತ ಇಂಡಸ್ಟ್ರಿ ಬೇಸರ ಹೊರ ಹಾಕಿದೆ. ಸಾಕಷ್ಟು ಜನರು ಸಾಮಾಜಿಕ ಜಾಲತಾಣದಲ್ಲಿ ಈ ಗಾಯಕನಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ದಿಲ್​ಜಾನ್​ ಯಾರು?
ದಿಲ್​ಜಾನ್​ ಪಂಜಾಬ್​ನ ಖ್ಯಾತ ಸಿಂಗರ್​. ಸುರ್​ ಕ್ಷೇತ್ರ (2012) ರಿಯಾಲಿಟಿ ಶೋನ ಸ್ಪರ್ಧಿ ಆಗಿದ್ದರು. ಈ ಕಾರ್ಯಕ್ರಮದ ನಂತರ ಇವರ ಖ್ಯಾತಿ ಹೆಚ್ಚಿತ್ತು. ದಿಲ್​ಜಾನ್​ ಸಾಕಷ್ಟು ಪಂಜಾಬಿ ಹಾಡುಗಳಿಗೆ ಧ್ವನಿ ಆಗಿದ್ದಾರೆ.

ಇದನ್ನೂ ಓದಿ: Tamil Nadu: ಧಾರಾಪುರಂನಲ್ಲಿ ಕಾರು ಅಪಘಾತ; ತಮಿಳುನಾಡು ವಿಧಾನಸಭೆಯ ಸ್ಪೀಕರ್ ಪಿ.ಧನಪಾಲ್​ಗೆ ಗಾಯ

Published On - 6:27 pm, Tue, 30 March 21