Nia Sharma : ಬಿಕಿನಿ ಧರಿಸಿ ಪಡ್ಡೆಗಳ ನಿದ್ದೆ ಕದ್ದ ನಿಯಾ ಶರ್ಮಾ; ಹಾಟ್ ಫೋಟೋಶೂಟ್ ವೈರಲ್

Nia Sharma Bikini Photos: ಕಿರುತೆರೆ ನಟಿ ನಿಯಾ ಶರ್ಮಾ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡು ಮಾಡುತ್ತಿದ್ದಾರೆ. ಅವರ ಒಂದು ಫೋಟೋಶೂಟ್ ಸಖತ್ ವೈರಲ್ ಆಗಿದೆ. ಬಿಕಿನಿ ಧರಿಸಿರುವ ನಿಯಾ ಶರ್ಮಾ ಪಡ್ಡೆಗಳ ನಿದ್ದೆ ಕದ್ದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಿಯಾ ಶರ್ಮಾ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರಿಗೆ 60 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.

  • TV9 Web Team
  • Published On - 12:35 PM, 22 Apr 2021
1/6
ನಟಿ ನಿಯಾ ಶರ್ಮಾ ಇತ್ತೀಚೆಗೆ ತಮ್ಮ ಅಭಿಮಾನಿಗಳಿಗಾಗಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಗೋವಾದ ಕಡಲ ಕಿನಾರೆಯಲ್ಲಿ. ಮರಳಿನ ಮೇಲೆ ಮಲಗಿಕೊಂಡು ನಿಯಾ ಫೋಟೋಶೂಟ್ ಮಾಡಿಸಿದ್ದಾರೆ. ಆ ಫೋಟೋಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆ ಸಿಗುತ್ತಿದೆ.
2/6
ಎಲ್ಲೆಲ್ಲೂ ಕೊರೊನಾ ವೈರಸ್ ಹರಡುತ್ತಿರುವಾಗ ನಿಯಾ ಯಾಕೆ ಫೋಟೋಶೂಟ್ ಮಾಡಿಸಿಕೊಂಡರು ಎಂಬ ಪ್ರಶ್ನೆ ಮೂಡುವುದು ಬೇಡ. ಇದು ಕೆಲವು ದಿನಗಳ ಹಿಂದೆ ಮಾಡಿಸಿದ ಫೋಟೋಶೂಟ್. ಆದರೆ ಅವುಗಳನ್ನು ಈಗ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
3/6
ಜಮಾಯಿ 2.0 ವೆಬ್ ಸಿರೀಸ್ನಲ್ಲಿ ನಿಯಾ ಶರ್ಮಾ ನಟಿಸಿದ್ದಾರೆ. ಆ ವೆಬ್ ಸರಣಿಯ ಚಿತ್ರೀಕರಣ ಗೋವಾದಲ್ಲಿ ನಡೆದಿತ್ತು. ಆ ಸಂದರ್ಭದಲ್ಲಿ ನಿಯಾ ಅವರು ಬಿಕಿನಿ ಧರಿಸಿ ಫೋಟೋಗೆ ಪೋಸ್ ನೀಡಿದ್ದರು.
4/6
ತುಂಬಾ ಮಾದಕವಾಗಿ ನಿಯಾ ಪೋಸ್ ನೀಡಿದ್ದಾರೆ. ‘ನನ್ನ ಮನದಲ್ಲಿ ನನ್ನ ಚಿತ್ರವನ್ನು ನಾನೇ ಚಿತ್ರಿಸಿಕೊಳ್ಳುತ್ತೇನೆ. ಬೇರೆ ಯಾರೂ ಚಿತ್ರಿಸುವುದಿಲ್ಲ’ ಎಂದು ಈ ಫೋಟೋಗಳಿಗೆ ನಿಯಾ ಕ್ಯಾಪ್ಷನ್ ನೀಡಿದ್ದಾರೆ.
5/6
ಜನಪ್ರಿಯವಾಗಿರುವ ಜಮಾಯಿ 2.0 ವೆಬ್ ಸರಣಿಯಲ್ಲಿ ರವಿ ದುಬೆ ಜೊತೆಗೆ ನಿಯಾ ತೆರೆ ಹಂಚಿಕೊಂಡಿದ್ದಾರೆ. ಪ್ರೇಕ್ಷಕರಿಗೆ ಇಬ್ಬರ ಕೆಮಿಸ್ಟ್ರಿ ಇಷ್ಟವಾಗಿದೆ.
6/6
ಹಲವು ವರ್ಷಗಳಿಂದ ಹಿಂದಿ ಕಿರುತೆರೆಯಲ್ಲಿ ನಿಯಾ ಶರ್ಮಾ ಸಕ್ರಿಯರಾಗಿದ್ದಾರೆ. ಅನೇಕ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.