‘ಜನ ನಾಯಗನ್’ ಬೆನ್ನಲ್ಲೇ ‘ವಾರಣಾಸಿ’ ಚಿತ್ರಕ್ಕೂ ಲೀಕ್ ಕಾಟ; ಪ್ರಮುಖ ದೃಶ್ಯವೇ ಸೋರಿಕೆ

‘ಜನ ನಾಯಗನ್’ ಬಳಿಕ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಚಿತ್ರಕ್ಕೂ ಲೀಕ್ ಸಮಸ್ಯೆ ಎದುರಾಗಿದೆ. ಚಿತ್ರೀಕರಣ ನಡೆಯುವಾಗ ಪ್ರಮುಖ ಆಕ್ಷನ್ ದೃಶ್ಯಗಳು ಹಾಗೂ ವಿದೇಶದಲ್ಲಿ ಶೂಟ್ ಮಾಡಿದ ದೃಶ್ಯಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಇದರಿಂದ ಚಿತ್ರದ ಕುರಿತ ಗೌಪ್ಯತೆ ಹಾಳಾಗಿದ್ದು, ಅಭಿಮಾನಿಗಳ ನಿರೀಕ್ಷೆ ಕಡಿಮೆಯಾಗಬಹುದೆಂದು ರಾಜಮೌಳಿ ಆತಂಕ ವ್ಯಕ್ತಪಡಿಸಿದ್ದಾರೆ.

‘ಜನ ನಾಯಗನ್’ ಬೆನ್ನಲ್ಲೇ ‘ವಾರಣಾಸಿ’ ಚಿತ್ರಕ್ಕೂ ಲೀಕ್ ಕಾಟ; ಪ್ರಮುಖ ದೃಶ್ಯವೇ ಸೋರಿಕೆ
ರಾಜಮೌಳಿ

Updated on: Apr 14, 2026 | 7:09 AM

‘ಜನ ನಾಯಗನ್’ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಈ ನಿರೀಕ್ಷೆಗಳನ್ನು ಕೆಲ ಕಾಣದ ಕೈಗಳು ಹಾಳು ಮಾಡಿವೆ. ಸಿನಿಮಾ ರಿಲೀಸ್​​ಗೂ ಮೊದಲೇ ಪ್ರಮುಖ ದೃಶ್ಯಗಳನ್ನು ಲೀಕ್ ಮಾಡಲಾಯಿತು. ಈಗ ಎಸ್​​ಎಸ್​ ರಾಜಮೌಳಿ (SS Rajamouli) ನಿರ್ದೇಶನದ ‘ವಾರಣಾಸಿ’ ಚಿತ್ರಕ್ಕೂ ಇದೇ ರೀತಿಯ ತೊಂದರೆ ಎದುರಾಗಿದೆ. ಸಿನಿಮಾದ ಕೆಲ ಆ್ಯಕ್ಷನ್ ದೃಶ್ಯಗಳನ್ನು ಸೋರಿಕೆ ಮಾಡಲಾಗಿದೆ. ಇದು ಚಿತ್ರತಂಡದ ಚಿಂತೆ ಹೆಚ್ಚಿಸಿದೆ.

ರಾಜಮೌಳಿ ಅವರು ತಮ್ಮ ಸಿನಿಮಾ ಬಗ್ಗೆ ಗೌಪ್ಯತೆ ಕಾಪಾಡಿಕೊಳ್ಳಲು ಬಯಸುತ್ತಾರೆ. ಯಾವುದೇ ಘೋಷಣೆ ಇದ್ದರೂ ದೊಡ್ಡ ಮಟ್ಟದಲ್ಲಿ ಮಾಡಲು ಅವರು ಬಯಸುತ್ತಾರೆ. ಈಗ ಈ ಎಲ್ಲಾ ಎಗ್ಸೈಟ್​​ಮೆಂಟ್​​ಗಳನ್ನು ಹಾಳು ಮಾಡುವ ಕೆಲಸ ಆಗುತ್ತಿದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸಿನಿಮಾದ ಸೆಟ್ ಹಾಕಿ ಶೂಟ್ ಮಾಡುತ್ತಿದ್ದರೂ ಕೆಲವರು ಪ್ರಮುಖ ದೃಶ್ಯಗಳನ್ನು ಲೀಕ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಸಿನಿಮಾದ ಆ್ಯಕ್ಷನ್ ದೃಶ್ಯ ಶೂಟ್ ಮಾಡಲಾಗಿದೆ. ಅವುಗಳನ್ನು ಸೋರಿಕೆ ಮಾಡಲಾಗಿದೆ. ಈ ಮೊದಲು ವಿದೇಶದಲ್ಲಿ ಶೂಟ್ ಮಾಡಿದ ದೃಶ್ಯಗಳನ್ನು ಕೂಡ ಲೀಕ್ ಮಾಡಲಾಗಿತ್ತು.

ದೊಡ್ಡ ಸಿನಿಮಾಗಳ ಬಗ್ಗೆ ಎಲ್ಲರೂ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳುತ್ತಾರೆ. ಹೀಗಾಗಿ, ಈ ರೀತಿಯ ದೃಶ್ಯಗಳನ್ನು ಲೀಕ್ ಮಾಡಿದರೆ ಆ ಪೇಜ್​​ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂಬಾಲಕರು ಸಿಗುತ್ತಾರೆ. ಹೀಗಾಗಿ ಆ ರೀತಿ ಮಾಡಲಾಗಿದೆ ಎನ್ನಲಾಗಿದೆ.

ರಾಜಮೌಳಿ ಸಿನಿಮಾ ಆಲೋಚನೆಗಳು ಬೇರೆಯದೇ ರೀತಿ ಇರುತ್ತವೆ. ಸಾಮಾನ್ಯ ದೃಶ್ಯಗಳನ್ನು ವಿಎಫ್​ಎಕ್ಸ್ ಬಳಸಿ ಅದ್ದೂರಿಯಾಗಿ ಕಾಣುವಂತೆ ಮಾಡುತ್ತಾರೆ. ಹೀಗಾಗಿ, ಲೀಕ್ ಆಗುವ ದೃಶ್ಯಗಳನ್ನು ನೋಡಿದರೂ ಏನೂ ವಿಶೇಷ ಎನಿಸುವುದಿಲ್ಲ. ಸಿನಿಮಾ ಮೇಲಿನ ನಿರೀಕ್ಷೆ ಇದರಿಂದ ಕಡಿಮೆ ಆಗುವ ಭಯ ರಾಜಮೌಳಿ ಅವರನ್ನು ಬಹುವಾಗಿ ಕಾಡುತ್ತಿದೆ.

ಇದನ್ನೂ ಓದಿ: ಜೂ ಎನ್​​ಟಿಆರ್ ಋಣ ತೀರಿಸಲಿರುವ ರಾಜಮೌಳಿ, ‘ವಾರಣಾಸಿ’ಯಲ್ಲಿ ಸರ್ಪ್ರೈಸ್

‘ವಾರಣಾಸಿ’ ಸಿನಿಮಾಗೆ ರಾಜಮೌಳಿ ನಿರ್ದೇಶನ ಇದೆ. ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಮೊದಲಾದವರು ನಟಿಸಿದ್ದಾರೆ. ಮುಂದಿನ ವರ್ಷ ಏಪ್ರಿಲ್​​ನಲ್ಲಿ ಚಿತ್ರ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us