ಪ್ರಭಾಸ್ ಸಿನಿಮಾಕ್ಕಾಗಿ ಕಾಡಿನಲ್ಲಿ ಗೋಡೆ ಹಾರಿದ ಹಿರಿಯ ಸ್ಟಾರ್ ನಟ
Prabhas: ತಮ್ಮ ನೆಚ್ಚಿನ ನಟನ ಕಾಣಲು ಅಭಿಮಾನಿಗಳು ಮರ ಹತ್ತುವುದು, ಗೋಡೆಗಳನ್ನು ಹಾರುವುದು ನೋಡಿದ್ದೇವೆ. ಪ್ರಭಾಸ್ ಅಭಿಮಾನಿಗಳು ಇನ್ನೂ ಒಂದೆ ಹೆಜ್ಜೆ ಮುಂದೆ, ಪ್ರಭಾಸ್ಗಾಗಿ ಏನು ಬೇಕಾದರೂ ಮಾಡಬಲ್ಲರು. ಆದರೆ ಇದೀಗ ಸ್ಟಾರ್ ನಟರೊಬ್ಬರು ಪ್ರಭಾಸ್ ಅವರ ಸಿನಿಮಾಕ್ಕಾಗಿ ಗೋಡೆ ಹಾರಿದ್ದಾರೆ. ತಾವು ಗೋಡೆ ಹಾರುತ್ತಿರುವ ದೃಶ್ಯವನ್ನು ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಮೆಚ್ಚಿನ ನಟನನ್ನು ಕಾಣಲು ಅವರ ಅಭಿಮಾನಿಗಳು ನಾನಾ ಯತ್ನಗಳನ್ನು ಮಾಡುತ್ತಾರೆ. ಮರಗಳನ್ನು ಹತ್ತುವುದು ಗೋಡೆಗಳನ್ನು ಹತ್ತುವುದು ಮಾಡುತ್ತಾರೆ. ನಾಗ ಚೈತನ್ಯ ಅವರನ್ನು ನೋಡಲು ಹುಚ್ಚು ಅಭಿಮಾನಿಯೊಬ್ಬ ಸೇತುವೆ ಮೇಲಿಂದ ನದಿಗೆ ಹಾರಿದ್ದ. ಪ್ರಭಾಸ್ ಅಭಿಮಾನಿಗಳಂತೂ ಇನ್ನೂ ಕ್ರೇಜಿ ಜನ. ಪ್ರಭಾಸ್ಗಾಗಿ (Prabhas) ಏನು ಬೇಕಾದರೂ ಮಾಡುತ್ತಾರೆ. ಆದರೆ ಇಲ್ಲೊಬ್ಬ ಹಿರಿಯ ಸ್ಟಾರ್ ನಟ, ಪ್ರಭಾಸ್ ಸಿನಿಮಾಕ್ಕಾಗಿ ಗೋಡೆ ಹಾರಿದ್ದಾರೆ. ಅದರ ವಿಡಿಯೋ ಅನ್ನು ತಮ್ಮದೇ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಪ್ರಭಾಸ್ ಪ್ರಸ್ತುತ ‘ಫೌಜಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ರಘು ಹನುಪುಡಿ ನಿರ್ದೇಶನ ಮಾಡುತ್ತಿರುವ ಈ ಸಿನಿಮಾ ಎರಡನೇ ವಿಶ್ವಯುದ್ಧದಲ್ಲಿ ಭಾಗವಹಿಸಿದ್ದ ಭಾರತೀಯ ಸೈನಿಕನೊಬ್ಬನ ಕತೆಯನ್ನು ಒಳಗೊಂಡಿದೆ. ಸಿನಿಮಾದ ಚಿತ್ರೀಕರಣವನ್ನು ಬಹುತೇಕ ಸೆಟ್ಗಳಲ್ಲಿಯೇ ಮಾಡಿದ್ದಾರೆ ರಘು ಹನುಪುಡಿ, ಇದಕ್ಕಾಗಿ ಹೈದರಾಬಾದ್ ಹೊರವಲಯದಲ್ಲಿ ಸೆಟ್ ನಿರ್ಮಾಣ ಮಾಡಲಾಗಿದೆ.
ಬಾಲಿವುಡ್ನ ಸ್ಟಾರ್ ನಟ ಅನುಪಮ್ ಖೇರ್ ಈ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಸಿನಿಮಾದ ಚಿತ್ರೀಕರಣಕ್ಕಾಗಿ ಅವರು ಬಂದಿದ್ದರು. ಹೈದರಾಬಾದ್ನ ಹೊರವಲಯದ ಅರಣ್ಯ ಪ್ರದೇಶದ ಬಳಿ ಸಿನಿಮಾದ ಸೆಟ್ ನಿರ್ಮಾಣ ಮಾಡಲಾಗಿದೆ. ಆದರೆ ಅನುಪಮ್ ಖೇರ್ ಸೆಟ್ಗೆ ಬಂದ ಕಾರು, ಅರಣ್ಯ ಪ್ರದೇಶದಲ್ಲಿ ನಿಂತು ಹೋಗಿದೆ. ಆಗ ಸಿನಿಮಾ ಸೆಟ್ನ ತಂಡದವರು ಅನುಪಮ್ ಖೇರ್ ಅವರಿಗೆ ಮೆಟ್ಟಿಲೊಂದನ್ನು ತಂದು, ಅದನ್ನು ಸೆಟ್ ನಿರ್ಮಾಣ ಮಾಡಲಾಗಿದ್ದ ಸ್ಥಳದ ಕಾಂಪೌಂಡ್ಗೆ ಹಾಕಿ, ಮೆಟ್ಟಿಲಿನ ಮೂಲಕ ಅನುಪಮ್ ಖೇರ್ ಕಾಂಪೌಡ್ ಗೋಡೆ ಏರುವಂತೆ ಮಾಡಿದ್ದಾರೆ. ಬಳಿಕ ಅನುಪಮ್ ಖೇರ್ ಗೋಡೆ ಹಾರಿ ಸಿನಿಮಾ ಸೆಟ್ ಸೇರಿಕೊಂಡಿದ್ದಾರೆ.
ಇದನ್ನೂ ಓದಿ:50 ಕೋಟಿ ರೂಪಾಯಿ ಸಂಭಾವನೆ ಕಡಿಮೆ ಮಾಡಿಕೊಂಡ ಪ್ರಭಾಸ್; ಕಾರಣ ಏನು?
ಅನುಪಮ್ ಖೇರ್, ತಮ್ಮ ಈ ಸಾಹಸವನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ನೋಡಿ ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸಲು ಏನೇನೆಲ್ಲ ಸಾಹಸಗಳನ್ನು ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಅನುಪಮ್ ಖೇರ್ ಅವರು ಗೋಡೆ ಹಾರುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಭಾಸ್ ನಟನೆಯ ‘ಫೌಜಿ’ ಸಿನಿಮಾ ಅನ್ನು ರಘು ಹನುಪುಡಿ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಇವರು ‘ಸೀತಾ-ರಾಮಂ’ ಸಿನಿಮಾ ನಿರ್ದೇಶನ ಮಾಡಿದ್ದರು. ಸಿನಿಮಾದಲ್ಲಿ ಇಮಾನ್ವಿ ಇಸ್ಮಾಯಿಲ್ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ತೊಡಗಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




