ಮುನಿಸು ಮರೆತು ಪವನ್ ಕಲ್ಯಾಣ್​ಗೆ ಬೆಂಬಲ ಸೂಚಿಸಿದ ಅಲ್ಲು ಅರ್ಜುನ್

ಹಳೆಯ ಮುನಿಸು ಮರೆತು ನಟ ಅಲ್ಲು ಅರ್ಜುನ್, ಪವನ್ ಕಲ್ಯಾಣ್​ರ ಚುನಾವಣಾ ಪಯಣಕ್ಕೆ ಶುಭ ಹಾರೈಸಿದ್ದಾರೆ. ಪವನ್ ಕಲ್ಯಾಣ್ ಪೀಠಾಪುರಂ ಕ್ಷೇತ್ರದಿಂದ ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ.

ಮುನಿಸು ಮರೆತು ಪವನ್ ಕಲ್ಯಾಣ್​ಗೆ ಬೆಂಬಲ ಸೂಚಿಸಿದ ಅಲ್ಲು ಅರ್ಜುನ್
Follow us
ಮಂಜುನಾಥ ಸಿ.
|

Updated on: May 10, 2024 | 12:52 PM

ನಟ ಅಲ್ಲು ಅರ್ಜುನ್ (Allu Arjun) ಈಗ ತೆಲುಗು ಚಿತ್ರರಂಗದ ಸ್ಟಾರ್ ನಟ. ಮೆಗಾಸ್ಟಾರ್ ಕುಟುಂಬಕ್ಕೆ ಸೇರಿದ ಅಲ್ಲು ಅರ್ಜುನ್, ಕುಟುಂಬದ ಇತರೆ ಸದಸ್ಯರೊಡನೆ ಉತ್ತಮ ಬಂಧ ಹೊಂದಿದ್ದಾರೆ. ಇದೀಗ ಮೆಗಾಸ್ಟಾರ್ ಕುಟುಂಬದ ಪವನ್ ಕಲ್ಯಾಣ್ ಚುನಾವಣೆಗೆ ನಿಂತಿದ್ದು, ಆಂಧ್ರ ರಾಜಕೀಯದಲ್ಲಿ ಹೊಸ ಅಲೆ ಎಬ್ಬಿಸಿದ್ದಾರೆ. ಪವನ್ ಕಲ್ಯಾಣ್​ಗೆ ನಟ ಮೆಗಾಸ್ಟಾರ್ ಚಿರಂಜೀವಿ, ಅವರ ಪುತ್ರ ರಾಮ್​ ಚರಣ್ ಸೇರಿದಂತೆ ಇನ್ನೂ ಕೆಲವರು ಬೆಂಬಲ ಸೂಚಿಸಿದ್ದಾರೆ. ಆದರೆ ಅಲ್ಲು ಅರ್ಜುನ್ ಮಾತ್ರ ಪವನ್ ರಾಜಕೀಯದ ಬಗ್ಗೆ ಯಾವುದೇ ಹೇಳಿಕೆ ನೀಡಿರಲಿಲ್ಲ. ಇದು ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು. ಈಗ ಹಳೆಯದೆಲ್ಲವನ್ನೂ ಮರೆತು ಅಲ್ಲು ಅರ್ಜುನ್ ತಮ್ಮ ಮಾವ ಪವನ್ ಕಲ್ಯಾಣ್​ಗೆ ಬೆಂಬಲ ಸೂಚಿಸಿದ್ದಾರೆ.

ಮೆಗಾಸ್ಟಾರ್ ಕುಟುಂಬದಲ್ಲಿ ಈಗ ಎಲ್ಲವೂ ಸರಿಯಾಗಿದೆಯಾದರೂ ಕೆಲ ವರ್ಷದ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಅದಕ್ಕೆ ಕಾರಣವಾಗಿದ್ದು ಸ್ವತಃ ಪವನ್ ಕಲ್ಯಾಣ್ ಅವರೇ. ಪವನ್ ಕಲ್ಯಾಣ್, ತಮ್ಮ ಅಣ್ಣ ಚಿರಂಜೀವಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಣ್ಣನ ವಿರುದ್ಧ ಒಂದೆರಡು ಹೇಳಿಕೆಗಳನ್ನು ಸಹ ನೀಡಿದ್ದರು. ಕಾರ್ಯಕ್ರಮವೊಂದರಲ್ಲಿ ಪವನ್ ಅಭಿಮಾನಿಗಳು, ಚಿರಂಜೀವಿಗೆ ಅವಮಾನವಾಗುವಂತೆ ನಡೆದುಕೊಂಡಿದ್ದರು.

ಅದಾದ ಕೆಲವು ದಿನಗಳ ಬಳಿಕ ನಡೆದ ಅಲ್ಲು ಅರ್ಜುನ್​ರ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಸಹ ಪವನ್ ಅಭಿಮಾನಿಗಳು ಪವನ್ ಪರವಾಗಿ ಘೋಷಣೆಗಳನ್ನು ಕೂಗಿ ಗದ್ದಲ ಎಬ್ಬಿಸಿದ್ದರು. ಅಲ್ಲು ಅರ್ಜುನ್ ಅನ್ನು ಪವನ್ ಬಗ್ಗೆ ಮಾತನಾಡುವಂತೆ ಒತ್ತಾಯಿಸಿದ್ದರು. ಅಂದು ಅಲ್ಲು ಅರ್ಜುನ್ ಬಹಿರಂಗವಾಗಿ ‘ನಾನು ಅವರ ಬಗ್ಗೆ ಮಾತನಾಡುವುದಿಲ್ಲ’ ಎನ್ನುವ ಮೂಲಕ ತಮ್ಮ ಬೆಂಬಲ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಎಂಬ ಸಂದೇಶ ರವಾನಿಸಿದ್ದರು.

ಇದನ್ನೂ ಓದಿ:‘ಪುಷ್ಪ 2’ ಬಿಡುಗಡೆಗೂ ಮುನ್ನ 150 ಕೋಟಿ ರೂಪಾಯಿಗೆ ಹೆಚ್ಚಿತು ಅಲ್ಲು ಅರ್ಜುನ್​ ಸಂಬಳ

ಬಳಿಕ ಮೆಗಾಸ್ಟಾರ್ ಕುಟುಂಬದಲ್ಲಿ ಎಲ್ಲವೂ ಸರಿಹೋಯ್ತು. ಚಿರಂಜೀವಿ ಹಾಗೂ ಪವನ್ ಕಲ್ಯಾಣ್ ಮತ್ತೆ ಒಂದಾದರು. ಇದೀಗ ತಮ್ಮನ ರಾಜಕೀಯ ಪಯಣಕ್ಕೆ ಚಿರಂಜೀವಿ ಸಹ ಬೆಂಬಲ ಕೋರಿದರು. ರಾಮ್ ಚರಣ್ ಸಹ ಎಲ್ಲವನ್ನೂ ಮರೆತು ಚಿಕ್ಕಪ್ಪನ ಪರವಾಗಿ ಹೇಳಿಕೆಗಳನ್ನು ನೀಡಿದರು. ಒಟ್ಟಿಗೆ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರು. ಆದರೆ ಅಲ್ಲು ಅರ್ಜುನ್ ಮಾತ್ರ ಪವನ್ ಕಲ್ಯಾಣ್ ಜೊತೆ ಕಾಣಿಸಿಕೊಂಡಿರಲಿಲ್ಲ. ಇದು ಅಭಿಮಾನಿಗಳಲ್ಲಿ ಅನುಮಾನಕ್ಕೆ ಕಾರಣವಾಗಿತ್ತು. ಆದರೆ ಈಗ ಹಳೆಯ ಮುನಿಸು ಮರೆತು ಅಲ್ಲು ಅರ್ಜುನ್, ಪವನ್ ಕಲ್ಯಾಣ್ ಪರವಾಗಿ ಟ್ವೀಟ್ ಮಾಡಿದ್ದಾರೆ.

‘ನಿಮ್ಮ ಚುನಾವಣಾ ಪಯಣ ಯಶಸ್ವಿಯಾಗಲಿ ಎಂದು ನಾನು ಹೃದಯಪೂರ್ವಕವಾಗಿ ಆಶಿಸುತ್ತೇನೆ. ಸೇವೆಗಾಗಿ ನಿಮ್ಮ ಜೀವನವನ್ನು ಮುಡಿಪಾಗಿಟ್ಟು ನೀವು ಆರಿಸಿಕೊಂಡ ಮಾರ್ಗದ ಬಗ್ಗೆ ನಾನು ಯಾವಾಗಲೂ ಹೆಮ್ಮೆಪಡುತ್ತೇನೆ. ಕುಟುಂಬದ ಸದಸ್ಯನಾಗಿ, ನನ್ನ ಪ್ರೀತಿ ಮತ್ತು ಬೆಂಬಲ ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ. ನೀವು ಬಯಸುವ ಎಲ್ಲವನ್ನೂ ಸಾಧಿಸಲಿ ಎಂದು ಆಶಿಸುತ್ತೇನೆ’ ಎಂದಿದ್ದಾರೆ ಅಲ್ಲು ಅರ್ಜುನ್.

ಜನಸೇನಾ ರಾಜಕೀಯ ಪಕ್ಷದ ಸ್ಥಾಪಕರಾಗಿರುವ ಪವನ್ ಕಲ್ಯಾಣ್, ಆಂಧ್ರ ವಿಧಾನಸಭೆ ಚುನಾವಣೆಗೆ ಪೀಠಾಪುರಂನಿಂದ ಸ್ಪರ್ಧಿಸಿದ್ದಾರೆ. ಜನಸೇನಾ ಪಕ್ಷ ಈ ಬಾರಿ ಟಿಡಿಪಿ ಹಾಗೂ ಬಿಜೆಪಿ ಜೊತೆ ಕೈಜೋಡಿಸಿ ಚುನಾವಣೆ ಎದುರಿಸುತ್ತಿದೆ. ಆಂಧ್ರದ ಹಾಲಿ ಜಗನ್ ಸರ್ಕಾರವನ್ನು ಕಿತ್ತೊಗೆಯಬೇಕೆಂದು ಪಣತೊಟ್ಟು ಪವನ್ ಕಲ್ಯಾಣ್ ಸತತ ಪ್ರಚಾರ ಸಭೆಗಳನ್ನು ಮಾಡುತ್ತಿದ್ದಾರೆ. ಈ ಬಾರಿ ಟಿಡಿಪಿ, ಜನಸೇನಾ ಹಾಗೂ ಬಿಜೆಪಿ ಪಕ್ಷ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ಇದೆಯೆಂದು ವಿಶ್ಲೇಷಕರು ಲೆಕ್ಕ ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್