‘ನನ್ನನ್ನು ಬಿಟ್ಟುಬಿಡಿ’ ಪವನ್ ಕಲ್ಯಾಣ್ ಅಭಿಮಾನಿಗಳ ಮೇಲೆ ಮಾಜಿ ಪತ್ನಿ ರೇಣು ಗರಂ

ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಪವನ್ ಕಲ್ಯಾಣ್ ಅಭಿಮಾನಿಗಳ ಬಳಿ ಮನವಿಯೊಂದನ್ನು ಮಾಡಿದ್ದಾರೆ. ಪವನ್ ಅಭಿಮಾನಿಯೊಬ್ಬನಿಗೆ ಮಾಡಿರುವ ಕಮೆಂಟ್ ಹಂಚಿಕೊಂಡಿರುವ ನಟಿ, ಒಬ್ಬಂಟಿಯಾಗಿ ಬಿಟ್ಟುಬಿಡಿ ಎಂದು ಕೋರಿದ್ದಾರೆ.

‘ನನ್ನನ್ನು ಬಿಟ್ಟುಬಿಡಿ’ ಪವನ್ ಕಲ್ಯಾಣ್ ಅಭಿಮಾನಿಗಳ ಮೇಲೆ ಮಾಜಿ ಪತ್ನಿ ರೇಣು ಗರಂ
Follow us
ಮಂಜುನಾಥ ಸಿ.
|

Updated on: May 18, 2024 | 5:34 PM

ಪವನ್ ಕಲ್ಯಾಣ್ (Pawan Kalyan) ದೇಶದಲ್ಲಿಯೇ ಅತಿ ಹೆಚ್ಚು ಅಭಿಮಾನಿಗಳು ಹೊಂದಿರುವ ನಟರಲ್ಲಿ ಒಬ್ಬರು. ರಾಜಕೀಯಕ್ಕೂ ಧುಮಿಕಿರುವ ಪವನ್​ ಕಲ್ಯಾಣ್ ಅಭಿಮಾನಿಗಳನ್ನು ಇನ್ನಷ್ಟು ಹೆಚ್ಚು ಮಾಡಿಕೊಂಡಿದ್ದಾರೆ. ಪವನ್​ರಂತೆ ಅವರ ಅಭಿಮಾನಿಗಳಿಗೂ ಸಹ ತುಸು ಆವೇಶ ಹೆಚ್ಚು. ಇತರೆ ನಟರೊಟ್ಟಿಗೆ, ರಾಜಕೀಯ ಪಕ್ಷಗಳೊಟ್ಟಿಗೆ ಸಾಮಾಜಿಕ ಜಾಲತಾಣದಲ್ಲಿ ಜಗಳ ಮಾಡಿಕೊಳ್ಳುತ್ತಿರುತ್ತಾರೆ. ಕೆಲವೊಮ್ಮೆ ಇವರ ಕಮೆಂಟ್​ಗಳು, ಪೋಸ್ಟ್​ಗಳು ಅತಿರೇಕಕ್ಕೆ ಹೋಗುವುದು ಸಹ ಉಂಟು. ಪವನ್​ರ ಮಾಜಿ ಪತ್ನಿ ರೇಣುದೇಸಾಯಿ ಕುರಿತಾಗಿಯೂ ಇದೇ ರೀತಿ ಕಮೆಂಟ್​ಗಳನ್ನು ಮಾಡುತ್ತಲೇ ಇರುತ್ತಾರೆ ಪವನ್​ ಅಭಿಮಾನಿಗಳು. ಇವರ ವರ್ತನೆಯಿಂದ ತಾಳ್ಮೆ ಕಳೆದುಕೊಂಡಿರುವ ರೇಣು ದೇಸಾಯಿ ಪವನ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ರೇಣು ದೇಸಾಯಿ ತಮ್ಮ ಹಾಕಿದ್ದ ಪೋಸ್ಟ್ ಒಂದಕ್ಕೆ ಕಮೆಂಟ್ ಮಾಡಿದ್ದ ಪವನ್ ಕಲ್ಯಾಣ್ ಅಭಿಮಾನಿಯೊಬ್ಬ, ‘ಪವನ್ ಕಲ್ಯಾಣ್ ರೀತಿ ಇವರು ಸಹ ವಿಶಾಲ ಹೃದಯವಂತರು’ ಎಂದು ಕಮೆಂಟ್ ಮಾಡಿದ್ದರು. ಆ ಕಮೆಂಟ್​ಗೆ ಪ್ರತಿಕ್ರಿಯಿಸಿರುವ ರೇಣು ದೇಸಾಯಿ, ‘ಯಾಕೆ ಪ್ರತಿ ಬಾರಿ ನಾನು ಪೋಸ್ಟ್ ಹಾಕಿದಾಗಲೂ ಕೆಲವರು ಬಂದು ನನ್ನ ಮಾಜಿ ಪತಿಯ ಜೊತೆಗೆ ನನ್ನನ್ನು ಹೋಲಿಸಲಾಗುತ್ತದೆ. ಈ ವರೆಗೂ ನಾನು ನೂರಾರು ಮಂದಿ ಇಂಥಹವರನ್ನು ಬ್ಲಾಕ್ ಮಾಡಿದ್ದೇನೆ. ನಾನು 10 ವರ್ಷದವಳಾಗಿದ್ದಾಗಿನಿಂದಲೂ ನಾನು ಪ್ರಾಣಿಗಳ ಸಂರಕ್ಷಣೆಯಲ್ಲಿ ತೊಡಗಿದ್ದೇನೆ. ಅದಕ್ಕೂ ನನ್ನ ಮಾಜಿ ಪತಿಗೂ ಯಾವುದೇ ಸಂಬಂಧವಿಲ್ಲ. ಪ್ರತಿ ಬಾರಿ ನನ್ನನ್ನು ಆತನೊಂದಿಗೆ (ಪವನ್ ಕಲ್ಯಾಣ್) ಹೋಲಿಸಬೇಡಿ, ನನ್ನಂತೆ ಆತ ಪ್ರಾಣಿಗಳನ್ನು ಪ್ರೀತಿಸುವುದಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ:ಮುನಿಸು ಮರೆತು ಪವನ್ ಕಲ್ಯಾಣ್​ಗೆ ಬೆಂಬಲ ಸೂಚಿಸಿದ ಅಲ್ಲು ಅರ್ಜುನ್

ಬಳಿಕ ಅದೇ ಕಮೆಂಟ್​ನ ಸ್ಕ್ರೀನ್ ಶಾಟ್ ಅನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ರೇಣು ದೇಸಾಯಿ, ‘ಈ ಪ್ರತಿಕ್ರಿಯೆಯನ್ನು ನಾನು ಕೊಟ್ಟಿರುವುದು ಕೋಪದಿಂದಲ್ಲ ಬದಲಿಗೆ ಹತಾಷೆಯಿಂದ. ಹಲವು ವರ್ಷಗಳಿಂದಲೂ ನಾನು ಏನನ್ನಾದರೂ ಮಾಡಿದರೆ ಅದರ ಕ್ರೆಡಿಟ್ ಅನ್ನು ನನ್ನ ಮಾಜಿ ಪತಿಗೆ ನೀಡಲಾಗುತ್ತಿದೆ, ಅಥವಾ ಆತನೊಂದಿಗೆ ನನ್ನನ್ನು ಹೋಲಿಸಿ ನೋಡಲಾಗುತ್ತಿದೆ. ಅವರೊಂದಿಗೆ ನನಗೆ ವೈಯಕ್ತಿಕವಾಗಿ ಯಾವುದೇ ದ್ವೇಷವಿಲ್ಲ. ಆದರೆ ಅವರ ಬೆಂಬಲಿಗರಲ್ಲಿ ನಾನು ಮನವಿ ಮಾಡುತ್ತಿದ್ದೇನೆ, ನನ್ನ ಇನ್​ಸ್ಟಾಗ್ರಾಂ ಅನ್ನು ನನ್ನ ಪಾಲಿಗೆ ಬಿಟ್ಟು ಬಿಡಿ’ ಎಂದು ಮನವಿ ಮಾಡಿದ್ದಾರೆ ರೇಣು ದೇಸಾಯಿ.

ನಟಿ ರೇಣು ದೇಸಾಯಿ, ಪವನ್ ಕಲ್ಯಾಣ್​ರ ಎರಡನೇ ಪತ್ನಿ. ‘ಜಾನಿ’ ಸಿನಿಮಾದಲ್ಲಿ ಈ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಮೊದಲ ಪತ್ನಿಗೆ ವಿಚ್ಛೇದನ ನೀಡುವ ಮುನ್ನವೇ ರೇಣು ಜೊತೆ ಆಪ್ತ ಬಂಧವನ್ನು ಪವನ್ ಹೊಂದಿದ್ದರು. ಆ ನಂತರ ಅದು ವಿವಾದವಾಗಿ ಮೊದಲ ಪತ್ನಿಗೆ ಭಾರಿ ದೊಡ್ಡ ಮೊತ್ತದ ಜೀವನಾಂಶ ನೀಡಿ ರೇಣು ಅವರನ್ನು ವಿವಾಹವಾದರು. ಬಳಿಕ ರೇಣು ಅವರಿಗೂ ವಿಚ್ಛೇದನ ನೀಡಿ, ರಷ್ಯಾದ ಅನ್ನಾ ಜೊತೆ ವಿವಾಹವಾದರು. ರೇಣು ಪವನ್​ಗೆ ಇಬ್ಬರು ಮಕ್ಕಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೈಸೂರು: ತ್ರಿವೇಣಿ ಸಂಗಮ ಕುಂಭಮೇಳದ ಮಹತ್ವ ತಿಳಿಯಿರಿ
ಮೈಸೂರು: ತ್ರಿವೇಣಿ ಸಂಗಮ ಕುಂಭಮೇಳದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ನಾಲ್ಕು ಗ್ರಹಗಳ ಶುಭಫಲವಿದೆ
Daily Horoscope: ಈ ರಾಶಿಯವರಿಗೆ ಇಂದು ನಾಲ್ಕು ಗ್ರಹಗಳ ಶುಭಫಲವಿದೆ
ಹಾಸಿಗೆ ಹಿಡಿದ ಮಗನ ಚಿಕಿತ್ಸೆಗೆ ಕುಮಾರಸ್ವಾಮಿ ಬಳಿ ಸಹಾಯ ಕೇಳಿದ ತಾಯಿ
ಹಾಸಿಗೆ ಹಿಡಿದ ಮಗನ ಚಿಕಿತ್ಸೆಗೆ ಕುಮಾರಸ್ವಾಮಿ ಬಳಿ ಸಹಾಯ ಕೇಳಿದ ತಾಯಿ
ಕೊಹ್ಲಿಯ ಕೈ ಮುಟ್ಟಿ ಸ್ವರ್ಗ ಸಿಕ್ಕವನಂತೆ ಕುಣಿದಾಟಿದ ಬಾಲಕ
ಕೊಹ್ಲಿಯ ಕೈ ಮುಟ್ಟಿ ಸ್ವರ್ಗ ಸಿಕ್ಕವನಂತೆ ಕುಣಿದಾಟಿದ ಬಾಲಕ
ಬೆಂಗಳೂರು: ಮಾದಾವರ ಸುತ್ತಮುತ್ತ ಫುಲ್​ ಟ್ರಾಫಿಕ್​ಜಾಮ್, ವಾಹನ ಸವಾರರ ಪರದಾಟ
ಬೆಂಗಳೂರು: ಮಾದಾವರ ಸುತ್ತಮುತ್ತ ಫುಲ್​ ಟ್ರಾಫಿಕ್​ಜಾಮ್, ವಾಹನ ಸವಾರರ ಪರದಾಟ
ಕಟಕ್‌ನಲ್ಲಿ ಅರ್ಧಕ್ಕೆ ನಿಂತ ಪಂದ್ಯ; ಮೈದಾನ ತೊರೆದ ಎಲ್ಲಾ ಆಟಗಾರರು..!
ಕಟಕ್‌ನಲ್ಲಿ ಅರ್ಧಕ್ಕೆ ನಿಂತ ಪಂದ್ಯ; ಮೈದಾನ ತೊರೆದ ಎಲ್ಲಾ ಆಟಗಾರರು..!
Aero india: ಬೆಂಗಳೂರಿನಲ್ಲಿ ರಾಜನಾಥ್​ ಸಿಂಗ್​ ಸುದ್ದಿಗೋಷ್ಠಿಯ ನೇರಪ್ರಸಾರ
Aero india: ಬೆಂಗಳೂರಿನಲ್ಲಿ ರಾಜನಾಥ್​ ಸಿಂಗ್​ ಸುದ್ದಿಗೋಷ್ಠಿಯ ನೇರಪ್ರಸಾರ
ಬೆಂಗಳೂರು: ಖ್ಯಾತ ಗಾಯಕನ ಸಂಗೀತ ಕಾರ್ಯಕ್ರಮಕ್ಕೆ ಪೊಲೀಸರಿಂದ ತಡೆ
ಬೆಂಗಳೂರು: ಖ್ಯಾತ ಗಾಯಕನ ಸಂಗೀತ ಕಾರ್ಯಕ್ರಮಕ್ಕೆ ಪೊಲೀಸರಿಂದ ತಡೆ
ಮಜಾ ಟಾಕೀಸ್​: ಉಗ್ರಂ ಮಂಜು ಇಂಗ್ಲಿಷ್ ಕೇಳಿ ಬಿದ್ದು ಬಿದ್ದು ನಕ್ಕ ಗೌತಮಿ
ಮಜಾ ಟಾಕೀಸ್​: ಉಗ್ರಂ ಮಂಜು ಇಂಗ್ಲಿಷ್ ಕೇಳಿ ಬಿದ್ದು ಬಿದ್ದು ನಕ್ಕ ಗೌತಮಿ
ರಾಜನಹಳ್ಳಿ ವಾಲ್ಮೀಕಿ ಜಾತ್ರೆಯಲ್ಲಿ ಸತೀಶ್ ಜಾರಕಿಹೊಳಿಯದ್ದೇ ಫುಲ್ ಹವಾ..!
ರಾಜನಹಳ್ಳಿ ವಾಲ್ಮೀಕಿ ಜಾತ್ರೆಯಲ್ಲಿ ಸತೀಶ್ ಜಾರಕಿಹೊಳಿಯದ್ದೇ ಫುಲ್ ಹವಾ..!