‘ಲೈಗರ್’ ಸೋಲಿನ ಬಳಿಕ ಹೀನಾಯ ಪರಿಸ್ಥಿತಿ ತಲುಪಿದ ಪುರಿ ಜಗನ್ನಾಥ್; ಹುಡುಕಿದರೂ ಸಿಗ್ತಿಲ್ಲ ಹೀರೋಗಳು

|

Updated on: Mar 25, 2023 | 10:14 AM

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ವಿಜಯ್ ದೇವರಕೊಂಡ ಹಾಗೂ ಪುರಿ ಜಗನ್ನಾಥ್ ಮತ್ತೊಂದು ಸಿನಿಮಾ ಒಟ್ಟಾಗಿ ಮಾಡಬೇಕಿತ್ತು.ಸದ್ಯ ಸಿನಿಮಾ ಹೋಲ್ಡ್​ನಲ್ಲಿದೆ.

‘ಲೈಗರ್’ ಸೋಲಿನ ಬಳಿಕ ಹೀನಾಯ ಪರಿಸ್ಥಿತಿ ತಲುಪಿದ ಪುರಿ ಜಗನ್ನಾಥ್; ಹುಡುಕಿದರೂ ಸಿಗ್ತಿಲ್ಲ ಹೀರೋಗಳು
Follow us on

ನಿರ್ದೇಶಕ ಪುರಿ ಜಗನ್ನಾಥ್ (Puri Jagannadh) ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಪುನೀತ್ ರಾಜ್​ಕುಮಾರ್ ನಟನೆಯ ಮೊದಲ ಸಿನಿಮಾ ‘ಅಪ್ಪು’ ಚಿತ್ರವನ್ನು (Appu Movie) ಡೈರೆಕ್ಷನ್ ಮಾಡಿದ್ದು ಪುರಿ ಜಗನ್ನಾಥ್ ಅವರೇ. ಆದರೆ, ಇತ್ತೀಚೆಗೆ ಅವರು ಟ್ರ್ಯಾಕ್ ತಪ್ಪಿದ್ದಾರೆ. ಎಷ್ಟೇ ಪ್ರಯತ್ನಪಟ್ಟರೂ ಗೆಲುವಿನ ರುಚಿ ಸವಿಯಲು ಸಾಧ್ಯವಾಗುತ್ತಿಲ್ಲ. ‘ಲೈಗರ್’ ಸೋಲಿನ ಬಳಿಕ ಅವರ ಪರಿಸ್ಥಿತಿ ಹೀನಾಯ ಸ್ಥಿತಿ ತಲುಪಿದೆ. ಅವರ ಮುಂದಿನ ಚಿತ್ರಕ್ಕೆ ಹೀರೋ ಆಗೋಕೆ ಯಾರೂ ಮುಂದೆ ಬರುತ್ತಿಲ್ಲ. ಹೀಗೆ ಮುಂದುವರಿದರೆ ನಿರ್ದೇಶಕರಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.

ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಸಿನಿಮಾ ಕಳೆದ ವರ್ಷ ರಿಲೀಸ್ ಆಯಿತು. ಬಾಕ್ಸಿಂಗ್ ಕಥೆ ಆಧರಿಸಿ ಸಿನಿಮಾ ಸಿದ್ಧಗೊಂಡಿತ್ತು. ಸಿನಿಮಾ ಪ್ರಚಾರದ ವೇಳೆ ಕೊಟ್ಟ ಬಿಲ್ಡಪ್​​ಗೂ ಸಿನಿಮಾಗೂ ಯಾವುದೇ ಸಂಬಂಧ ಇರಲಿಲ್ಲ. ಸಿನಿಮಾ ಹೀನಾಯ ಸೋಲು ಕಂಡಿತು. ಇದರಿಂದ ಪುರಿ ಜಗನ್ನಾಥ್ ಅವರ ಮೇಲಿದ್ದ ನಂಬಿಕೆ ಸಂಪೂರ್ಣವಾಗಿ ನಾಶವಾಯಿತು. ಹೀಗಾಗಿ ಯಾರೂ ಅವರ ಜೊತೆ ಸಿನಿಮಾ ಮಾಡುತ್ತಿಲ್ಲ.

ಒಪ್ಪಿಕೊಂಡಿದ್ದ ಸಿನಿಮಾ ಕೂಡ ನಿಂತು ಹೋಯಿತು

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ವಿಜಯ್ ದೇವರಕೊಂಡ ಹಾಗೂ ಪುರಿ ಜಗನ್ನಾಥ್ ಮತ್ತೊಂದು ಸಿನಿಮಾ ಒಟ್ಟಾಗಿ ಮಾಡಬೇಕಿತ್ತು. ಈ ಚಿತ್ರಕ್ಕೆ ‘ಜನ ಗಣ ಮನ’ ಎಂದು ಶೀರ್ಷಿಕೆ ಇಡಲಾಗಿತ್ತು. ಅದ್ದೂರಿಯಾಗಿ ಈ ಚಿತ್ರಕ್ಕೆ ಚಾಲನೆ ಕೂಡ ನೀಡಲಾಗಿತ್ತು. ಆದರೆ, ಈ ಸಿನಿಮಾದ ಕೆಲಸಗಳು ನಿಂತಿವೆ. ಆದರೆ, ‘ಲೈಗರ್’ ಸೋಲಿನ ಬಳಿಕ ವಿಜಯ್ ಹಿಂದೇಟು ಹಾಕಿದ್ದಾರೆ. ಸದ್ಯ ಸಿನಿಮಾ ಹೋಲ್ಡ್​ನಲ್ಲಿದೆ.

ರಾಮ್ ಚರಣ್​ ಕೂಡ ನೋ ಅಂದ್ರು

ರಾಮ್ ಚರಣ್ ಜೊತೆ ಕೆಲಸ ಮಾಡಲು ಪುರಿ ಜಗನ್ನಾಥ್ ಪ್ಲ್ಯಾನ್ ಮಾಡಿಕೊಂಡರು. ಚಿರಂಜೀವಿ ಮೂಲಕ ರಾಮ್ ಚರಣ್​ಗೆ ಕಥೆ ಹೇಳುವ ಕೆಲಸವೂ ಆಗಿತ್ತು. ಆದರೆ, ಯಾವುದೂ ವರ್ಕೌಟ್ ಆಗಿಲ್ಲ. ರಾಮ್ ಚರಣ್ ಒಂದೇ ಮಾತಿನಲ್ಲಿ ನೋ ಎಂದಿದ್ದರು. ಅಂದಹಾಗೆ, ರಾಮ್ ಚರಣ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಪುರಿ ಜಗನ್ನಾಥ್ ಅವರೇ.

ಹೊಸ ಹೀರೋ ಜೊತೆಯೂ ಇಲ್ಲ ಅವಕಾಶ

ಸ್ಟಾರ್ ಹೀರೋಗಳು ಸಿಗದ ಕಾರಣ ಹೊಸ ಹೀರೋ ಜೊತೆ ಸಿನಿಮಾ ಮಾಡೋಕೆ ಪುರಿ ಜಗನ್ನಾಥ್ ಪ್ಲ್ಯಾನ್ ರೂಪಿಸಿದರು. ‘ಇಸ್ಮಾರ್ಟ್ ಶಂಕರ್’ ಖ್ಯಾತಿಯ ರಾಮ್ ಪೋತಿನೇನಿ ಜೊತೆ ಮಾತುಕತೆ ನಡೆಸಿದರು. ಇದು ಕೂಡ ವರ್ಕೌಟ್ ಆಗುವ ರೀತಿಯಲ್ಲಿ ಇಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:34 am, Sat, 25 March 23