ಮೇ 1 ಅಲ್ಲು ಅರ್ಜುನ್​ ಅಭಿಮಾನಿಗಳಿಗೆ ವಿಶೇಷ ದಿನ; ‘ಪುಷ್ಪ 2’ ತಂಡದ ಸಿಹಿ ಸುದ್ದಿ

ಅಲ್ಲು ಅರ್ಜುನ್​ ನಟನೆಯ ‘ಪುಷ್ಪ 2’ ಸಿನಿಮಾದ ಆಡಿಯೋ ಬಿಡುಗಡೆಗೆ ಸಿದ್ಧತೆ ನಡೆದಿದೆ. ಒಂದೊಂದೇ ಹಾಡುಗಳನ್ನು ರಿಲೀಸ್​ ಮಾಡಲು ಸಕಲ ತಯಾರಿ ಆಗಿದೆ. ಈಗ ಮೊದಲ ಹಾಡಿನ ಲಿರಿಕಲ್ ವಿಡಿಯೋ ಮೇ 1ಕ್ಕೆ ಅನಾವರಣ ಆಗಲಿದೆ. ಈ ಹಾಡಿನಲ್ಲಿ ಪುಷ್ಪ ರಾಜ್​ ಪಾತ್ರದ ಗುಣಗಾನ ಮಾಡಲಾಗುವುದು. ಈ ಸಿನಿಮಾಗೆ ದೇವಿ ಶ್ರೀ ಪ್ರಸಾದ್​ ಸಂಗೀತ ನೀಡಿದ್ದಾರೆ.

ಮೇ 1 ಅಲ್ಲು ಅರ್ಜುನ್​ ಅಭಿಮಾನಿಗಳಿಗೆ ವಿಶೇಷ ದಿನ; ‘ಪುಷ್ಪ 2’ ತಂಡದ ಸಿಹಿ ಸುದ್ದಿ
ಪುಷ್ಪ 2

Updated on: Apr 24, 2024 | 6:42 PM

ಭಾರಿ ಬಜೆಟ್​ನಲ್ಲಿ ನಿರ್ಮಾಣ ಆಗುತ್ತಿರುವ ‘ಪುಷ್ಪ 2’ (Pushpa 2) ಸಿನಿಮಾಗೆ ಈಗಾಗಲೇ ಪ್ರಚಾರ ಕಾರ್ಯ ಆರಂಭ ಆಗಿದೆ. ಸಿನಿಮಾದ ಆಡಿಯೋ ರಿಲೀಸ್​ಗಾಗಿ ಎಲ್ಲರೂ ಕಾದಿದ್ದಾರೆ. ಈ ಬಗ್ಗೆ ಚಿತ್ರತಂಡದಿಂದ ಅಪ್​ಡೇಟ್​ ಸಿಕ್ಕಿದೆ. ಅಲ್ಲು ಅರ್ಜುನ್​ (Allu Arjun), ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’ ಸಿನಿಮಾದ ಮೊದಲ ಹಾಡಿನ (Pushpa 2 First Song) ಬಿಡುಗಡೆಗೆ ತಯಾರಿ ನಡೆದಿದೆ. ಇಂದು (ಏಪ್ರಿಲ್​ 24) ಪ್ರೋಮೋ ಮೂಲಕ ಮಾಹಿತಿ ಹಂಚಿಕೊಳ್ಳಲಾಗಿದೆ. ಅದರ ಜೊತೆಗೆ ದಿನಾಂಕವನ್ನು ತಿಳಿಸಲಾಗಿದೆ. ಮೇ 1ರಂದು ‘ಪುಷ್ಪ 2’ ಚಿತ್ರದ ಮೊದಲ ಹಾಡಿನ ಲಿರಿಕಲ್​ ವಿಡಿಯೋ ಬಿಡುಗಡೆ ಆಗಲಿದೆ.

ದೇವಿ ಶ್ರೀ ಪ್ರಸಾದ್​ ಅವರು ‘ಪುಷ್ಪ 2’ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ‘ಪುಷ್ಪ’ ಸಿನಿಮಾದಲ್ಲಿ ‘ಶ್ರೀವಲ್ಲಿ..’, ‘ಉ ಅಂಟಾವಾ ಮಾವ..’ ಮುಂತಾದ ಹಾಡುಗಳಿಂದ ದೇವಿ ಶ್ರೀ ಪ್ರಸಾದ್​ ಅವರು ಹೊಸ ಕ್ರೇಜ್​ ಸೃಷ್ಟಿ ಮಾಡಿದ್ದರು. ಈಗ ಅವರ ಮೇಲೆ ‘ಪುಷ್ಪ 2’ ಹಾಡುಗಳ ಕುರಿತಂತೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಮೊದಲ ಹಾಡು ಹೊರಬಂದ ಬಳಿಕ ಅಭಿಮಾನಿಗಳ ಹೈಪ್​ ಇನ್ನಷ್ಟು ಜೋರಾಗುವುದು ಖಚಿತ.

ಇದನ್ನೂ ಓದಿ: 51 ಟೇಕ್​ ತೆಗೆದುಕೊಂಡ ಅಲ್ಲು ಅರ್ಜುನ್​; ‘ಪುಷ್ಪ 2’ ಟೀಸರ್​ ಹಿಂದಿದೆ ಅಚ್ಚರಿ ವಿಷಯ

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿದ್ದ ‘ಪುಷ್ಪ’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ನೂರಾರು ಕೋಟಿ ರೂಪಾಯಿ ಕಮಾಯಿ ಮಾಡಿತ್ತು. ಈಗ ಅದರ ಸೀಕ್ವೆಲ್​ ಸಿದ್ಧವಾಗಿದ್ದು, ಆಗಸ್ಟ್​ 15ಕ್ಕೆ ‘ಪುಷ್ಪ 2’ ರಿಲೀಸ್​ ಆಗಲಿದೆ. ಈ ಬಾರಿ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಆಗಬೇಕು ಎಂಬ ಟಾರ್ಗೆಟ್​ ಚಿತ್ರತಂಡಕ್ಕೆ ಇದೆ. ಅದು ಈಡೇರಬೇಕು ಎಂದರೆ ಹಾಡುಗಳು ಸಾಥ್​ ನೀಡಲೇಬೇಕು.

‘ಪುಷ್ಪ 2’ ಸಿನಿಮಾವನ್ನು ನಿರ್ದೇಶಕ ಸುಕುಮಾರ್​ ಅವರು ಬಹಳ ಕಾಳಜಿಯಿಂದ ನಿರ್ದೇಶಿಸುತ್ತಿದ್ದಾರೆ. ಪ್ರಚಾರಕ್ಕಾಗಿ ದೊಡ್ಡ ದೊಡ್ಡ ಪ್ಲ್ಯಾನ್​ ಮಾಡಲಾಗಿದೆ. ‘ಮೈತ್ರಿ ಮೂವೀ ಮೇಕರ್ಸ್​’ ಸಂಸ್ಥೆಯು ನೂರಾರು ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿನಿಮಾ ನಿರ್ಮಾಣ ಮಾಡಿದೆ. ಈಗಾಗಲೇ ಬಿಡುಗಡೆ ಆಗಿರುವ ಗಂಗಮ್ಮ ಜಾತ್ರೆ ಸನ್ನಿವೇಶದ ಪ್ರೋಮೋ ನೋಡಿ ಫ್ಯಾನ್ಸ್​ ಫಿದಾ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us