
ರಾಜಮೌಳಿ ಹಾಗೂ ಮಹೇಶ್ ಬಾಬು ಸಿನಿಮಾ ಸಾಹಸಮಯ ಆಕ್ಷನ್ ಥ್ರಿಲ್ಲರ್ ಆಗಿದ್ದು ವಿಶ್ವದ ನಾನಾ ಪ್ರದೇಶದಲ್ಲಿ ಚಿತ್ರೀಕರಣ ಆಗಲಿದೆ. ಈಗಾಗಲೇ ರಾಜಮೌಳಿ ಹಾಗೂ ತಂಡ ಕೀನ್ಯಾ ದೇಶದಲ್ಲಿ ಸಿನಿಮಾದ ಹಲವು ಭಾಗಗಳ ಚಿತ್ರೀಕರಣ ಮಾಡಿದೆ. ಕೀನ್ಯಾದ ಶೂಟಿಂಗ್ ಶೆಡ್ಯೂಲ್ ಅಂತ್ಯವಾಗಲಿದ್ದು ಈ ಸಂದರ್ಭದಲ್ಲಿ ಕೀನ್ಯಾದ ವಿದೇಶ ವ್ಯವಹಾರ ಖಾತೆಯ ಕಾರ್ಯದರ್ಶಿ ಮುಸಾಲಿಯಾ ಮುದಾವಾಡಿ ಅವರನ್ನು ರಾಜಮೌಳಿ ಹಾಗೂ ಚಿತ್ರತಂಡದ ಇನ್ನೂ ಕೆಲವರು ಭೇಟಿ ಆಗಿದ್ದಾರೆ.
ಕೀನ್ಯಾದ ವಿದೇಶ ವ್ಯವಹಾರ ಖಾತೆ ಕಚೇರಿಗೆ ಭೇಟಿ ನೀಡಿದ್ದ ರಾಜಮೌಳಿ, ಕಾರ್ತಿಕೇಯ ಹಾಗೂ ಇನ್ನೂ ಕೆಲವರು ಕಾರ್ಯದರ್ಶಿ ಹಾಗೂ ಕಚೇರಿಯ ಇನ್ನೂ ಕೆಲವು ಅಧಿಕಾರಿಗಳನ್ನು ಭೇಟಿ ಮಾಡಿದ್ದು, ಹಲವು ಸಮಯ ಮಾತುಕತೆ ನಡೆಸಿದ್ದಾರೆ. ಕೀನ್ಯಾದಲ್ಲಿ ಚಿತ್ರೀಕರಣ ಮಾಡಿದ ಅನುಭವದ ಬಗ್ಗೆ ರಾಜಮೌಳಿ ಈ ಸಮಯದಲ್ಲಿ ಮಾತನಾಡಿದ್ದಾಗಿ ಮುಸಾಲಿಯಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ರಾಜಮೌಳಿಯವರ ಭೇಟಿ ಬಗ್ಗೆ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಕೀನ್ಯಾದ ಕಾರ್ಯದರ್ಶಿ, ‘ಚಿತ್ರರಂಗದಲ್ಲಿ ಎರಡು ದಶಕದ ಅನುಭವ ಹೊಂದಿರುವ ರಾಜಮೌಳಿ ತಮ್ಮ ಅತ್ಯುತ್ತಮ ಕತೆ ಹೇಳುವ ವಿಧಾನದಿಂದ ಜನಪ್ರಿಯರು. ಇದೀಗ ಅವರು ತಮ್ಮ 120 ಮಂದಿಯ ಸಿನಿಮಾ ತಂಡದ ಜೊತೆಗೆ ಪೂರ್ವ ಆಫ್ರಿಕಾದ ಹಲವು ಭಾಗಗಳಲ್ಲಿ ತಮ್ಮ ಹೊಸ ಸಿನಿಮಾದ ಚಿತ್ರೀಕರಣ ನಡೆಸಿದ್ದಾರೆ’ ಎಂದಿದ್ದಾರೆ.
Kenya this past fortnight became the stage for one of the world’s greatest filmmakers, @ssrajamouli, the visionary Indian director, screenwriter, and storyteller whose works have captured the imagination of audiences across continents.
Rajamouli, with a career spanning over two… pic.twitter.com/T1xCGVXQ64
— Musalia W Mudavadi (@MusaliaMudavadi) September 2, 2025
ಮುಂದುವರೆದು ‘ಏಷ್ಯಾನಲ್ಲಿಯೇ ಅತಿ ದೊಡ್ಡ ಸಿನಿಮಾ ಇದಾಗಿದ್ದು, ಕೀನ್ಯಾದ ಅತ್ಯುತ್ತಮ ಪ್ರದೇಶಗಳಾದ ಮಸಾಯಿ ಮಾರಾ, ನಯವಾಶಾ, ಸಂಬಾರು, ಅಂಬೋಸೇಲಿ ಇನ್ನೂ ಕೆಲವು ಭಾಗಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದ್ದು, ಈ ಸಿನಿಮಾ 120ಕ್ಕೂ ಹೆಚ್ಚು ದೇಶಗಳ 100 ಕೋಟಿಗೂ ಹೆಚ್ಚು ಜನರನ್ನು ತಲುಪಲಿದೆ’ ಎಂದು ಬರೆದುಕೊಂಡಿದ್ದಾರೆ.
‘ರಾಜಮೌಳಿ ಅಂಥಹಾ ನಿರ್ದೇಶಕರು ತಮ್ಮ ಸಿನಿಮಾ ಅನ್ನು ಕೀನ್ಯಾನಲ್ಲಿ ಚಿತ್ರೀಕರಣ ಮಾಡಲು ನಿರ್ಧರಿಸಿದ್ದು ಒಂದು ಐತಿಹಾಸಿಕ ನಿರ್ಣಯವಾಗಿದ್ದು, ಕೀನ್ಯಾ ದೇಶದ ಸುಂದರತೆಗೆ, ಸೌಹಾರ್ದತೆಗೆ, ಆತಿಥ್ಯಕ್ಕೆ ಇದು ಸಾಕ್ಷಿಯಾಗಿದೆ. ಹಾಗೂ ವಿಶ್ವ ಮಟ್ಟದಲ್ಲಿ ಕೀನ್ಯಾದ ಪ್ರಾಮುಖ್ಯತೆಯನ್ನು ಇದು ತೋರಿಸುತ್ತಿದೆ. ಕೀನ್ಯಾದಲ್ಲಿ ಶೂಟಿಂಗ್ ಮುಗಿಸಿ ಚಿತ್ರತಂಡ ಭಾರತಕ್ಕೆ ಹಿಂದಿರುಗುತ್ತಿದ್ದು, ‘ಎಸ್ಎಸ್ಎಂಬಿ29’ ಸಿನಿಮಾ ಮೂಲಕ ಕೀನ್ಯಾದ ಕತೆ ವಿಶ್ವಕ್ಕೆ ತಲುಪಲಿದೆ ಎಂಬ ವಿಷಯವಾಗಿ ಕೀನ್ಯಾ ಹೆಮ್ಮೆ ಪಡುತ್ತಿದೆ’ ಎಂದು ಬರೆದುಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:26 am, Wed, 3 September 25