ಸಿಎಂ ಅನ್ನೇ ರಸ್ತೆಯಲ್ಲಿ ನಿಲ್ಲಿಸಿದ್ದ ರಜನೀಕಾಂತ್: ಯಾವ ಸಿನಿಮಾ ಸೀನ್​​ಗೂ ಕಮ್ಮಿ ಇಲ್ಲ

Rajinikanth movie: ರಜನೀಕಾಂತ್ ಭಾರತದ ಟಾಪ್ ಸೂಪರ್ ಸ್ಟಾರ್. ಸಿನಿಮಾಗಳಲ್ಲಿ ಸಖತ್ ಮಾಸ್ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾರೆ. ಈಗ ರಜನೀಕಾಂತ್ ರಾಜಕೀಯದಿಂದ ದೂರ ಉಳಿದಿದ್ದಾರೆ. 90ರ ದಶಕದಲ್ಲಿ ರಜನೀಕಾಂತ್ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಅದರಲ್ಲೂ ಜಯಲಲಿತಾ ವಿರುದ್ಧ ಸತತ ಪ್ರಚಾರಗಳನ್ನು ಮಾಡುತ್ತಿದ್ದರು. ಅದಕ್ಕೆ ಕಾರಣವೂ ಇತ್ತು. ಒಮ್ಮೆಯಂತೂ ಸಿಎಂ ಜಯಲಲಿತಾ ದಾರಿಯಲ್ಲಿ ನಿಲ್ಲುವಂತೆ ಮಾಡಿದ್ದರು.

ಸಿಎಂ ಅನ್ನೇ ರಸ್ತೆಯಲ್ಲಿ ನಿಲ್ಲಿಸಿದ್ದ ರಜನೀಕಾಂತ್: ಯಾವ ಸಿನಿಮಾ ಸೀನ್​​ಗೂ ಕಮ್ಮಿ ಇಲ್ಲ
Rajinikanth

Updated on: May 16, 2026 | 5:28 PM

ರಜನೀಕಾಂತ್ (Rajinikanth) ಭಾರತದ ಟಾಪ್ ಸೂಪರ್ ಸ್ಟಾರ್. ಸಿನಿಮಾಗಳಲ್ಲಿ ಸಖತ್ ಮಾಸ್ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾರೆ. ಈಗ ರಜನೀಕಾಂತ್ ರಾಜಕೀಯದಿಂದ ದೂರ ಉಳಿದಿದ್ದಾರೆ. 90ರ ದಶಕದಲ್ಲಿ ರಜನೀಕಾಂತ್ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಅದರಲ್ಲೂ ಜಯಲಲಿತಾ ವಿರುದ್ಧ ಸತತ ಪ್ರಚಾರಗಳನ್ನು ಮಾಡುತ್ತಿದ್ದರು. ಅದಕ್ಕೆ ಕಾರಣವೂ ಇತ್ತು. ಒಮ್ಮೆಯಂತೂ ಸಿಎಂ ಜಯಲಲಿತಾ ದಾರಿಯಲ್ಲಿ ನಿಲ್ಲುವಂತೆ ಮಾಡಿದ್ದರು.

1991 ರಲ್ಲಿ ಜಯಲಲಿತಾ ಮೊದಲ ಬಾರಿಗೆ ಸಿಎಂ ಆಗಿದ್ದರು. ಅವರು ಬರುವ ದಾರಿಯಲ್ಲಿ ಪೊಲೀಸರು ಬ್ಯಾರಿಕೇಡ್​​ಗಳನ್ನು ಹಾಕಿ ಇತರೆ ಗಾಡಿಗಳನ್ನೆಲ್ಲ ರಸ್ತೆಯಲ್ಲಿ ಅಡ್ಡಗಟ್ಟಿದ್ದರು, ಅದರಲ್ಲಿ ರಜನೀಕಾಂತ್ ಅವರ ಕಾರು ಸಹ ಇತ್ತು. ನಟ ರಜನೀಕಾಂತ್ ಪೊಲೀಸರನ್ನು ತಮ್ಮ ಕಾರು ಬಿಡುವಂತೆ ಕೇಳಿದರು ಆದರೆ ಪೊಲೀಸ್, ರಜನೀಕಾಂತ್​​ರ ಕಾರನ್ನು ಬಿಡಲಿಲ್ಲ ಬದಲಿಗೆ ಅರ್ಧ ಇಲ್ಲೇ ಕಾಯಬೇಕು ಎಂದರಂತೆ.

ಇದು ರಜನೀಕಾಂತ್​​ಗೆ ತೀವ್ರ ಸಿಟ್ಟು ತರಿಸಿತ್ತು. ಕೂಡಲೇ ರಜನೀಕಾಂತ್ ಕಾರಿನಿಂದ ಇಳಿದು ಪಕ್ಕದಲ್ಲೇ ಇದ್ದ ಸಣ್ಣ ಗೂಡಂಗಡಿ ಬಳಿ ತೆರಳಿ ಒಂದು 555 ಸಿಗರೇಟು ಖರೀದಿಸಿ ಸೇದುತ್ತಾ ನಿಂತರಂತೆ. ರಜನೀಕಾಂತ್ ಅವರನ್ನು ರಸ್ತೆಯಲ್ಲಿ ನೋಡಿದ ಜನ ಕೂಡಲೇ ಅವರ ಸುತ್ತ ನೆರೆದರು. ನೋಡ ನೋಡುತ್ತಲೇ ನೂರಾರು ಜನ ಆಗಿ ಬಿಟ್ಟರು. ಅದೇ ಸಮಯದಲ್ಲಿ ಜಯಲಲಿತಾ ಕಾರು ಸಹ ಬರುತ್ತಿತ್ತು. ಜನ ಸಹ ಬಹಳ ಹೆಚ್ಚಿದ್ದರು, ಹಾಗಾಗಿ ಪೊಲೀಸರು ಜಯಲಲಿತಾ ಕಾರನ್ನು ತಡೆದು, ಮೊದಲು ರಜಿನೀಕಾಂತ್ ಅವರನ್ನು ಅಲ್ಲಿಂದ ಕಳಿಸಿದರಂತೆ.

ಇದನ್ನೂ ಓದಿ:ರಜನೀಕಾಂತ್ ಜೊತೆ ನಟಿಸಿದ ಅನುಭವ ಹಂಚಿಕೊಂಡ ನಟಿ ಮೇಘನಾ ರಾಜ್

ಆದರೆ ಈ ಘಟನೆ ರಜನೀಕಾಂತ್ ಮತ್ತು ಜಯಲಲಿತಾ ಮಧ್ಯೆ ತೀವ್ರ ದ್ವೇಷ ಮೂಡಿಸಿತ್ತು. 1996ರ ಚುನಾವಣೆ ಸಂದರ್ಭ ನಟ ರಜನೀಕಾಂತ್, ಜಯಲಲಿತಾ ವಿರುದ್ಧ ತೀವ್ರ ಪ್ರಚಾರ ಮಾಡಿದರು. ಆ ಚುನಾವಣೆಯಲ್ಲಿ ಜಯಲಲಿತಾ ಪಕ್ಷ ಗೆದ್ದಿದ್ದು ಕೇವಲ ನಾಲ್ಕು ಸೀಟು. 1991 ರ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳು ಸೇರಿ 235 ಸೀಟು ಗೆದ್ದಿದ್ದ ಪಕ್ಷ ಕೇವಲ ನಾಲ್ಕು ಸೀಟುಗಳಿಗೆ ಸೀಮಿತವಾಗಲು ರಜನೀಕಾಂತ್ ಕೊಟ್ಟ ಏಟು ಪ್ರಮುಖ ಕಾರಣವಾಗಿತ್ತು.

ರಜನೀಕಾಂತ್ ಅವರಿಗೂ ಖುದ್ದು ರಾಜಕೀಯ ಮಹಾತ್ವಾಕಾಂಕ್ಷೆ ಇತ್ತು. ಖುದ್ದು ರಜನೀಕಾಂತ್ ಅವರು ರಾಜಕೀಯ ಪಕ್ಷ ಸ್ಥಾಪಿಸಿದ್ದರು. ಆದರೆ ಆರೋಗ್ಯ ಸಮಸ್ಯೆಯ ಕಾರಣದಿಂದ ರಾಜಕೀಯಕ್ಕೆ ಬರುವ ನಿರ್ಧಾರದಿಂದ ಅವರು ಹಿಂದೆ ಸರಿದರು. ರಾಜಕೀಯ ಪಕ್ಷವನ್ನು ಸಾಮಾಜಿಕ ಸೇವಾ ಸಂಸ್ಥೆಯಾಗಿ ಬದಲಾಯಿಸಿಬಿಟ್ಟರು. ಒಂದೊಮ್ಮೆ ಅವರು ಈ ಬಾರಿ ಚುನಾವಣೆಯಲ್ಲಿ ನಿಂತಿದ್ದರೆ ವಿಜಯ್ ಅವರಿಗೆ ಅವಕಾಶವೇ ಇರಲಿಲ್ಲವೇನೋ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us