Radhe Trailer: ಮೊದಲ ಬಾರಿಗೆ ಹೀರೋಯಿನ್ ತುಟಿಗೆ ಮುತ್ತಿಟ್ಟ ಸಲ್ಮಾನ್ ಖಾನ್; ಅಭಿಮಾನಿಗಳಿಗೆ ಶಾಕ್
Radhe Hindi Movie Trailer: ಸಲ್ಮಾನ್ ಖಾನ್ ಮತ್ತು ದಿಶಾ ಪಠಾಣಿ ನಟನೆಯ ರಾಧೆ ಸಿನಿಮಾ ಟ್ರೇಲರ್ ಬಿಡುಗಡೆ ಆಗಿದೆ. ಅದರಲ್ಲಿನ ಒಂದು ಶಾಟ್ ನೋಡಿ ಫ್ಯಾನ್ಸ್ ಕಣ್ಣರಳಿಸಿದ್ದಾರೆ.
ಬಾಲಿವುಡ್ ಸಿನಿಮಾಗಳಲ್ಲಿ ಕಿಸ್ಸಿಂಗ್ ದೃಶ್ಯಗಳು ತುಂಬಾ ಕಾಮನ್. ಲಿಪ್ ಲಾಕ್ ಮಾಡಲು ಯಾರೂ ಹಿಂಜರಿಯುವುದಿಲ್ಲ. ಇಂಟಿಮೇಟ್ ದೃಶ್ಯಗಳಲ್ಲಿ ಸಹ-ಕಲಾವಿದರ ತುಟಿಗೆ ಮುತ್ತಿಡುವುದು ದೊಡ್ಡ ವಿಷಯವೇ ಅಲ್ಲ. ಆದರೆ ಅದೇಕೋ ಗೊತ್ತಿಲ್ಲ, ನಟ ಸಲ್ಮಾನ್ ಖಾನ್ ಈ ವಿಚಾರದಲ್ಲಿ ಮಡಿವಂತಿಕೆ ಕಾಪಾಡಿಕೊಂಡು ಬಂದಿದ್ದರು. ಇಷ್ಟು ವರ್ಷಗಳ ವೃತ್ತಿಜೀವನದಲ್ಲಿ ಅವರು ಹೀರೋಯಿನ್ಗಳಿಗೆ ಕಿಸ್ ಮಾಡಲು ಹಿಂಜರಿಯುತ್ತಿದ್ದರು. ಆದರೆ ಈಗ ಅವರೂ ಬದಲಾಗಿದ್ದಾರೆ!
‘ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಮತ್ತು ದಿಶಾ ಪಠಾಣಿ ಜೊತೆಯಾಗಿ ನಟಿದ್ದಾರೆ. ಈದ್ ಹಬ್ಬದ ಪ್ರಯುಕ್ತ ಮೇ 13ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಲು ಗುರುವಾರ (ಏ.22) ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಹಲವು ಅಂಶಗಳು ಗಮನ ಸೆಳೆದಿವೆ. ಆದರೆ ಹೆಚ್ಚು ಹೈಲೈಟ್ ಆಗುತ್ತಿರುವುದು ಒಂದು ಕಿಸ್ಸಿಂಗ್ ದೃಶ್ಯ! ಹೌದು, ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರು ದಿಶಾ ಪಠಾಣಿ ತುಟಿಗೆ ಮುತ್ತಿಟ್ಟಿದ್ದಾರೆ.
ಟ್ರೇಲರ್ನಲ್ಲಿ ಕೇವಲ ಒಂದು ಸೆಕೆಂಡ್ ಕಾಣಿಸಿಕೊಂಡಿರುವ ಈ ಕಿಸ್ಸಿಂಗ್ ಶಾಟ್ ನೋಡಿ ಸಲ್ಮಾನ್ ಖಾನ್ ಅಭಿಮಾನಿಗಳು ಅಚ್ಚರಿಪಟ್ಟಿದ್ದಾರೆ. ನಿಜಕ್ಕೂ ಸಲ್ಲು ಕಿಸ್ ಮಾಡಿದ್ದಾರಾ ಎಂದು ಅನೇಕರು ಸೋಶಿಯಲ್ ಮೀಡಿಯಾ ಮೂಲಕ ಆಶ್ಚರ್ಯದ ಪ್ರಶ್ನೆ ಕೇಳುತ್ತಿದ್ದಾರೆ.
Itni khushi muje aaj tak bhi hui finally kiss is here ?#RadheTrailer #Radhe #SalmanKhan #Dishapatani pic.twitter.com/uu9fjcZkli
— Being ABD (@being_Sk_alia) April 22, 2021
‘ಇಷ್ಟು ಖುಷಿ ನನಗೆ ಯಾವತ್ತೂ ಆಗಿರಲಿಲ್ಲ. ಕೊನೆಗೂ ಇಲ್ಲೊಂದು ಚುಂಬನ ಇದೆ’ ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ.
Itni khushi muje aaj tak bhi hui finally kiss is here ?#RadheTrailer #Radhe #SalmanKhan #Dishapatani pic.twitter.com/uu9fjcZkli
— Being ABD (@being_Sk_alia) April 22, 2021
ಇಷ್ಟು ವರ್ಷಗಳ ಕಾಲ ‘ನೋ ಕಿಸ್’ ನಿಯಮ ಪಾಲಿಸುತ್ತಿದ್ದ ಸಲ್ಮಾನ್ ಖಾನ್ ಈಗ ಯಾಕೆ ನಿಯಮ ಸಡಿಲಿಸಿದರು? ನಿಜಕ್ಕೂ ಅವರು ಲಿಪ್ ಲಾಕ್ ಮಾಡಿದ್ದಾರಾ? ಸದ್ಯಕ್ಕಂತೂ ಟ್ರೇಲರ್ನಲ್ಲಿ ಈ ಶಾಟ್ ಅಸ್ಪಷ್ಟವಾಗಿದೆ. ಅದರ ಹಿಂದಿನ ಅಸಲಿಯತ್ತು ಏನು ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿಯಾದರೂ ಅಭಿಮಾನಿಗಳು ಈ ಸಿನಿಮಾವನ್ನು ನೋಡಲು ಕಾತರರಾಗಿದ್ದಾರೆ.
ಮೇ 13ರಂದು ಈ ಚಿತ್ರ ಓಟಿಟಿ ಮತ್ತು ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ಡಿ2ಎಚ್, ಓಟಿಟಿ ಪ್ಲಾಟ್ಫಾರ್ಮ್ ಮುಂತಾದ ವೇದಿಕೆಗಳಲ್ಲಿ ಹಣ ಪಾವತಿಸಿ ಸಿನಿಮಾ ವೀಕ್ಷಿಸುವ ಅವಕಾಶ ಕಲ್ಪಿಸಲಾಗುತ್ತಿದೆ.
(ರಾಧೆ ಸಿನಿಮಾ ಟ್ರೇಲರ್)
ಖಳನಟನಾಗಿ ರಣದೀಪ್ ಹೂಡಾ ಅವರು ಸಲ್ಮಾನ್ ಖಾನ್ ಎದುರು ಅಬ್ಬರಿಸಲಿದ್ದಾರೆ. ಚಿತ್ರದಲ್ಲಿನ ಒಂದು ಪ್ರಮುಖ ಪಾತ್ರದಲ್ಲಿ ಹಿರಿಯ ನಟ ಜಾಕಿ ಶ್ರಾಫ್ ಅಭಿನಯಿಸಿದ್ದಾರೆ. ರಾಧೆಗೆ ಪ್ರಭುದೇವ ನಿರ್ದೇಶನ ಮಾಡಿದ್ದಾರೆ. ಸದ್ಯಕ್ಕಂತ ಚಿತ್ರದ ಟ್ರೇಲರ್ ಲಕ್ಷಾಂತರ ಬಾರಿ ವೀಕ್ಷಣೆ ಕಾಣುತ್ತ ಮುನ್ನುಗ್ಗುತ್ತಿದೆ.
ಇದನ್ನೂ ಓದಿ: Radhe Trailer: ರಾಧೆ ಟ್ರೇಲರ್ ಮೂಲಕ ಧೂಳೆಬ್ಬಿಸಿದ ಸಲ್ಮಾನ್ ಖಾನ್; ಹೇಗಿದ್ದಾನೆ ಮೋಸ್ಟ್ ವಾಂಟೆಡ್ ಭಾಯ್?
(Radhe Your Most Wanted Bhai Trailer witnesses Salman Khan first onscreen kiss with Disha Patani)
Published On - 2:30 pm, Thu, 22 April 21