AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಮಲ್-ರಜನಿ ಸಿನಿಮಾ ನಿಂತು ಹೋಯ್ತೆ? ಚಿತ್ರೀಕರಣ ತಡವಾಗುತ್ತಿರುವುದೇಕೆ?

ತಮಿಳು ಚಿತ್ರರಂಗ ಈ ಸೂಪರ್ ಸ್ಟಾರ್​ಗಳಾದ ರಜನೀಕಾಂತ್-ಕಮಲ್ ಹಾಸನ್ ಒಟ್ಟಿಗೆ ನಟಿಸಿ ದಶಕಗಳೇ ಕಳೆದಿವೆ. ಇಬ್ಬರೂ ಒಟ್ಟಿಗೆ ನಟಿಸಬೇಕೆಂಬುದು ಸಿನಿಮಾ ಪ್ರೇಮಿಗಳ ಬಹು ವರ್ಷದ ಬೇಡಿಕೆ ಆಗಿತ್ತು. ಇದೀಗ ಆ ಬೇಡಿಕೆ ಈಡೇರುತ್ತಿದೆ. ಕೆಲ ತಿಂಗಳ ಹಿಂದೆ ರಜನಿ ಮತ್ತು ಕಮಲ್ ಅವರು ಒಟ್ಟಿಗೆ ನಟಿಸುತ್ತಿರುವ ಸಿನಿಮಾದ ಬಗ್ಗೆ ಘೋಷಣೆ ಆಗಿತ್ತು. ಸಿನಿಮಾಕ್ಕಾಗಿ ಒಂದು ಕಿರು ಟೀಸರ್ ಅನ್ನು ಸಹ ಬಿಡುಗಡೆ ಮಾಡಲಾಗಿತ್ತು. ಆದರೆ ಅದಾದ ಮೇಲೆ ಸಿನಿಮಾದ ಅಪ್​​ಡೇಟ್ ಏನೂ ಹೊರಗೆ ಬಂದಿರಲಿಲ್ಲ.

ಕಮಲ್-ರಜನಿ ಸಿನಿಮಾ ನಿಂತು ಹೋಯ್ತೆ? ಚಿತ್ರೀಕರಣ ತಡವಾಗುತ್ತಿರುವುದೇಕೆ?
Kamal Rajini
ಮಂಜುನಾಥ ಸಿ.
|

Updated on: Oct 29, 2026 | 7:02 PM

Share

ಮುಖ್ಯಾಂಶಗಳು

  • ರಜನೀಕಾಂತ್-ಕಮಲ್ ಹಾಸನ್ ಒಟ್ಟಿಗೆ ನಟಿಸಲಿರುವ ಸಿನಿಮಾ
  • ಈಗಾಗಲೇ ಸಿನಿಮಾದ ಅನೌನ್ಸ್​​ಮೆಂಟ್ ಟೀಸರ್ ಬಿಡುಗಡೆ ಆಗಿದೆ
  • ಸಿನಿಮಾದ ಚಿತ್ರೀಕರಣ ಮುಂದಿನ ವರ್ಷ ಶುರುವಾಗಲಿದೆ

ರಜನೀಕಾಂತ್ ಮತ್ತು ಕಮಲ್ ಹಾಸನ್ ಭಾರತ ಚಿತ್ರರಂಗದ ಸೂಪರ್ ಸ್ಟಾರ್ ನಟರು. ಇಬ್ಬರಿಗೂ ಕೋಟ್ಯಂತರ ಅಭಿಮಾನಿಗಳಿದ್ದಾರೆ. ತಮಿಳು ಚಿತ್ರರಂಗ ಈ ಸೂಪರ್ ಸ್ಟಾರ್​ಗಳು ಒಟ್ಟಿಗೆ ನಟಿಸಿ ದಶಕಗಳೇ ಕಳೆದಿವೆ. ಇಬ್ಬರೂ ಒಟ್ಟಿಗೆ ನಟಿಸಬೇಕೆಂಬುದು ಸಿನಿಮಾ ಪ್ರೇಮಿಗಳ ಬಹು ವರ್ಷದ ಬೇಡಿಕೆ ಆಗಿತ್ತು. ಇದೀಗ ಆ ಬೇಡಿಕೆ ಈಡೇರುತ್ತಿದೆ. ಕೆಲ ತಿಂಗಳ ಹಿಂದೆ ರಜನಿ ಮತ್ತು ಕಮಲ್ ಅವರು ಒಟ್ಟಿಗೆ ನಟಿಸುತ್ತಿರುವ ಸಿನಿಮಾದ ಬಗ್ಗೆ ಘೋಷಣೆ ಆಗಿತ್ತು. ಸಿನಿಮಾಕ್ಕಾಗಿ ಒಂದು ಕಿರು ಟೀಸರ್ ಅನ್ನು ಸಹ ಬಿಡುಗಡೆ ಮಾಡಲಾಗಿತ್ತು. ಆದರೆ ಅದಾದ ಮೇಲೆ ಸಿನಿಮಾದ ಅಪ್​​ಡೇಟ್ ಏನೂ ಹೊರಗೆ ಬಂದಿರಲಿಲ್ಲ.

ರಜನಿ ಮತ್ತು ಕಮಲ್, ನಿರ್ದೇಶಕ ನೆಲ್ಸನ್ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್ ಸಹ ಒಟ್ಟಿಗೆ ಕಾರಿನಲ್ಲಿ ಕೂತು ಹೋಗುತ್ತಿರುವ ದೃಶ್ಯವಿರುವ ಟೀಸರ್ ಒಂದನ್ನು ಬಿಡುಗಡೆ ಮಾಡಲಾಗಿತ್ತು. ಇದು ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಮೂಡಿಸಿತ್ತು. ಸಿನಿಮಾ ಅನ್ನು ನೆಲ್ಸನ್ ನಿರ್ದೇಶಿಸಲಿದ್ದಾರೆ ಎಂದು ಸಹ ಘೋಷಣೆ ಆಗಿತ್ತು. ಆದರೆ ಅದಾದ ಬಳಿಕ ಸಿನಿಮಾದ ಅಪ್​​ಡೇಟ್ ಹೊರಬಿದ್ದಿರಲಿಲ್ಲ. ಕೆಲವೆಡೆಯಂತೂ ಸಿನಿಮಾ ನಿಂತು ಹೋಗಿದೆ ಎಂಬ ಮಾತುಗಳು ಸಹ ಕೇಳಿ ಬಂದಿದ್ದವು. ಆದರೆ ಈಗ ಹೊರಬಿದ್ದಿರುವ ಸುದ್ದಿಯ ಪ್ರಕಾರ, ಸಿನಿಮಾದ ಪ್ರೀ ಪ್ರೊಡಕ್ಷನ್ ಆರಂಭ ಮಾಡಲಾಗಿದೆಯಂತೆ.

ನೆಲ್ಸನ್ ಅವರು ಚಿತ್ರಕತೆಯನ್ನು ಸಿದ್ಧಪಡಿಸಿಕೊಂಡಿದ್ದು, ರಜನಿ ಮತ್ತು ಕಮಲ್ ಇಬ್ಬರೂ ಸಹ ಚಿತ್ರಕತೆಯನ್ನು ಅಂತಿಮಗೊಳಿಸಿದ್ದು, ಸಿನಿಮಾದ ಚಿತ್ರೀಕರಣ ಮುಂದಿನ ವರ್ಷ ಮೇ ತಿಂಗಳಲ್ಲಿ ಆರಂಭವಾಗಲಿದೆಯಂತೆ. ಸದ್ಯಕ್ಕೆ ರಜನೀಕಾಂತ್, ‘ಧರ್ಮನ್’ ಹೆಸರಿನ ಸಿನಿಮಾನಲ್ಲಿ ನಟನೆ ಮಾಡುತ್ತಿದ್ದಾರೆ. ಆ ಸಿನಿಮಾಕ್ಕೆ ಕಮಲ್ ಹಾಸನ್ ಅವರೇ ನಿರ್ಮಾಪಕ. ನಿರ್ದೇಶನ ಮಾಡುತ್ತಿರುವುದು ಅಶ್ವತ್ಥ್ ನಾರಾಯಣ್. ಆ ಸಿನಿಮಾ ಬಿಡುಗಡೆ ಆದ ಕೂಡಲೇ ರಜನಿ ಮತ್ತು ಕಮಲ್ ಅವರ ಸಿನಿಮಾದ ಚಿತ್ರೀಕರಣ ಪ್ರಾರಂಭ ಆಗಲಿದೆಯಂತೆ.

ಇದನ್ನೂ ಓದಿ:ರಜನೀಕಾಂತ್ ಬಳಿಕ ಚಿರಂಜೀವಿಗೆ ಸಿನಿಮಾ ನಿರ್ದೇಶಿಸಲಿರುವ ಕಾರ್ತಿಕ್ ಸುಬ್ಬರಾಜು

ರಜನೀಕಾಂತ್ ಮತ್ತು ಕಮಲ್ ಹಾಸನ್ ಅವರುಗಳು ದಶಕಗಳ ಹಿಂದೆ ಕೆಲ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. 1985 ರಲ್ಲಿ ಬಿಡುಗಡೆ ಆಗಿದ್ದ ‘ಗಿರ್ಫ್ತಾರ್’ ಸಿನಿಮಾನಲ್ಲಿ ರಜನೀಕಾಂತ್ ಮತ್ತು ಕಮಲ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆ ಸಿನಿಮಾನಲ್ಲಿ ಅಮಿತಾಬ್ ಬಚ್ಚನ್ ಸಹ ಇದ್ದರು. ಅದಾದ ಬಳಿಕ ಇಬ್ಬರೂ ಒಟ್ಟಿಗೆ ತೆರೆಯ ಮೇಲೆ ಕಾಣಿಸಿಕೊಂಡಿದ್ದಿಲ್ಲ. ಈಗ ನಾಲ್ಕು ದಶಕಗಳ ಬಳಿಕ ಇಬ್ಬರೂ ಒಟ್ಟಿಗೆ ನಟನೆ ಮಾಡಲಿದ್ದಾರೆ. ರಜನೀಕಾಂತ್ ನಾಯಕರಾಗಿ ನಟಿಸುತ್ತಿರುವ ‘ಧರ್ಮನ್’ ಸಿನಿಮಾನಲ್ಲೂ ಸಹ ಕಮಲ್ ಹಾಸನ್ ಅವರ ಅತಿಥಿ ಪಾತ್ರ ಇರಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ
ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ
ಹಾಲು ಬೆನ್ನಲ್ಲೇ ಬಸ್ ಟಿಕೆಟ್ ದರ ಹೆಚ್ಚಳ:ಬಿಗ್ ಅಪ್ಡೇಟ್ ನೀಡಿದ ಸಚಿವ
ಹಾಲು ಬೆನ್ನಲ್ಲೇ ಬಸ್ ಟಿಕೆಟ್ ದರ ಹೆಚ್ಚಳ:ಬಿಗ್ ಅಪ್ಡೇಟ್ ನೀಡಿದ ಸಚಿವ
ಜೈಲಿನಿಂದ ಕೊಟ್ಟ ಸಂದೇಶಕ್ಕೆ ತಲೆ ಕೆಡಿಸಿಕೊಳ್ಳಬೇಕಿಲ್ಲ: ಧನ್ವೀರ್ ಲಾಯರ್
ಜೈಲಿನಿಂದ ಕೊಟ್ಟ ಸಂದೇಶಕ್ಕೆ ತಲೆ ಕೆಡಿಸಿಕೊಳ್ಳಬೇಕಿಲ್ಲ: ಧನ್ವೀರ್ ಲಾಯರ್
ಸಿದ್ದರಾಮಯ್ಯ ಈಸ್ ಬ್ಯಾಕ್: ಅಹಿಂದ ಹಳೆ ಅಸ್ತ್ರಕ್ಕೆ ಸಾಣೆ ಹಿಡಿಯಲು ಸಿದ್ದತೆ
ಸಿದ್ದರಾಮಯ್ಯ ಈಸ್ ಬ್ಯಾಕ್: ಅಹಿಂದ ಹಳೆ ಅಸ್ತ್ರಕ್ಕೆ ಸಾಣೆ ಹಿಡಿಯಲು ಸಿದ್ದತೆ
‘ದರ್ಶನ್​​ ಅನ್ನು ಹೊರಗೆ ತರಲು ವಿಜಯಲಕ್ಷ್ಮಿ ಬಹಳ ಕಷ್ಟಪಡುತ್ತಿದ್ದಾರೆ’
‘ದರ್ಶನ್​​ ಅನ್ನು ಹೊರಗೆ ತರಲು ವಿಜಯಲಕ್ಷ್ಮಿ ಬಹಳ ಕಷ್ಟಪಡುತ್ತಿದ್ದಾರೆ’
10 ಕೋಟಿ ರೂಪಾಯಿ ವಿವಾದ; ಎಲ್ಲಾ ತನಿಖೆ ಎದುರಿಸಲು ಧನ್ವೀರ್ ರೆಡಿ ಎಂದ ಲಾಯರ್
10 ಕೋಟಿ ರೂಪಾಯಿ ವಿವಾದ; ಎಲ್ಲಾ ತನಿಖೆ ಎದುರಿಸಲು ಧನ್ವೀರ್ ರೆಡಿ ಎಂದ ಲಾಯರ್
ಹಾಸನಾಂಬ ದರ್ಶನೋತ್ಸವ: ವರ್ಷದ ಬಳಿಕ ತೆರೆದ ದೇಗುಲದ ಗರ್ಭಗುಡಿ
ಹಾಸನಾಂಬ ದರ್ಶನೋತ್ಸವ: ವರ್ಷದ ಬಳಿಕ ತೆರೆದ ದೇಗುಲದ ಗರ್ಭಗುಡಿ
ಸ್ಟಿಂಗ್ ಕೇಸ್: ಕೃಪಾ‌ ಆಳ್ವಾ ಬಂಧನ ಭೀತಿಯಿಂದ ವಿದೇಶಕ್ಕೆ ತೆರಳಿರುವ ಶಂಕೆ
ಸ್ಟಿಂಗ್ ಕೇಸ್: ಕೃಪಾ‌ ಆಳ್ವಾ ಬಂಧನ ಭೀತಿಯಿಂದ ವಿದೇಶಕ್ಕೆ ತೆರಳಿರುವ ಶಂಕೆ
ವೈರಲ್ ಆಗಿರುವ ಧನ್ವೀರ್ ಗೌಡ ಆಡಿಯೋಗಳು ಫೇಕ್: ವಕೀಲರ ಆರೋಪ
ವೈರಲ್ ಆಗಿರುವ ಧನ್ವೀರ್ ಗೌಡ ಆಡಿಯೋಗಳು ಫೇಕ್: ವಕೀಲರ ಆರೋಪ
ಹಾಸನಾಂಬೆ ದೇಗುಲಕ್ಕೆ ಕೋಟಿ ಕೋಟಿ ಆದಾಯ
ಹಾಸನಾಂಬೆ ದೇಗುಲಕ್ಕೆ ಕೋಟಿ ಕೋಟಿ ಆದಾಯ