
‘ಪುಷ್ಪ 2’ ಚಿತ್ರದ (Pushpa 2) ಶೂಟಿಂಗ್ ಭರದಿಂದ ಸಾಗುತ್ತಿದೆ. ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ತಂಡ ಬ್ಯುಸಿ ಇದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್, ಫಹಾದ್ ಫಾಸಿಲ್, ರಶ್ಮಿಕಾ ಮಂದಣ್ಣ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾದ ನಿರ್ದೇಶಕ ಸುಕುಮಾರ್ ಅವರು ಹೊಸ ಐಡಿಯಾ ಮಾಡಿದ್ದಾರೆ. ಈ ಚಿತ್ರಕ್ಕೆ ಎರಡೆರಡು ಕ್ಲೈಮ್ಯಾಕ್ಸ್ ಶೂಟ್ ಮಾಡಲು ಅವರು ನಿರ್ಧರಿಸಿದ್ದಾರೆ.
ಸಿನಿಮಾ ರಿಲೀಸ್ಗೂ ಮೊದಲೇ ಆ ಬಗೆಗಿನ ವಿಚಾರಗಳು ಲೀಕ್ ಆಗಿ ಬಿಡುತ್ತವೆ. ಇದಕ್ಕೆ ‘ರಾಮಾಯಣ’ ಸಿನಿಮಾನೇ ಉತ್ತಮ ಉದಾಹರಣೆ. ಈ ಚಿತ್ರದ ಸೆಟ್ ಫೋಟೋಗಳು ಲೀಕ್ ಆಗುತ್ತಿವೆ. ಇದರಿಂದ ಚಿತ್ರಕ್ಕೆ ಹಿನ್ನಡೆ ಉಂಟಾಗುತ್ತಿದೆ. ಈಗ ‘ಪುಷ್ಪ 2’ ಚಿತ್ರತಂಡಕ್ಕೂ ಈ ಬಗ್ಗೆ ಭಯ ಕಾಡಿದೆ. ಹೀಗಾಗಿ, ಹೆಚ್ಚಿನ ಖರ್ಚಾದರೂ ತೊಂದರೆ ಇಲ್ಲ ಎನ್ನುವ ಕಾರಣಕ್ಕೆ ಎರಡೆರಡು ಕ್ಲೈಮ್ಯಾಕ್ಸ್ ಶೂಟ್ ಮಾಡಲು ತಂಡ ಮುಂದಾಗಿದೆ.
ಎರಡು ರೀತಿಯಲ್ಲಿ ಕ್ಲೈಮ್ಯಾಕ್ಸ್ ಶೂಟ್ ಮಾಡಿದರೆ ಅದರಲ್ಲಿ ಯಾವುದನ್ನು ಬೇಕಿದ್ದರೂ ಬಳಸಬಹುದು. ಈ ಬಗೆಗಿನ ಸಂಪೂರ್ಣ ನಿರ್ಧಾರ ನಿರ್ದೇಶಕ ಸುಕುಮಾರ್ ಅವರದ್ದೇ ಆಗಿರುತ್ತದೆ. ಒಂದೊಮ್ಮೆ ಒಂದು ಕ್ಲೈಮ್ಯಾಕ್ಸ್ ಲೀಕ್ ಆದರೂ ಮತ್ತೊಂದು ಕ್ಲ್ಲೈಮ್ಯಾಕ್ಸ್ನೊಂದಿಗೆ ತಂಡ ಬರಬಹುದು.
ಸಿನಿಮಾದಲ್ಲಿ ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸ್ಟಾರ್ ಕಲಾವಿದರಿಂದ ಹಿಡಿದು, ಸಾಮಾನ್ಯ ಕಲಾವಿದರವರೆಗೆ ಎಲ್ಲರಿಗೂ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಸಂಪೂರ್ಣ ಸ್ಕ್ರಿಪ್ಟ್ ಯಾರ ಕೈಗೂ ಸಿಗದಂತೆ ಸುಕುಮಾರ್ ನೋಡಿಕೊಳ್ಳುತ್ತಿದ್ದಾರೆ. ಆಯಾ ಕಲಾವದರಿಗೆ ಅವರ ಡೈಲಾಗ್ ಮಾತ್ರ ಸಿಗುವಂತೆ ನೋಡಿಕೊಳ್ಳಲಾಗಿದೆ.
ಇದನ್ನೂ ಓದಿ: ‘ಪುಷ್ಪ 2’ ಐಟಂ ಹಾಡಿಗೆ ಸೊಂಟ ಕುಣಿಸಲಿದ್ದಾರೆ ‘ಅತ್ತಿಗೆ 2’
ಇತ್ತೀಚೆಗೆ ‘ಪುಷ್ಪ 2’ ಚಿತ್ರದ ‘ಪುಷ್ಪ ಪುಷ್ಪ..’ ಹಾಡು ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆಯಿತು. ಕೆಲವರು ಇದನ್ನು ಟ್ರೋಲ್ ಮಾಡಿದರು. ದೇವಿಶ್ರೀ ಪ್ರಸಾದ್ ಅವರು ಈ ಹಾಡನ್ನು ಕಂಪೋಸ್ ಮಾಡಿದ್ದಾರೆ. ಈ ಚಿತ್ರದ ಎರಡನೇ ಹಾಡು ರಿಲೀಸ್ಗೆ ರೆಡಿ ಇದೆ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.