ಪವನ್ ಕಲ್ಯಾಣ್ ಸೋಲಿಸಲು ನೂರಾರು ಕೋಟಿ ಆಫರ್: ಗುಟ್ಟು ಬಿಚ್ಚಿಟ್ಟ ಮಾಜಿ ಶಾಸಕ

ಪವನ್ ಕಲ್ಯಾಣ್ ಆಂಧ್ರ ವಿಧಾನಸಭೆ ಚುನಾವಣೆಗೆ ಪೀಠಾಪುರಂ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಪವನ್ ಕಲ್ಯಾಣ್ ಅನ್ನು ಸೋಲಿಸಲು ಎದುರಾಳಿಗಳು ಮಾಡಿದ್ದ ತಂತ್ರಗಳ ಬಗ್ಗೆ ಅದೇ ಕ್ಷೇತ್ರದ ಮಾಜಿ ಶಾಸಕ ಬಿಚ್ಚಿಟ್ಟಿದ್ದಾರೆ.

ಪವನ್ ಕಲ್ಯಾಣ್ ಸೋಲಿಸಲು ನೂರಾರು ಕೋಟಿ ಆಫರ್: ಗುಟ್ಟು ಬಿಚ್ಚಿಟ್ಟ ಮಾಜಿ ಶಾಸಕ
Follow us
|

Updated on: May 28, 2024 | 11:58 AM

ಪವನ್ ಕಲ್ಯಾಣ್ (Pawan Kalyan) ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿ 16 ವರ್ಷಗಳಾಗಿವೆ, ಜನಸೇನಾ ಪಕ್ಷ ಪ್ರಾರಂಭಿಸಿ 10 ವರ್ಷಗಳಾಗಿವೆ. ಇಷ್ಟು ವರ್ಷಗಳಲ್ಲಿ ಮೊದಲ ಬಾರಿಗೆ ರಾಜಕೀಯವಾಗಿ ಪ್ರಭಾವ ಬೀರುವ ಸ್ಥಿತಿಗೆ ಪವನ್ ಕಲ್ಯಾಣ್ ತಲುಪಿದ್ದಾರೆ. ಈ ಬಾರಿ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಪ್ರಭಾವ ದೊಡ್ಡದಾಗಿದ್ದು, ಈ ಬಾರಿ ಟಿಡಿಪಿ-ಜನಸೇನಾ-ಬಿಜೆಪಿ ಮೈತ್ರಿ ಪಕ್ಷ ಗೆದ್ದರೆ ದೊಡ್ಡ ಹುದ್ದೆಯೇ ಪವನ್ ಪಾಲಾಗಲಿದೆ. ಪವನ್ ಕಲ್ಯಾಣ್ ಮೊದಲ ಚುನಾವಣಾ ಗೆಲುವು ಸಾಧಿಸುವ ಸಾಧ್ಯತೆಯೂ ದಟ್ಟವಾಗಿದೆ. ಆದರೆ ಪವನ್ ಅನ್ನು ಸೋಲಿಸಲು ನಡೆದ ಯತ್ನಗಳ ಬಗ್ಗೆ ನೀಡಲಾದ ಕೋಟ್ಯಂತರ ರೂಪಾಯಿಗಳ ಆಫರ್​ ಬಗ್ಗೆಯೂ ಮಾತನಾಡಿದ್ದಾರೆ.

ಪವನ್ ಕಲ್ಯಾಣ್ ಈ ಬಾರಿ ಪೀಠಾಪುರಂ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಈ ಕ್ಷೇತ್ರ ಟಿಡಿಪಿ ಮುಷ್ಠಿಯಲ್ಲಿತ್ತು. ಟಿಡಿಪಿಯ ಎಸ್​ವಿಎಸ್​ಎನ್ ವರ್ಮಾ ಈ ಹಿಂದೆ ಚುನಾವಣೆ ಗೆದ್ದು ಶಾಸಕರಾಗಿದ್ದರು. ಆದರೆ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಸೂಚನೆ ಮೇರೆಗೆ ಕ್ಷೇತ್ರವನ್ನು ಪವನ್ ಕಲ್ಯಾಣ್​ಗೆ ಬಿಟ್ಟುಕೊಟ್ಟರು. ಆರಂಭದಲ್ಲಿ ತುಸು ವಿರೋಧವನ್ನು ವರ್ಮಾ ವ್ಯಕ್ತಪಡಿಸಿದ್ದರಾದರೂ ಬಳಿಕ ಪಕ್ಷದ ಮಾತಿಗೆ ಓಗೊಟ್ಟು ಪವನ್​ ಜೊತೆ ನಿಂತು ಚುನಾವಣಾ ಪ್ರಚಾರ ಮಾಡಿದ್ದಾರೆ.

ಇದನ್ನೂ ಓದಿ:‘ನನ್ನನ್ನು ಬಿಟ್ಟುಬಿಡಿ’ ಪವನ್ ಕಲ್ಯಾಣ್ ಅಭಿಮಾನಿಗಳ ಮೇಲೆ ಮಾಜಿ ಪತ್ನಿ ರೇಣು ಗರಂ

ಇತ್ತೀಚೆಗಿನ ಸಂದರ್ಶನದಲ್ಲಿ ಮಾತನಾಡಿರುವ ಮಾಜಿ ಶಾಸಕ ವರ್ಮಾ, ಪವನ್ ಕಲ್ಯಾಣ್ ನಮ್ಮ ಕ್ಷೇತ್ರದಲ್ಲಿ ಭರ್ಜರಿ ಜಯ ಸಾಧಿಸಲಿದ್ದಾರೆ. ಇಡೀ ರಾಜ್ಯದಲ್ಲಿ ಅವರಷ್ಟು ದೊಡ್ಡ ಅಂತರದಲ್ಲಿ ಇನ್ನೊಬ್ಬ ನಾಯಕ ಗೆಲ್ಲುವುದಿಲ್ಲ. ಪವನ್ ಪರವಾಗಿ ನಾವೆಲ್ಲ ಟೊಂಕಕಟ್ಟಿ ಕೆಲಸ ಮಾಡಿದ್ದೇವೆ. ಎದುರಾಳಿ ವೈಸಿಪಿ ಪಕ್ಷದವರು ಪವನ್ ಕಲ್ಯಾಣ್ ಅನ್ನು ಸೋಲಿಸಿಯೇ ತೀರಬೇಕೆಂದು ಹಲವು ಪ್ರಯತ್ನಗಳನ್ನು ಮಾಡಿದರು. ಅಡ್ಡ ದಾರಿಗಳನ್ನು ಹಿಡಿದರು. ಅಷ್ಟೆಲ್ಲ ಏಕೆ ನನಗೆ ನೂರಾರು ಕೋಟಿ ಆಫರ್​ಗಳನ್ನು ನೀಡಿದ್ದರು ಎಂದಿದ್ದಾರೆ.

ಪವನ್ ಕಲ್ಯಾಣ್ ಗೆ ಬೆಂಬಲ ನೀಡದಂತೆ, ಪವನ್​ಗೆ ಎದುರಾಳಿಯಾಗಿ ಪಕ್ಷೇತರವಾಗಿ ಚುನಾವಣೆಗೆ ನಿಲ್ಲುವಂತೆ ವೈಸಿಪಿ ಮುಖಂಡರು ನನ್ನನ್ನು ಕೇಳಿದರು. ನೂರಾರು ಕೋಟಿ ರೂಪಾಯಿಗಳ ಹಣ ನೀಡುವುದಾಗಿ ಹೇಳಿದ್ದರು. ಆದರೆ ನಾನು ಅದೆಲ್ಲವನ್ನು ತಿರಸ್ಕರಿಸಿದೆ. ಹಣದಿಂದ ನನ್ನನ್ನು ಯಾರೂ ಕೊಲ್ಲಲಾರರು. ಪವನ್ ಕಲ್ಯಾಣ್ ನಿಸ್ವಾರ್ಥ ನಾಯಕ, ಆತ ನಮ್ಮ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರ ಆದರ್ಶಗಳಲ್ಲಿ ನಂಬಿಕೆ ಇಟ್ಟು ಅವರನ್ನು ಬೆಂಬಲಿಸಿದ್ದಾರೆ. ಹಾಗಾಗಿ ನಾನು ನನ್ನ ಕ್ಷೇತ್ರವನ್ನು ತ್ಯಾಗ ಮಾಡಿದ್ದೇನೆ, ಒಬ್ಬ ಒಳ್ಳೆಯ ನಾಯಕನಿಗಾಗಿ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದೇನೆ’ ಎಂದಿದ್ದಾರೆ ವರ್ಮಾ.

ಪವನ್ ಕಲ್ಯಾಣ್ ಈ ಹಿಂದೆ ಚುನಾವಣೆಗೆ ಸ್ಪರ್ಧಿಸಿದ್ದರು ಆದರೆ ಗೆದ್ದಿರಲಿಲ್ಲ. ಆದರೆ ಈ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದು, ಚುನಾವಣೆ ಗೆಲ್ಲುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗೋಡೌನ್‌ನಲ್ಲಿ ಮೂಟೆಗಳ ಅಡಿ ಸಿಲುಕಿದ ಕಾರ್ಮಿಕರು; ಓರ್ವ ಸಾವು
ಗೋಡೌನ್‌ನಲ್ಲಿ ಮೂಟೆಗಳ ಅಡಿ ಸಿಲುಕಿದ ಕಾರ್ಮಿಕರು; ಓರ್ವ ಸಾವು
ಹಬ್ಬ ಮುಗಿಯುತ್ತಿದ್ದಂತೆಯೇ ಗಣೇಶನಿಗೆ ಹೀಗಾ ಅವಮಾನ ಮಾಡುವುದು..!
ಹಬ್ಬ ಮುಗಿಯುತ್ತಿದ್ದಂತೆಯೇ ಗಣೇಶನಿಗೆ ಹೀಗಾ ಅವಮಾನ ಮಾಡುವುದು..!
ಸ್ಫೋಟಕ್ಕೆ ಉಗ್ರರ ಸಂಚು: ಕರ್ನಾಟಕ ಬಿಜೆಪಿ ಮುಖ್ಯ ಕಚೇರಿಗೆ ಭದ್ರತೆ ಹೆಚ್ಚಳ
ಸ್ಫೋಟಕ್ಕೆ ಉಗ್ರರ ಸಂಚು: ಕರ್ನಾಟಕ ಬಿಜೆಪಿ ಮುಖ್ಯ ಕಚೇರಿಗೆ ಭದ್ರತೆ ಹೆಚ್ಚಳ
ಧ್ರುವ ಸರ್ಜಾ ಮ್ಯಾನೇಜರ್​ ಬಂಧನದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್​
ಧ್ರುವ ಸರ್ಜಾ ಮ್ಯಾನೇಜರ್​ ಬಂಧನದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್​
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ವೈದ್ಯ; ಕುಡಿದ ಮತ್ತಿನಲ್ಲಿ ಬಿದ್ದು ಹೊರಳಾಟ
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ವೈದ್ಯ; ಕುಡಿದ ಮತ್ತಿನಲ್ಲಿ ಬಿದ್ದು ಹೊರಳಾಟ
ಗೃಹಲಕ್ಷ್ಮಿ ಯೋಜನೆಗೆ ನೀಡಲು ಸರ್ಕಾರದ ಬಳಿ ಹಣ ಇಲ್ವಾ?
ಗೃಹಲಕ್ಷ್ಮಿ ಯೋಜನೆಗೆ ನೀಡಲು ಸರ್ಕಾರದ ಬಳಿ ಹಣ ಇಲ್ವಾ?
ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
‘ಚಾರ್ಜ್​ಶೀಟ್ ಸಾರ್ವಜನಿಕ ಡಾಕ್ಯುಮೆಂಟ್; ಜಿ. ಪರಮೇಶ್ವರ್
‘ಚಾರ್ಜ್​ಶೀಟ್ ಸಾರ್ವಜನಿಕ ಡಾಕ್ಯುಮೆಂಟ್; ಜಿ. ಪರಮೇಶ್ವರ್