AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಪ್ಪಿಗೆ ಇಲ್ಲದೆ ಪತ್ನಿಯ ಗರ್ಭಕೋಶ ತೆಗೆಸಿದ ಗಾಯಕ; ದಾಖಲಾಯ್ತು ದೂರು

ಖ್ಯಾತ ಗಾಯಕ ಉದಿತ್ ನಾರಾಯಣ್ ವಿರುದ್ಧ ಅವರ ಮೊದಲ ಪತ್ನಿ ರಂಜನಾ ಗಂಭೀರ ಆರೋಪ ಮಾಡಿದ್ದಾರೆ. ಉದಿತ್ ಹಾಗೂ ಅವರ ಸಹೋದರರು 1996ರಲ್ಲಿ ತನ್ನ ಒಪ್ಪಿಗೆ ಇಲ್ಲದೆ ಗರ್ಭಕೋಶ ತೆಗೆಸಿದ್ದಾರೆ ಎಂದು ರಂಜನಾ ಬಿಹಾರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವೈದ್ಯಕೀಯ ಚಿಕಿತ್ಸೆಯ ನೆಪದಲ್ಲಿ ದೆಹಲಿಯ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ ಎಂದು ಅವರು ವಿವರಿಸಿದ್ದಾರೆ.

ಒಪ್ಪಿಗೆ ಇಲ್ಲದೆ ಪತ್ನಿಯ ಗರ್ಭಕೋಶ ತೆಗೆಸಿದ ಗಾಯಕ; ದಾಖಲಾಯ್ತು ದೂರು
ಉದಿತ್ ನಾರಾಯಣ್
ರಾಜೇಶ್ ದುಗ್ಗುಮನೆ
|

Updated on: Feb 12, 2026 | 12:57 PM

Share

ಖ್ಯಾತ ಗಾಯಕ ಉದಿತ್ ನಾರಾಯಣ್ (Udit Narayana) ಈಗ ಸುದ್ದಿಯಲ್ಲಿದ್ದಾರೆ. ಅವರು ಈ ಮೊದಲು ಕಾನ್ಸರ್ಟ್ ವೇಳೆ ಅಭಿಮಾನಿಗೆ ಕಿಸ್ ಮಾಡಿ ವಿವಾದ ಮಾಡಿಕೊಂಡಿದ್ದರು. ಈ ಬಾರಿ ಅವರು ಮೊದಲ ಪತ್ನಿಯಿಂದಲೇ ಗಂಭೀರ ಆರೋಪ ಎದುರಿಸಬೇಕಾದ ಪರಿಸ್ಥಿತಿ ಬಂದಿದೆ. ಉದಿತ್ ಹಾಗೂ ಅವರ ಇಬ್ಬರು ಸಹೋದರರು ಸೇರಿ ಮೋಸದಿಂದ ತಮ್ಮ ಗರ್ಭಕೋಶ ತೆಗೆಸಿದ್ದಾರೆ ಎಂದು ಉದಿತ್ ಮೊದಲ ಪತ್ನಿ ರಂಜನಾ ಆರೋಪಿಸಿದ್ದಾರೆ. ರಂಜನಾ ಅವರು ಬಿಹಾರದ ಸುಪೌಲ್​​ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಫೆಬ್ರವರಿ 10ರಂದು ದೂರು ದಾಖಲು ಮಾಡಿದ್ದಾರೆ. ನನ್ನ ಒಪ್ಪಿಗೆ ಇಲ್ಲದೆ ಪತಿ ಈ ಕೆಲಸ ಮಾಡಿದ್ದಾರೆ ಎಂಬುದು ಅವರ ಆರೋಪ.

ವೈದ್ಯಕೀಯ ಚಿಕಿತ್ಸೆಗೆಂದು ತೆರಳಿದಾಗ ಗರ್ಭಕೋಶ ಇಲ್ಲದ ವಿಷಯ ರಂಜನಾಗೆ ಗೊತ್ತಾಗಿದೆಯಂತೆ. 1984ರ ಡಿಸೆಂಬರ್ 7ರಂದು ಹಿಂದೂ ಪದ್ಧತಿ ಪ್ರಕಾರ ರಂಜನ್ ಹಾಗೂ ಉದಿತ್ ವಿವಾಹ ಆದರು. ಉದಿತ್ ಸಂಗೀತ ವೃತ್ತಿಯನ್ನು ಮುಂದುವರಿಸಲು 1985ರಲ್ಲಿ ಮುಂಬೈಗೆ ಸ್ಥಳಾಂತರಗೊಂಡರು. ಅಲ್ಲಿ ಅವರು ದೀಪಾ ನಾರಾಯಣ್ ಅವರನ್ನು ಮದುವೆ ಆಗಿದ್ದಾರೆ ಎಂಬ ವಿಷಯ ರಂಜನಾಗೆ ಆಗ ತಿಳಿಯಿತು. ಕೇಳಿದರೆ ಯಾವುದೋ ಒಂದು ಸಬೂಬು ಹೇಳಿ ವಿಷಯ ಮರೆಸುತ್ತಿದ್ದರಂತೆ ಉದಿತ್.

‘1996ರಲ್ಲಿ ವೈದ್ಯಕೀಯ ಚಿಕಿತ್ಸೆಯ ನೆಪದಲ್ಲಿ, ಉದಿತ್ ತನ್ನ ಸಹೋದರರಾದ ಸಂಜಯ್ ಕುಮಾರ್ ಝಾ ಮತ್ತು ಲಲಿತ್ ನಾರಾಯಣ್ ಝಾ ಜೊತೆಗೂಡಿ ದೆಹಲಿಯ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ತನ್ನ ಒಪ್ಪಿಗೆಯಿಲ್ಲದೆ ಗರ್ಭಕೋಶವನ್ನು ತೆಗೆಸಿದರು. ಆ ಸಮಯದಲ್ಲಿ ದೀಪಾ ನಾರಾಯಣ್ ಕೂಡ ಆಸ್ಪತ್ರೆಯಲ್ಲಿದ್ದರು’ ಎಂದು ರಂಜನಾ ಆರೋಪಿಸಿದ್ದಾರೆ.

ಇದನ್ನೂ ಓದಿ: ನಿಲ್ಲುತ್ತಿಲ್ಲ ಉದಿತ್ ನಾರಾಯಣ್ ಹಾವಳಿ; ಕಾನ್ಸರ್ಟ್​ ವೇಳೆ ಮತ್ತೋರ್ವ ಅಭಿಮಾನಿಯ ತುಟಿಗೆ ಚುಂಬನ

2006ರಲ್ಲಿ ಮುಂಬೈಗೆ ಭೇಟಿ ನೀಡಿದಾಗ, ಉದಿತ್ ಮತ್ತು ದೀಪಾ ಅವರಿಂದ ದೌರ್ಜನ್ಯಕ್ಕೊಳಗಾಗಿರೋದಾಗಿ ಅವರು ಹೇಳಿಕೊಂಡಿದ್ದಾರೆ. ‘ನಾನು ಅಸ್ವಸ್ಥಳಾಗಿದ್ದೇನೆ. ಹೀಗಾಗಿ, ಉದಿತ್ ಅವರ ಬೆಂಬಲದ ಅಗತ್ಯವಿದೆ’ ಎಂದು ಅವರು ಕೋರಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
TV9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ DIG ಬೋರಲಿಂಗಯ್ಯ, ಅರುಣ್ ಯೋಗಿರಾಜ್
TV9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ DIG ಬೋರಲಿಂಗಯ್ಯ, ಅರುಣ್ ಯೋಗಿರಾಜ್
ಹುಬ್ಬಳ್ಳಿ ಪುಷ್ಕರಣಿ ವಿವಾದ: ಪ್ರದೀಪ್ ಶೆಟ್ಟರ್ ಅನೇಕ ನಾಯಕರಿಂದ ಪ್ರತಿಭಟನೆ
ಹುಬ್ಬಳ್ಳಿ ಪುಷ್ಕರಣಿ ವಿವಾದ: ಪ್ರದೀಪ್ ಶೆಟ್ಟರ್ ಅನೇಕ ನಾಯಕರಿಂದ ಪ್ರತಿಭಟನೆ
ಬಾಂಗ್ಲಾ ಅಕ್ರಮ ವಲಸಿಗರ ಕಾಟ; ಅರೆಸ್ಟ್ ಆದವ್ರ ಹಿನ್ನೆಲೆ ಏನು?
ಬಾಂಗ್ಲಾ ಅಕ್ರಮ ವಲಸಿಗರ ಕಾಟ; ಅರೆಸ್ಟ್ ಆದವ್ರ ಹಿನ್ನೆಲೆ ಏನು?
ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ
ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!