ಸಲ್ಮಾನ್ ಖಾನ್ ನಟನೆಯ ಸಿನಿಮಾ ತೆರೆಗೆ ಬರುತ್ತದೆ ಎಂದರೆ ನೋಡೋಕೆ ಅಭಿಮಾನಿಗಳು ಕಾತುರರಾಗಿರುತ್ತಾರೆ. ಸಲ್ಲು ಸಿನಿಮಾ ರಿಲೀಸ್ ಆಗುತ್ತಿದೆ ಎಂದರೆ ಮೊದಲ ದಿನ ದೊಡ್ಡ ಮೊತ್ತದ ಕಲೆಕ್ಷನ್ ಆಗೋದು ಗ್ಯಾರಂಟಿ. ಈ ಬಾರಿಯ ಈದ್ ಹಬ್ಬದ ಪ್ರಯುಕ್ತ ರಾಧೆ ಸಿನಿಮಾ ತೆರೆಗೆ ಬರುತ್ತಿದೆ. ಕೊರೊನಾ ಕಾರಣದಿಂದ ಸಿನಿಮಾದ ಕಲೆಕ್ಷನ್ ತಗ್ಗುವ ನಿರೀಕ್ಷೆ ಇದೆ. ಇಂದು ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು ಧೂಳೆಬ್ಬಿಸುತ್ತಿದೆ. ಈ ಮಧ್ಯೆ, ಸಿನಿಮಾದಲ್ಲಿ ಬಳಕೆಯಾದ ಹಾಡೊಂದು ಎಲ್ಲರ ಗಮನ ಸೆಳೆಯುತ್ತಿದೆ. ಈ ಹಾಡು ದಕ್ಷಿಣ ಭಾರತದ ಸಿನಿಮಾದ್ದು ಅನ್ನೋದು ವಿಶೇಷ.
ಸಲ್ಮಾನ್ ಖಾನ್ ಈ ಮೊದಲಿನಿಂದಲೂ ದಕ್ಷಿಣ ಭಾರತ ಸಿನಿಮಾಗಳ ಫ್ಯಾನ್. ಹೀಗಾಗಿ, ಅನೇಕ ಚಿತ್ರಗಳನ್ನು ಅವರು ಬಾಲಿವುಡ್ಗೆ ರಿಮೇಕ್ ಮಾಡಿದ್ದಾರೆ. ತೆಲುಗಿನಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದ ‘ರಿಂಗ ರಿಂಗಾ..’ ಹಾಡನ್ನು ‘ಡಿಂಕ ಚಿಕಾ..’ ಎಂದು ಬಾಲಿವುಡ್ಗೆ ರಿಮೇಕ್ ಮಾಡಿದ್ದರು. ರಾಧೆ ಚಿತ್ರದಲ್ಲೂ ಅದು ಮುಂದುವರಿದಿದೆ.
ತೆಲುಗಿನಲ್ಲಿ ಅಲ್ಲು ಅರ್ಜುನ್ ನಟನೆಯ ಡಿಜೆ: ದುವ್ವಾಡ ಜಗನ್ನಾಥಮ್ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಈ ಸಿನಿಮಾದ ‘ಸೀಟಿಮಾರ್..’ ಹಾಡು ಎಲ್ಲರ ಬಾಯಲ್ಲಿ ಗುನುಗುವಂತಾಗಿತ್ತು. ಇನ್ನು, ಈ ಹಾಡಿನಲ್ಲಿ ಅಲ್ಲು ಅರ್ಜುನ್ ಸ್ಟೆಪ್ ನೋಡಿ ಅಭಿಮಾನಿಗಳು ಅಕ್ಷರಶಃ ಫಿದಾ ಆಗಿದ್ದರು. ಈ ಹಾಡನ್ನು ಈಗ ರಾಧೆ ಸಿನಿಮಾದಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ.
ಹೌದು, ‘ಸೀಟಿಮಾರ್..’ ಟ್ಯೂನ್ಅನ್ನು ಸಲ್ಮಾನ್ ಖಾನ್ ಸಿನಿಮಾಗೆ ಭಟ್ಟಿ ಇಳಿಸಲಾಗಿದೆ. ಈ ಹಾಡಿಗೆ ಸಲ್ಮಾನ್ ಖಾನ್ ಹಾಗೂ ದಿಶಾ ಪಠಾಣಿ ಸ್ಟೆಪ್ ಹಾಕಿದ್ದಾರೆ. ಟ್ರೇಲರ್ನಲ್ಲಿ ಈ ಹಾಡಿನ ಸಣ್ಣ ಝಲಕ್ ಸಿಗುತ್ತದೆ. ಶೀಘ್ರವೇ ಈ ಹಾಡು ರಿಲೀಸ್ ಆಗುವ ನಿರೀಕ್ಷೆ ಇದೆ.
ರಾಧೆ ಸಿನಿಮಾದಲ್ಲಿ ಸಲ್ಮಾನ್ ಖಾನ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಪ್ರಭುದೇವ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಜಾಕಿ ಶ್ರಾಫ್, ರಣದೀಪ್ ಹೂಡಾ ಮತ್ತು ದಿಶಾ ಪಠಾಣಿ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಈದ್ ಪ್ರಯುಕ್ತ ಮೇ 13ರಂದು ಸಿನಿಮಾ ತೆರೆಗೆ ಬರುತ್ತಿದೆ.
ಇದನ್ನೂ ಓದಿ: Radhe Trailer: ರಾಧೆ ಟ್ರೇಲರ್ ಮೂಲಕ ಧೂಳೆಬ್ಬಿಸಿದ ಸಲ್ಮಾನ್ ಖಾನ್; ಹೇಗಿದ್ದಾನೆ ಮೋಸ್ಟ್ ವಾಂಟೆಡ್ ಭಾಯ್?
Radhe Trailer: ಮೊದಲ ಬಾರಿಗೆ ಹೀರೋಯಿನ್ ತುಟಿಗೆ ಮುತ್ತಿಟ್ಟ ಸಲ್ಮಾನ್ ಖಾನ್; ಅಭಿಮಾನಿಗಳಿಗೆ ಶಾಕ್
Published On - 7:43 pm, Thu, 22 April 21