ಮನೆ ಬದಲಾಯಿಸಿದ ರಶ್ಮಿಕಾ ಮಂದಣ್ಣ; ಹೊಸ ನಿವಾಸಕ್ಕೆ ಹೋಗುವಾಗ ನಟಿಗೆ ಒಂದು ವಿಚಾರ ಬಲು ಕಷ್ಟ

| Updated By: ಮದನ್​ ಕುಮಾರ್​

Updated on: Feb 07, 2022 | 8:54 AM

2021ರ ಫೆಬ್ರವರಿಯಲ್ಲಿ ರಶ್ಮಿಕಾ ಮಂದಣ್ಣ ಅವರು ಮುಂಬೈನಲ್ಲಿ ಫ್ಲಾಟ್​ ಖರೀದಿಸಿದ್ದರ ಬಗ್ಗೆ ವರದಿ ಆಗಿತ್ತು. ಆದರೆ ಈಗ ಅವರು ಮತ್ತೆ ಮನೆ ಶಿಫ್ಟ್​ ಮಾಡಿದ್ದಾರೆ.

ಮನೆ ಬದಲಾಯಿಸಿದ ರಶ್ಮಿಕಾ ಮಂದಣ್ಣ; ಹೊಸ ನಿವಾಸಕ್ಕೆ ಹೋಗುವಾಗ ನಟಿಗೆ ಒಂದು ವಿಚಾರ ಬಲು ಕಷ್ಟ
ರಶ್ಮಿಕಾ ಮಂದಣ್ಣ
Follow us on

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಜನಪ್ರಿಯತೆಯ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಅವರ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳು ಹಿಟ್​ ಆಗಿತ್ತಿವೆ. ಕಳೆದ ವರ್ಷ ಡಿ.17ರಂದು ಬಿಡುಗಡೆಯಾದ ‘ಪುಷ್ಪ’ ಸಿನಿಮಾ (Pushpa Movie) ಸೂಪರ್​ ಹಿಟ್​ ಆಯಿತು. ವಿಶ್ವಾದ್ಯಂತ 350 ಕೋಟಿ ರೂಪಾಯಿಗೂ ಅಧಿಕ ಹಣ ಗಳಿಸುವಲ್ಲಿ ಆ ಚಿತ್ರ ಯಶಸ್ವಿ ಆಯಿತು. ಅದರಿಂದ ರಶ್ಮಿಕಾ ಅವರ ಡಿಮ್ಯಾಂಡ್​ ಕೂಡ ಹೆಚ್ಚಿದೆ. ಅಲ್ಲದೇ ಅವರು ಸಂಭಾವನೆ ಜಾಸ್ತಿ ಮಾಡಿಕೊಂಡಿರುವ ಬಗ್ಗೆಯೂ ವರದಿ ಆಗಿದೆ. ಈ ನಡುವೆ ಬಾಲಿವುಡ್​ ಸಿನಿಮಾಗಳ ಕಡೆಗೆ ರಶ್ಮಿಕಾ ಮಂದಣ್ಣ ಹೆಚ್ಚು ಗಮನ ನೀಡುತ್ತಿದ್ದಾರೆ. ಹಾಗಾಗಿ ಮುಂಬೈನಲ್ಲಿ ಅವರ ವಾಸ್ತವ್ಯ ಹೆಚ್ಚಿದೆ. ಅಲ್ಲಿ ಹೊಸ ಮನೆಗೆ ಅವರು ಶಿಫ್ಟ್​ ಆಗಿದ್ದಾರೆ. ಅದರ ಬಗ್ಗೆ ಅಭಿಮಾನಿಗಳಿಗೆ ರಶ್ಮಿಕಾ ಮಾಹಿತಿ ನೀಡಿದ್ದಾರೆ. ಹೊಸ ಮನೆಗೆ (Rashmika Mandanna House) ತೆರಳಿರುವ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸಿದ್ದಾರೆ. ದಿನದಿಂದ ದಿನಕ್ಕೆ ತಮ್ಮ ನೆಚ್ಚಿನ ನಟಿಯ ಬೆಳವಣಿಗೆಯನ್ನು ಕಂಡು ಫ್ಯಾನ್ಸ್​ ಖುಷಿಯಾಗುತ್ತಿದ್ದಾರೆ. ರಶ್ಮಿಕಾ ನಟನೆಯ ಹೊಸ ಸಿನಿಮಾಗಳ ಬಗ್ಗೆ ನಿರೀಕ್ಷೆ ಹೆಚ್ಚುವಂತಾಗಿದೆ.

ಸಿದ್ದಾರ್ಥ್​ ಮಲ್ಹೋತ್ರಾ ಜೊತೆ ‘ಮಿಷನ್​ ಮಜ್ನು’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಅದು ಅವರ ಮೊದಲ ಬಾಲಿವುಡ್​ ಸಿನಿಮಾ. ಅಮಿತಾಭ್​ ಬಚ್ಚನ್​ ಜೊತೆ ‘ಗುಡ್​ ಬೈ’ ಚಿತ್ರದಲ್ಲಿ ರಶ್ಮಿಕಾ ತೆರೆಹಂಚಿಕೊಳ್ಳುತ್ತಿದ್ದಾರೆ. ಹಿಂದಿ ಚಿತ್ರರಂಗದಿಂದ ಅವರಿಗೆ ಅನೇಕ ಹೊಸ ಹೊಸ ಆಫರ್​ಗಳು ಹರಿದುಬರುತ್ತಿವೆ. ಈ ಸಂದರ್ಭದಲ್ಲಿ ಅವರು ಬಾಲಿವುಡ್​ ಸಿನಿಮಾಗಳ ಕೆಲಸದ ಸಲುವಾಗಿ ಮುಂಬೈನಲ್ಲೇ ಹೆಚ್ಚು ಸಮಯ ಕಳೆಯಬೇಕಾಗುತ್ತಿದೆ. ಹಾಗಾಗಿ ಅವರು ಅಲ್ಲಿಯೇ ಮನೆ ಕೊಂಡುಕೊಂಡಿದ್ದಾರೆ.

2021ರ ಫೆಬ್ರವರಿಯಲ್ಲಿ ರಶ್ಮಿಕಾ ಮಂದಣ್ಣ ಅವರು ಮುಂಬೈನಲ್ಲಿ ಫ್ಲಾಟ್​ ಖರೀದಿಸಿದ್ದರ ಬಗ್ಗೆ ವರದಿ ಆಗಿತ್ತು. ಆದರೆ ಈಗ ಅವರು ಮತ್ತೆ ಮನೆ ಬದಲಾಯಿಸಿದ್ದಾರೆ. ಮನೆ ಬದಲಿಸುವಾಗ ವಸ್ತುಗಳನ್ನು ಸಾಗಿಸುವುದು ತುಂಬ ಕಷ್ಟದ ಕೆಲಸ ಎಂದು ಅವರು ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಇನ್​​ಸ್ಟಾಗ್ರಾಮ್​ನಲ್ಲಿ ಈ ಕುರಿತು ಮಾಹಿತಿ ನೀಡಿದ್ದ ಅವರು ಚಿಕ್ಕ ವಿಡಿಯೋವನ್ನು ಹಂಚಿಕೊಂಡಿದ್ದರು. ಸ್ವತಃ ಅವರೇ ಮನೆಯ ವಸ್ತುಗಳನ್ನು ಪ್ಯಾಕಿಂಗ್​ ಮಾಡಿದ್ದಾರೆ. ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವುದು ರಶ್ಮಿಕಾಗೆ ಇಷ್ಟವಂತೆ. ಆದರೆ ವಸ್ತುಗಳನ್ನು ಶಿಫ್ಟ್ ಮಾಡುವುದು ಬಲು ಕಷ್ಟ ಎಂದು ಅವರು ಹೇಳಿದ್ದಾರೆ. ​

ಗೋವಾದಲ್ಲೂ ಇದೆ ರಶ್ಮಿಕಾ ಮಂದಣ್ಣ ಬಂಗಲೆ:

ರಶ್ಮಿಕಾ ಮಂದಣ್ಣ ಅವರು ಗೋವಾದಲ್ಲಿ ಮನೆ ಕೊಂಡುಕೊಂಡಿದ್ದರ ಬಗ್ಗೆ ಈ ಹಿಂದೆ ಮಾಹಿತಿ ಹಂಚಿಕೊಂಡಿದ್ದರು. ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಮನೆಯ ಹೊರಾಂಗಣದ ಫೋಟೋ ಶೇರ್​ ಮಾಡಿಕೊಂಡಿದ್ದರು. ಪ್ರಕೃತಿ ಸೌಂದರ್ಯದ ನಡುವೆ ಈ ಮನೆ ಇದೆ. ಈಜುಕೊಳದ ಪಕ್ಕದಲ್ಲೇ ಬುದ್ಧನ ಮೂರ್ತಿ ಇದೆ. ಸದಾ ನೆರಳು ನೀಡಲು ಬೃಹದಾದ ಮರವಿದೆ. ಇದನ್ನೆಲ್ಲ ನೋಡಿದರೆ ಬೇರೆ ನಟಿಯರಿಗೆ ಹೊಟ್ಟೆಕಿಚ್ಚಾದರೂ ಅಚ್ಚರಿ ಏನಿಲ್ಲ. ಅದಕ್ಕೆ ರಶ್ಮಿಕಾ ನೀಡಿದ ಕ್ಯಾಪ್ಷನ್​ ಕೂಡ ಗಮನ ಸೆಳೆಯುತ್ತಿತ್ತು. ‘ಗೋವಾದಲ್ಲಿ ಹೊಸ ಮನೆ ಖರೀದಿಸಿದಾಗ.. ಹೊಟ್ಟೆಕಿಚ್ಚು ಆಯ್ತಾ?’ ಎಂದು ರಶ್ಮಿಕಾ ಪ್ರಶ್ನಿಸಿದ್ದರು.

ಇದನ್ನೂ ಓದಿ:

ಇಲ್ಲಿ ನೋಡಿ ಇಂಗ್ಲಿಷ್​ ಶ್ರೀವಲ್ಲಿ; ವಿದೇಶಿಗರಲ್ಲೂ ಕ್ರೇಜ್​ ಹುಟ್ಟಿಸಿದ ರಶ್ಮಿಕಾ-ಅಲ್ಲು ಅರ್ಜುನ್​ ಹಾಡು

ಅಮಿತಾಭ್​ ಬಚ್ಚನ್​ ವ್ಯಕ್ತಿತ್ವ ಎಂಥದ್ದು? ಇಂಚಿಂಚು ವಿವರಿಸಿದ ರಶ್ಮಿಕಾ ಮಂದಣ್ಣ