ಮುಸುಕು ಧರಿಸಿ ತನ್ನದೇ ಸಿನಿಮಾದ ವಿಮರ್ಶೆ ಕೇಳಿ ತಿಳಿದುಕೊಂಡ ಸ್ಟಾರ್ ನಟ
Public Review: ಸಿನಿಮಾ ನಟರಿಗೆ ತಮ್ಮ ಸಿನಿಮಾದ ಬಗ್ಗೆ ಜನ ಏನೆಂದುಕೊಳ್ಳುತ್ತಿದ್ದಾರೆ ಎಂಬುದು ಬಹುತೇಕ ಸಂದರ್ಭದಲ್ಲಿ ಗೊತ್ತಾಗುವುದೇ ಇಲ್ಲ. ಆನ್ಲೈನ್ ಸಿನಿಮಾ ವಿಮರ್ಶೆ, ನಿರ್ದೇಶಕ, ನಿರ್ಮಾಪಕರು ಹೇಳುವುದನ್ನೇ ಅಂತಿಮ ಎಂದುಕೊಂಡಿರುತ್ತಾರೆ. ಇದೀಗ ಸ್ಟಾರ್ ನಟನೊಬ್ಬ ಮುಸುಕು ಹಾಕಿಕೊಂಡು ಚಿತ್ರಮಂದಿರಗಳ ಬಳಿ ಹೋಗಿ ತಮ್ಮ ಸಿನಿಮಾ ವಿಮರ್ಶೆಯನ್ನು ಜನರಿಂದ ತಾವೇ ಪಡೆದಿದ್ದಾರೆ.

ಸಿನಿಮಾ (Cinema) ನಟರಿಗೆ ತಮ್ಮ ಸಿನಿಮಾ ಬಿಡುಗಡೆ ಆದ ಮೇಲೆ ಜನರಿಗೆ ಇಷ್ಟವಾಗಿದೆಯೇ ಇಲ್ಲವೇ, ಇಷ್ಟವಾದರೆ ಯಾವ ಅಂಶಗಳು ಇಷ್ಟವಾಗಿವೆ, ಯಾವುದು ಇಷ್ಟವಾಗಿಲ್ಲ ಎಂಬುದೇ ತಿಳಿಯುವುದಿಲ್ಲ. ನಿರ್ದೇಶಕರು, ನಿರ್ಮಾಪಕರು ಹೇಳಿದ್ದನ್ನು ಕೇಳುವುದು ಬಿಟ್ಟರೆ ಜನರ ನಿಜವಾದ ಅಭಿಪ್ರಾಯ ತಿಳಿಯುವುದೇ ಇಲ್ಲ. ಎಷ್ಟೋ ಬಾರಿ ನಟರು, ತಮ್ಮ ಸಿನಿಮಾ ಸೂಪರ್ ಹಿಟ್ ಎಂದುಕೊಂಡಿರುತ್ತಾರೆ ಆದರೆ ಜನರಿಗೆ ಸಿನಿಮಾ ಇಷ್ಟ ಆಗಿರುವುದೇ ಇಲ್ಲ. ಇದೀಗ ಸೂಪರ್ ಸ್ಟಾರ್ ನಟರೊಬ್ಬರು ಮುಸುಕು ಧರಿಸಿಕೊಂಡು ತಮ್ಮ ಸಿನಿಮಾ ಪ್ರದರ್ಶನವಾಗುತ್ತಿರುವ ಚಿತ್ರಮಂದಿರಕ್ಕೆ ಹೋಗಿ ಪ್ರೇಕ್ಷಕರಿಂದ ನೇರವಾಗಿ ಅಭಿಪ್ರಾಯ ತಿಳಿದುಕೊಂಡಿದ್ದಾರೆ.
ಸಿನಿಮಾ ಬಿಡುಗಡೆ ಆದ ಮೊದಲ ದಿನ ಪ್ರೇಕ್ಷಕರು ಚಿತ್ರಮಂದಿರದಿಂದ ಹೊರಗೆ ಬಂದಾಗ ಅವರ ಮುಖಕ್ಕೆ ಕ್ಯಾಮೆರಾ ಹಿಡಿದು ಸಿನಿಮಾ ವಿಮರ್ಶೆ ಪಡೆಯುವುದು ಇತ್ತೀಚೆಗೆ ಸಾಮಾನ್ಯ. ಯೂಟ್ಯೂಬ್ ಚಾನೆಲ್ಗಳು ಹೆಚ್ಚಾದ ಬಳಿಕ ಈ ಫರ್ಸ್ ಡೇ ಫಸ್ಟ್ ಡೇ ರಿವ್ಯೂಗಳು ಹೆಚ್ಚಾಗಿವೆ. ಮೊದಲ ಶೋ ನೋಡಿದ ಜನರು ನೀಡುವ ವಿಮರ್ಶೆಯನ್ನು ಆಧರಿಸಿ ಸಿನಿಮಾ ಹಿಟ್ ಆಗಲಿದಯೇ ಅಥವಾ ಫ್ಲಾಪ್ ಆಗಲಿದೆಯೇ ಎಂದು ಲೆಕ್ಕ ಹಾಕಬಹುದು.
ಇದೇ ಕಾರಣಕ್ಕೆ ಬಾಲಿವುಡ್ನ ಸ್ಟಾರ್ ನಟ ಅಕ್ಷಯ್ ಕುಮಾರ್, ತಮ್ಮ ‘ಹೌಸ್ಫುಲ್ 5’ ಸಿನಿಮಾದ ಶೋ ನಡೆಯುತ್ತಿದ್ದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರದ ಮುಂದೆ ಮಾಸ್ಕ್ ಒಂದನ್ನು ಧರಿಸಿಕೊಂಡು ಹೋಗಿ ನಿಂತಿದ್ದಾರೆ. ಸಿನಿಮಾ ನೋಡಿ ಬಂದ ಪ್ರೇಕ್ಷಕರ ಮುಂದೆ ಮೈಕ್ ಹಿಡಿದು ಸಿನಿಮಾ ಇಷ್ಟವಾಯ್ತಾ? ಇಷ್ಟವಾದರೆ ಯಾವ ಅಂಶ ಇಷ್ಟವಾಯ್ತು, ಯಾವ ನಟ ಇಷ್ಟವಾದರು ಎಂಬಿತ್ಯಾದಿ ವಿಷಯಗಳನ್ನು ಕೇಳಿ ತಿಳಿದುಕೊಂಡಿದ್ದಾರೆ.
‘ಹೌಸ್ಫುಲ್ 5’ ಸಿನಿಮಾನಲ್ಲಿ ವಿಲನ್ ಧರಿಸಿರುವ ಮಾಸ್ಕ್ ಅನ್ನೇ ಅಕ್ಷಯ್ ಕುಮಾರ್ ಧರಿಸಿ ಜನರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಹಲವಾರು ಮಂದಿಯನ್ನು ಅಕ್ಷಯ್ ಕುಮಾರ್ ಅಭಿಪ್ರಾಯ ಕೇಳಿದ್ದಾರೆ. ಎಲ್ಲರೂ ಬಹುತೇಕ ಸಿನಿಮಾ ಚೆನ್ನಾಗಿದೆ, ಹಾಸ್ಯ ಚೆನ್ನಾಗಿದೆ, ಅಕ್ಷಯ್ ಕುಮಾರ್ ನಮಗೆ ಇಷ್ಟವಾದರು ಎಂದೇ ಹೇಳಿದ್ದಾರೆ. ಯಾರಿಗೂ ಸಹ ತಮ್ಮ ಸಂದರ್ಶನ ಮಾಡುತ್ತಿರುವುದು ಸ್ವತಃ ಅಕ್ಷಯ್ ಕುಮಾರ್ ಎಂಬುದು ಗೊತ್ತಾಗಿಲ್ಲ.
ಇದನ್ನೂ ಓದಿ:ಸ್ನೇಹಿತೆಯ ಮದುವೆ ಸಂಭ್ರಮದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್
ವಿಡಿಯೋ ಅನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಅಕ್ಷಯ್ ಕುಮಾರ್, ‘ಬಾಂದ್ರಾನಲ್ಲಿ ಜನರಿಂದಲೇ ನಮ್ಮ ‘ಹೌಸ್ಫುಲ್ 5’ ಸಿನಿಮಾದ ವಿಮರ್ಶೆ ಕೇಳಿದೆ, ಆರಂಭದಲ್ಲಿ ಯಾರೂ ಗುರುತು ಹಿಡಿಯಲಿಲ್ಲ ಆದರೆ ಕೆಲವರಿಗೆ ಗೊತ್ತಾಗಿಬಿಟ್ಟಿತು, ಎಲ್ಲರೂ ಮುತ್ತಿಕೊಳ್ಳುವ ಮೊದಲೇ ಅಲ್ಲಿಂದ ಪರಾರಿ ಆದೆ’ ಎಂದು ಬರೆದುಕೊಂಡಿದ್ದಾರೆ.
‘ಹೌಸ್ಫುಲ್ 5’ ಸಿನಿಮಾನಲ್ಲಿ ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್, ರಿತೇಶ್ ದೇಶ್ಮುಖ್, ಜಾಕಿಶ್ರಾಫ್, ಸಂಜಯ್ ದತ್, ನಾನಾ ಪಾಟೇಕರ್, ಡಿನೊ ಮರಿಯೊ, ಜಾನಿ ಲಿವರ್, ರಾಜ್ಪಾಲ್ ಯಾದವ್, ಬೊಮನ್ ಇರಾನಿ, ಅರ್ಜುನ್ ರಾಮ್ಪಾಲ್, ಚಂಕಿ ಪಾಂಡೆ, ಸಂಜಯ್ ಮಿಶ್ರ, ಜಾಕ್ವೆಲಿನ್ ಫರ್ನಾಂಡೀಸ್, ಸೌಂದರ್ಯ ಶರ್ಮಾ, ಕೃತಿ ಕರಬಂಧ, ಸೋನಂ ಭಾಜ್ವಾ, ನೋರಾ ಫತೇಹಿ, ಸೋನಂ ಭಾಜ್ವಾ ಹೀಗೆ ಸುಮಾರು 20ಕ್ಕೂ ಹೆಚ್ಚು ಮಂದಿ ನಟಿಸಿದ್ದಾರೆ. ಸಿನಿಮಾಕ್ಕೆ ಅಕ್ಷಯ್ ಕುಮಾರ್ ಸಹ ನಿರ್ಮಾಣ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:07 pm, Sun, 8 June 25