ರಾಜಮೌಳಿ-ಮಹೇಶ್ ಬಾಬು ಸಿನಿಮಾಕ್ಕೆ ನೋ ಎಂದ ಬಾಲಿವುಡ್ ನಟ, ಎಸ್ ಎಂದ ದಕ್ಷಿಣದ ಸ್ಟಾರ್ ನಟ

SS Rajamouli-Mahesh Babu: ಎಸ್​ಎಸ್ ರಾಜಮೌಳಿ ಸಿನಿಮಾನಲ್ಲಿ ನಟಿಸಲು ಹಲವು ನಟ-ನಟಿಯರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ಆದರೆ ರಾಜಮೌಳಿಯ ಸಿನಿಮಾದಲ್ಲಿ ನಟಿಸಲು ಬಾಲಿವುಡ್ ನಟ ನಾನಾ ಪಾಟೇಕರ್ ನೋ ಎಂದಿದ್ದಾರೆ. ಆದರೆ ಅದೇ ಪಾತ್ರದಲ್ಲಿ ನಟಿಸಲು ದಕ್ಷಿಣ ಭಾರತದ ಸ್ಟಾರ್ ನಟರೊಬ್ಬರು ಎಸ್ ಹೇಳಿದ್ದಾರೆ. ಯಾರು ಆ ನಟ?

ರಾಜಮೌಳಿ-ಮಹೇಶ್ ಬಾಬು ಸಿನಿಮಾಕ್ಕೆ ನೋ ಎಂದ ಬಾಲಿವುಡ್ ನಟ, ಎಸ್ ಎಂದ ದಕ್ಷಿಣದ ಸ್ಟಾರ್ ನಟ
Ss Rajamouli Mahesh Babu

Updated on: Jun 08, 2025 | 4:27 PM

ಎಸ್​ಎಸ್ ರಾಜಮೌಳಿ (SS Rajamouli) ಸಿನಿಮಾನಲ್ಲಿ ನಟಿಸಲು ನಟರು ಸಾಲುಗಟ್ಟಿ ನಿಂತಿದ್ದಾರೆ. ಅವರ ಸಿನಿಮಾನಲ್ಲಿ ಅವಕಾಶ ಸಿಕ್ಕರೆ ಸಾಕು, ಸಂಭಾವನೆಯೂ ಸಹ ಬೇಡ ಎಂದುಕೊಳ್ಳುತ್ತಿರುವ ನಟ-ನಟಿಯರು ಅದೆಷ್ಟೋ ಮಂದಿ ಇದ್ದಾರೆ. ರಾಜಮೌಳಿ ಸಿನಿಮಾನಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರೂ ಸಹ ವಿಶ್ವಮಟ್ಟದಲ್ಲಿ ಗುರುತು ಸಿಗುತ್ತದೆ ಹಾಗಾಗಿಯೇ ನಟ-ನಟಿಯರು ಅವರ ಸಿನಿಮಾನಲ್ಲಿ ನಟಿಸಲು ತುದಿಗಾಲಲ್ಲಿರುತ್ತಾರೆ. ಆದರೆ ಬಾಲಿವುಡ್​ನ ಹಿರಿಯ ನಟರೊಬ್ಬರು ರಾಜಮೌಳಿ ಸಿನಿಮಾನಲ್ಲಿ ನಟಿಸಲು ನೋ ಎಂದಿದ್ದಾರೆ. ಆದರೆ ದಕ್ಷಿಣ ಭಾರತದ ಸ್ಟಾರ್ ನಟ ಎಸ್ ಹೇಳಿದ್ದಾರೆ.

ಮಹೇಶ್ ಬಾಬು ನಾಯಕ ನಟನ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾವನ್ನು ರಾಜಮೌಳಿ ನಿರ್ದೇಶನ ಮಾಡುತ್ತಿದ್ದು, ಸಿನಿಮಾನಲ್ಲಿ ಮಹೇಶ್ ಬಾಬು ತಂದೆಯ ಪಾತ್ರದಲ್ಲಿ ನಟಿಸುವಂತೆ ಬಾಲಿವುಡ್ ನಟ ನಾನಾ ಪಟೇಕರ್ ಅವರನ್ನು ಕೇಳಿದ್ದರಂತೆ. ಖುದ್ದಾಗಿ ಪುಣೆಗೆ ಹೋಗಿ ಅಲ್ಲಿ ನಾನಾ ಪಾಟೇಕರ್​ಗೆ ಕತೆ ಹೇಳಿದ್ದಾರೆ. 20 ಕೋಟಿ ರೂಪಾಯಿ ಸಂಭಾವನೆ ಕೊಡುವುದಾಗಿಯೂ ಹೇಳಿದ್ದಾರೆ. ಆದರೆ ನಾನಾ ಪಾಟೇಕರ್ ನೋ ಎಂದಿದ್ದಾರೆ.

ಆದರೆ ಇದೀಗ ಅದೇ ಪಾತ್ರ ದಕ್ಷಿಣ ಭಾರತದ ಸ್ಟಾರ್ ನಟನ ಪಾಲಾಗಿದೆ ಎನ್ನಲಾಗುತ್ತಿದೆ. ತಮಿಳು ಚಿತ್ರರಂಗದ ಸ್ಟಾರ್ ನಟ, ಇತ್ತೀಚೆಗೆ ಬಾಲಿವುಡ್​ನಲ್ಲೂ ಒಂದರ ಹಿಂದೊಂದರಂತೆ ವಿಲನ್ ಪಾತ್ರಗಳಲ್ಲಿ ನಟಿಸುತ್ತಿರುವ ಮಾಧವನ್ ಅವರು ಇದೀಗ ರಾಜಮೌಳಿ-ಮಹೇಶ್ ಬಾಬು ಸಿನಿಮಾನಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ನಾನಾ ಪಾಟೇಕರ್ ಅವರು ನೋ ಹೇಳಿದ ಪಾತ್ರದಲ್ಲಿಯೇ ಮಾಧವನ್ ಅವರು ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಕಡಿಮೆ ಬಜೆಟ್ ಸಿನಿಮಾ ನೋಡಿ ಮನಸಾರೆ ಕೊಂಡಾಡಿದ ರಾಜಮೌಳಿ

ಆರ್ ಮಾಧವನ್​ ಈಗ ತಾವು ಮಾಡುತ್ತಿರುವುದಕ್ಕಿಂತಲೂ ಹಿರಿಯ ವ್ಯಕ್ತಿಯ ಪಾತ್ರವನ್ನು ರಾಜಮೌಳಿ ಸಿನಿಮಾನಲ್ಲಿ ನಿರ್ವಹಿಸಿದ್ದು, ಇದಕ್ಕಾಗಿ ಭಾರಿ ಮೊತ್ತದ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ. ಒಂದು ಕಾಲದಲ್ಲಿ ಚಾಕಲೋಟೆ ಹೀರೋ ಆಗಿದ್ದ ಮಾಧವನ್, ಇತ್ತೀಚೆಗೆ ರಗಡ್ ಪಾತ್ರಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲು ಮುಂದಾಗಿದ್ದಾರೆ.

ರಾಜಮೌಳಿ, ಮಹೇಶ್ ಬಾಬು ಸಿನಿಮಾ ಅಡ್ವೇಂಚರಸ್ ಸಿನಿಮಾ ಆಗಿದ್ದು, ಅರಣ್ಯದಲ್ಲಿ ನಡೆಯುವ ಸಾಹಸಮಯ ಕತೆಯನ್ನು ಒಳಗೊಂಡಿದೆ. ಸಿನಿಮಾಕ್ಕೆ ಹಾಲಿವುಡ್​ನ ಇಂಡಿಯಾನಾ ಜೋನ್ಸ್ ಸ್ಪೂರ್ತಿ ಆಗಿದ್ದು, ಪ್ರಿಯಾಂಕಾ ಚೋಪ್ರಾ ಈ ಸಿನಿಮಾದ ನಾಯಕಿ. ಸಿನಿಮಾನಲ್ಲಿ ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಸಹ ನಟಿಸುತ್ತಿದ್ದಾರೆ. ಸಿನಿಮಾದ ಮೂರನೇ ಶೆಡ್ಯೂಲ್ ಚಿತ್ರೀಕರಣ ಜೂನ್ 9 ರಿಂದ ಹೈದರಾಬಾದ್​​ನಲ್ಲಿ ಪ್ರಾರಂಭ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ