ರಘು ವೈನ್ ಸ್ಟೋರ್ ಯೂಟ್ಯೂಬ್ ಚಾನೆಲ್ ಮೂಲಕ ಹೆಸರು ಮಾಡಿರುವ ರಘು ಗೌಡ ಬಿಗ್ ಬಾಸ್ ಮನೆ ಸೇರಿದ ಕೂಡಲೇ ಭಾರೀ ನಿರೀಕ್ಷೆ ಹುಟ್ಟಿಕೊಂಡಿತ್ತು. ಆದರೆ, ಮನೆ ಒಳಗೆ ಸೇರಿದ ನಂತರ ಅವರು ಡಲ್ ಆಗಿದ್ದನ್ನು ನೋಡಿ ಫ್ಯಾನ್ಸ್ಗೆ ಬೇಸರ ಉಂಟಾಗಿತ್ತು. ಆದರೆ, ಮೂರನೇ ವಾರದಿಂದ ರಘು ಸಂಪೂರ್ಣ ಬದಲಾಗಿದ್ದಾರೆ. ಮನೆಯಲ್ಲಿ ತಾವೂ ನಗುತ್ತಾ ಎಲ್ಲರನ್ನೂ ನಗಿಸುತ್ತಿದ್ದಾರೆ. ಈಗ ಕಿಚ್ಚ ಸುದೀಪ್ ಎದುರು ರಘು ಗೌಡ ಅಚ್ಚರಿಯ ಮಾಹಿತಿ ಒಂದನ್ನು ಹೊರ ಹಾಕಿದ್ದಾರೆ.
ಆರಂಭದಲ್ಲಿ ರಘು ಗೌಡ ಅವರು ತಾವು ಜೀವನದಲ್ಲಿ ಅನುಭವಿಸಿದ ಕಹಿ ನೆನಪನ್ನು ಹಂಚಿಕೊಂಡಿದ್ದರು. ತಂದೆ-ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನುವ ವಿಚಾರ ಮನೆ ಮಂದಿಯಲ್ಲಿ ಅನೇಕರಿಗೆ ಶಾಕ್ ನೀಡಿತ್ತು. ಈಗ ಅವರ ಖುಷಿಯ ದಿನಗಳು ಅನಾವರಣಗೊಂಡಿದೆ.
ವೀಕೆಂಡ್ನಲ್ಲಿ ರಘುಗೆ ನಿಮ್ಮ ಬೆಸ್ಟ್ ಬ್ರೇಕಪ್ ಯಾವುದು ಎಂದು ಸುದೀಪ್ ಕೇಳಿದ್ದಾರೆ. ಆಗ ರಘು ತಮ್ಮ ಜೀವನದಲ್ಲಿ ನಡೆದ ವಿಚಿತ್ರ ಪ್ರೀತಿ ಬಗ್ಗೆ ಹೇಳಿಕೊಂಡಿದ್ದಾರೆ. ನಾನು ಒಂದು ಹುಡುಗಿ ಜತೆ ರಿಲೇಶನ್ಶಿಪ್ನಲ್ಲಿದೆ. ಮೊದಲೆಲ್ಲ ಚೆನ್ನಾಗಿತ್ತು. ಆದರೆ, ಹೀಗೆ ಮಾತುಕತೆ ಕಡಿಮೆ ಆಗ್ತಾ ಬಂತು. ಆದರೆ, ಅವಳು ಬ್ರೇಕಪ್ ಮಾಡಿಕೊಂಡಿದ್ದಳು ಎನ್ನುವುದು ಗೊತ್ತಿರಲಿಲ್ಲ. ಆರು ತಿಂಗಳ ನಂತರ ಒಮ್ಮೆ ಸಿಕ್ಕಿದ್ದಳು. ಆಗ ಮಾತನಾಡುವಾಗ ಆರು ತಿಂಗಳ ಹಿಂದೆ ಬ್ರೇಕಪ್ ಆಯ್ತಲ್ಲ. ಆಗ ನಾನು ಹೊಸ ವಿಚಾರ ಕಲಿತುಕೊಂಡೆ ಎಂದು ಆಕೆ ಹೇಳಿದ್ದಳು. ನಾನು ಶಾಕ್ ಆಗೋದೆ. ನನ್ನ ಸಂಬಂಧ ಮುರಿದು ಬಿದ್ದಿದೆ ಎಂದು ಗೊತ್ತಾಗಿದ್ದು ಆಗಲೇ. ನಾನು 6 ತಿಂಗಳ ಭ್ರಮೆಯಲ್ಲಿದ್ದಿದೆ. ನನಗೆ ಬ್ರೇಕಪ್ ಆಗಿದೆ ಎನ್ನುವುದೇ ನೆನಪಿರಲಿಲ್ಲ ಎಂದಿದ್ದಾರೆ.
ಈ ವೇಳೆ ಸುದೀಪ್, ನಿಮ್ಮ ಪತ್ನಿ ವಿದ್ಯಾ ಅವರಿಗೆ ಈ ವಿಚಾರ ಗೊತ್ತಿದೆಯ ಎಂದು ಕೇಳಿದ್ದಾರೆ. ಆಗ ರಘು, ಇಲ್ಲ ಅವಳಿಗೆ ಈ ಬಗ್ಗೆ ಗೊತ್ತಿಲ್ಲ. ವಿದ್ಯಾ ಆಚೆ ಬಂದ ಮೇಲೆ ಮಾತಾಡೋಣ ಎಂದು ಹೇಳುತ್ತಿದ್ದಂತೆ ಸುದೀಪ್ ನಕ್ಕಿದ್ದಾರೆ. ಆಗ ರಘು, ನನ್ನ ಹೆಂಡತಿ ನನ್ನ ಬಳಿ ಒಮ್ಮೆ ಈ ವಿಚಾರ ಮಾತನಾಡಿದ್ದರು. ನಿನ್ನ ಅಫೇರ್ ವಿಚಾರ ಹೊರ ಬಂದರೆ, ನಾನು ನಿನ್ನನ್ನು ಸಾಯಿಸಲ್ಲ, ಜೀವನ ಏನು ಎಂಬುದನ್ನು ತೋರಿಸುತ್ತೇನೆ ಎಂದಿದ್ದರು ಎಂದು ರಘು ಹೇಳಿದ್ದಾರೆ.
ಇದನ್ನೂ ಓದಿ: ರಘು-ವಿಶ್ವಗೆ ಬಿಗ್ ಬಾಸ್ ಮನೆಯಲ್ಲಿ ಮಾಡುತ್ತಿರುವ ದೊಡ್ಡ ತಪ್ಪಿನ ಅರಿವಾಗಿದೆ!
ವಿಶ್ವ ಚಿಕ್ಕವನಲ್ಲ, ತುಂಬಾನೇ ನಾಟಿ!; ರಘು ಗೌಡ ಬಿಚ್ಚಿಟ್ರು ಬಿಗ್ ಬಾಸ್ ಬಾಲಕನ ಮತ್ತೊಂದು ಮುಖ