‘ಪುಷ್ಪ 2’ ಸಿನಿಮಾ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದ ಶೂಟಿಂಗ್ ಅರ್ಧಕ್ಕೆ ನಿಂತಿದೆ ಎಂದೆಲ್ಲ ವರದಿ ಆಗಿತ್ತು. ಈಗ ಮತ್ತೆ ಚಿತ್ರದ ಶೂಟಿಂಗ್ ಆರಂಭ ಆಗಿದೆ. ಈ ಸಿನಿಮಾದ ಕ್ಲೈಮ್ಯಾಕ್ಸ್ ಹಂತದ ಶೂಟಿಂಗ್ ನಡೆಯುತ್ತಿದೆ. ಶಾಕಿಂಗ್ ವಿಚಾರ ಎಂದರೆ ಈ ಚಿತ್ರದ ಕ್ಲೈಮ್ಯಾಕ್ಸ್ ಶೂಟ್ನ ವಿಡಿಯೋ ಲೀಕ್ ಆಗಿದೆ. ಇದು ಅಲ್ಲು ಅರ್ಜುನ್ ಅಭಿಮಾನಿಗಳ ಕೋಪಕ್ಕೆ ಕಾರಣ ಆಗಿದೆ. ಈ ಬಗ್ಗೆ ಅನೇಕರು ಅಸಮಾಧಾನ ಹೊರಹಾಕಿದ್ದಾರೆ.
ಸುಕುಮಾರ್ ಅವರು ‘ಪುಷ್ಪ 2’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಡಾಲಿ ಧನಂಜಯ್ ಸೇರಿ ಅನೇಕರು ಸಿನಿಮಾದಲ್ಲಿ ಇದ್ದಾರೆ. ಈ ಚಿತ್ರದ ಶೂಟಿಂಗ್ನಲ್ಲಿ ಫೋನ್ ಬಳಕೆ ನಿಷೇಧಿಸಲಾಗಿದೆ. ಆದಾಗ್ಯೂ ಕೆಲವರು ಮೊಬೈಲ್ನ ಸೆಟ್ ಒಳಗೆ ತೆಗೆದುಕೊಂಡು ಹೋಗಿದ್ದಾರೆ. ಕ್ಲೈಮ್ಯಾಕ್ಸ್ ಹಂತದ ಶೂಟಿಂಗ್ನ ಕದ್ದು ಚಿತ್ರೀಕರಿಸಿದ್ದಾರೆ. ಸದ್ಯ ವಿಡಿಯೋ ಲೀಕ್ ಆಗಿದೆ.
ಅಲ್ಲು ಅರ್ಜುನ್ ಅವರು ಕ್ಲೈಮ್ಯಾಕ್ಸ್ ಶೂಟ್ನಲ್ಲಿ ಬ್ಯುಸಿ ಇರೋದು ಕಂಡು ಬಂದಿದೆ. ರಕ್ತಸಿಕ್ತವಾದ ವ್ಯಕ್ತಿ ಅಲ್ಲು ಅರ್ಜುನ್ಗೆ ಹೊಡೆಯಲು ಮುಂದಾಗುತ್ತಿರುವ ರೀತಿಯಲ್ಲಿ ಈ ವಿಡಿಯೋ ಇದೆ. ಸದ್ಯ ಈ ವಿಡಿಯೋ ಫ್ಯಾನ್ ಪೇಜ್ಗಳಲ್ಲಿ ವೈರಲ್ ಆಗುತ್ತಿದೆ. ಅನೇಕರು ಈ ವಿಡಿಯೋನ ತೆಗೆಯಬೇಕು ಎಂದು ಆಗ್ರಹಿಸುತ್ತಿದ್ದಾರೆ.
#Pushpa2 Climax Fight Scene 😉
Enjoy pandagowww 💥🥵😎@alluarjun #Pushpa2TheRule pic.twitter.com/EyGDhWtvzu
— Jaisai Nimmala (Allu Arjun Die Hard Fan) (@NimmalaJaisai23) July 30, 2024
‘ಪುಷ್ಪ 2’ ಸಿನಿಮಾ ತಂಡ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದೆ. ಹೀಗಾಗಿ, ಈ ವರೆಗೆ ಯಾವುದೇ ಫೋಟೋ ಹಾಗೂ ವಿಡಿಯೋಗಳು ಲೀಕ್ ಆಗಿರಲಿಲ್ಲ. ಇದೇ ಮೊದಲ ಬಾರಿಗೆ ಸೆಟ್ನ ಫೋಟೋ ಹಾಗೂ ವಿಡಿಯೋಗಳು ಲೀಕ್ ಆಗಿವೆ.
ಇದನ್ನೂ ಓದಿ: ‘ಪುಷ್ಪ 2’ ಚಿತ್ರಕ್ಕಾಗಿ ಇನ್ನೂ ಆರು ತಿಂಗಳು ಶೂಟ್ ಮಾಡೋಕೆ ರೆಡಿ ಇದ್ದಾರೆ ಅಲ್ಲು ಅರ್ಜುನ್
‘ಪುಷ್ಪ 2’ ಸಿನಿಮಾ ಆಗಸ್ಟ್ 15ರಂದು ರಿಲೀಸ್ ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರದ ಬಿಡುಗಡೆ ದಿನಾಂಕ ಡಿಸೆಂಬರ್ 6ಕ್ಕೆ ಮುಂದೂಡಲ್ಪಟ್ಟಿದೆ. ‘ಪುಷ್ಪ’ ರಿಲೀಸ್ ಆಗಿ ಮೂರು ವರ್ಷಗಳ ಬಳಿಕ ಎರಡನೇ ಭಾಗ ರಿಲೀಸ್ ಆಗುತ್ತಿದೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಗಳಿಕೆ ಮಾಡೋ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.