AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಜನೀಕಾಂತ್​ರ ಭೇಟಿಯಾಗಿ ಪತಿ ಚಿರು ಸರ್ಜಾರ ನೆನೆದ ಮೇಘನಾ

Meghana Raj-Chiru Sarja: 2020ರ ಜೂನ್ ತಿಂಗಳಲ್ಲಿ ಹಠಾತ್ತನೆ ಕಣ್ಣು ಮುಚ್ಚಿದರು ಚಿರಂಜೀವಿ ಸರ್ಜಾ. ಪತ್ನಿ ಮೇಘನಾ ಅವರನ್ನು ಅಗಲಿ, ಹುಟ್ಟಲಿದ್ದ ಮಗುವನ್ನು ಸಹ ಕಾಣದೆ ಹೊರಟು ಹೋದರು. ಆದರೆ ಮೇಘನಾ ಅವರು ಮಗನಿಗಾಗಿ ಬದುಕುತ್ತಿದ್ದಾರೆ. ಈಗಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ಅವರು ರಜನೀಕಾಂತ್ ಜೊತೆ ಸಿನಿಮಾನಲ್ಲಿ ನಟಿಸಿದ್ದಾರೆ. ರಜನೀಕಾಂತ್ ಜೊತೆಗಿನ ಚಿತ್ರಗಳನ್ನು ಹಂಚಿಕೊಂಡಿರುವ ಮೇಘನಾ, ಪತಿ ಚಿರು ಸರ್ಜಾ ಅವರನ್ನು ನೆನಪು ಮಾಡಿಕೊಂಡಿದ್ದಾರೆ.

ರಜನೀಕಾಂತ್​ರ ಭೇಟಿಯಾಗಿ ಪತಿ ಚಿರು ಸರ್ಜಾರ ನೆನೆದ ಮೇಘನಾ
Rajini Meghana
ಮಂಜುನಾಥ ಸಿ.
|

Updated on: May 02, 2026 | 8:02 PM

Share

ಚಿರಂಜೀವಿ ಸರ್ಜಾ (Chiranjeevi Sarja) ನಿಧನರಾಗಿ ಆರು ವರ್ಷಗಳಾಗುತ್ತಾ ಬಂತು. 2020ರ ಜೂನ್ ತಿಂಗಳಲ್ಲಿ ಹಠಾತ್ತನೆ ಕಣ್ಣು ಮುಚ್ಚಿದರು ಚಿರಂಜೀವಿ ಸರ್ಜಾ. ಪತ್ನಿ ಮೇಘನಾ ಅವರನ್ನು ಅಗಲಿ, ಹುಟ್ಟಲಿದ್ದ ಮಗುವನ್ನು ಸಹ ಕಾಣದೆ ಹೊರಟು ಹೋದರು. ಆದರೆ ಮೇಘನಾ ಅವರು ಮಗನಿಗಾಗಿ ಬದುಕುತ್ತಿದ್ದಾರೆ. ಈಗಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ಅವರು ರಜನೀಕಾಂತ್ ಜೊತೆ ಸಿನಿಮಾನಲ್ಲಿ ನಟಿಸಿದ್ದಾರೆ. ರಜನೀಕಾಂತ್ ಜೊತೆಗಿನ ಚಿತ್ರಗಳನ್ನು ಹಂಚಿಕೊಂಡಿರುವ ಮೇಘನಾ, ಪತಿ ಚಿರು ಸರ್ಜಾ ಅವರನ್ನು ನೆನಪು ಮಾಡಿಕೊಂಡಿದ್ದಾರೆ.

ಇಂದು (ಮೇ 2) ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಮದುವೆಯಾದ ದಿನ. ಅವರಿಬ್ಬರ ವಿವಾಹ ವಾರ್ಷಿಕೋತ್ಸವ. ಪತಿಯೊಟ್ಟಿಗೆ ಕೆಲವು ಹಳೆಯ ಚಿತ್ರಗಳನ್ನು ಹಂಚಿಕೊಂಡಿರುವ ಮೇಘನಾ ರಾಜ್, ‘ನಾವು ಒಟ್ಟಿಗೆ ಕಂಡಿದ್ದ ಕನಸೊಂದು ನನಸಾಗಿದೆ’ ಎಂದಿದ್ದಾರೆ. ಮಾತ್ರವಲ್ಲದೆ, ‘ಆ ಕನಸನ್ನು ನನಸು ಮಾಡಿರುವ ಶಕ್ತಿ ನೀನೇ’ ಎಂದಿದ್ದಾರೆ ಸಹ.

ಚಿರಂಜೀವಿ ಸರ್ಜಾ, ರಜನೀಕಾಂತ್​​ರ ಮಹಾನ್ ಅಭಿಮಾನಿ ಆಗಿದ್ದರು. ರಜನೀಕಾಂತ್ ಅವರೊಟ್ಟಿಗೆ ಚಿರು ಸರ್ಜಾ ಅವರ ಚಿತ್ರವನ್ನು ಹಂಚಿಕೊಂಡಿರುವ ನಟಿ ಮೇಘನಾ, ರಜನೀಕಾಂತ್ ಅವರ ಸಹಿ ಮಾಡಿಕೊಟ್ಟ ಪುಟ್ಟ ರಜನೀ ಚಿತ್ರದೊಟ್ಟಿಗೆ ಚಿರು ತೆಗೆದುಕೊಂಡಿದ್ದ ಸೆಲ್ಫಿಯನ್ನು ಸಹ ಹಂಚಿಕೊಂಡಿದ್ದಾರೆ. ಜೊತೆಗೆ ಈಗ ತಾವು ರಜನೀ ಜೊತೆ ನಟಿಸುವಾಗ ಅವರೊಟ್ಟಿಗೆ ಕೆಲವು ಚಿತ್ರಗಳನ್ನು ತೆಗೆದುಕೊಂಡಿದ್ದು ಅವರನ್ನೂ ಸಹ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ರಜನೀಕಾಂತ್ ಅವರು ಚಿರು ಸರ್ಜಾ-ಮೇಘನಾರ ಪುತ್ರನನ್ನು ಮುದ್ದಿಸುತ್ತಿರುವ ಚಿತ್ರವನ್ನು ಸಹ ಮೇಘನಾ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಚಿರಂಜೀವಿ ಸರ್ಜಾ ಪುಣ್ಯತಿಥಿ: ಪತಿ ಅಗಲಿಕೆ ಬಳಿಕ ಮೇಘನಾ ರಾಜ್ ವೈಯಕ್ತಿಕ ಜೀವನದ ಬಗ್ಗೆ ಕೇಳಿ ಬಂದಿತ್ತು ದೊಡ್ಡ ವದಂತಿ

ಚಿರು ಮತ್ತು ಮೇಘನಾ ಅವರಿಗೆ ರಜನೀಕಾಂತ್ ಅವರೊಟ್ಟಿಗೆ ನಟಿಸುವ ಆಸೆ ಇತ್ತಂತೆ. ಇದೀಗ ಮೇಘನಾ ರಾಜ್ ಅವರು ರಜನೀಕಾಂತ್ ಅವರೊಟ್ಟಿಗೆ ನಟಿಸಿದ್ದಾರೆ. ರಜನೀಕಾಂತ್ ಅವರ ಹೊಸ ಸಿನಿಮಾ ‘ಜೈಲರ್ 2’ನಲ್ಲಿ ಮೇಘನಾ ರಾಜ್ ಅವರಿಗೆ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಅನ್ನು ನೆಲ್ಸನ್ ನಿರ್ದೇಶಿಸಿದ್ದು, ಇದೇ ಸಿನಿಮಾನಲ್ಲಿ ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ಸಹ ನಟಿಸಿದ್ದಾರೆ.

ಮೇಘನಾ ರಾಜ್ ಅವರು ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಹಲವು ಸಿನಿಮಾಗಳಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಬುದ್ಧಿವಂತ 2’ ಸಿನಿಮಾ ಮುಗಿಸಿದ್ದಾರೆ. ‘ಒಟ್ಟಕುಂಬನ್’ ಹೆಸರಿನ ಮಲಯಾಳಂ ಸಿನಿಮಾನಲ್ಲಿ ಮೇಘನಾ ನಟಿಸಿದ್ದು, ಆ ಸಿನಿಮಾ ಇನ್ನಷ್ಟೆ ಬಿಡುಗಡೆ ಆಗಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮತಗಳಿರುವ ಬಾಕ್ಸ್​ ಸೀಲ್ ಓಪನ್ ಆರೋಪಕ್ಕೆ ಸ್ಪಷ್ಟನೆ ನೀಡಿದ ರಾಜೇಗೌಡ
ಮತಗಳಿರುವ ಬಾಕ್ಸ್​ ಸೀಲ್ ಓಪನ್ ಆರೋಪಕ್ಕೆ ಸ್ಪಷ್ಟನೆ ನೀಡಿದ ರಾಜೇಗೌಡ
ಶೃಂಗೇರಿ ಮರು ಮತ ಎಣಿಕೆಯಲ್ಲಿ ಗೆಲುವು: ಶಾಸಕ ಟಿಡಿ ರಾಜೇಗೌಡ ಹೇಳಿದ್ದಿಷ್ಟು
ಶೃಂಗೇರಿ ಮರು ಮತ ಎಣಿಕೆಯಲ್ಲಿ ಗೆಲುವು: ಶಾಸಕ ಟಿಡಿ ರಾಜೇಗೌಡ ಹೇಳಿದ್ದಿಷ್ಟು
ತಾಯಿನ ಕಂಡು ರಸ್ತೆಯಲ್ಲಿ ಓಡಿ ಬಂದ ಮಗುವಿನ ಮೇಲೆ ಹರಿದ ಲಾರಿ
ತಾಯಿನ ಕಂಡು ರಸ್ತೆಯಲ್ಲಿ ಓಡಿ ಬಂದ ಮಗುವಿನ ಮೇಲೆ ಹರಿದ ಲಾರಿ
ಗ್ಯಾಸ್ ದರ ಇಳಿಸುವಂತೆ ಬೆಂಗಳೂರು ಹೋಟೆಲ್ ಅಸೋಸಿಯೇಷನ್​ನಿಂದ ಮೋದಿಗೆ ಪತ್ರ
ಗ್ಯಾಸ್ ದರ ಇಳಿಸುವಂತೆ ಬೆಂಗಳೂರು ಹೋಟೆಲ್ ಅಸೋಸಿಯೇಷನ್​ನಿಂದ ಮೋದಿಗೆ ಪತ್ರ
ಹಾವಿನ ಜೊತೆ ಸಾಹಸ ಮಾಡಲು ಹೋದ ವ್ಯಕ್ತಿ ಸಾವು
ಹಾವಿನ ಜೊತೆ ಸಾಹಸ ಮಾಡಲು ಹೋದ ವ್ಯಕ್ತಿ ಸಾವು
ರಣಬಿಸಿಲಿಗೆ ಪ್ರಾಣಿ, ಪಕ್ಷಿ, ಮನುಷ್ಯರ ನರಳಾಟ; ರಾಯಚೂರಿನಲ್ಲಿ ಇಬ್ಬರ ಸಾವು
ರಣಬಿಸಿಲಿಗೆ ಪ್ರಾಣಿ, ಪಕ್ಷಿ, ಮನುಷ್ಯರ ನರಳಾಟ; ರಾಯಚೂರಿನಲ್ಲಿ ಇಬ್ಬರ ಸಾವು
ಗೃಹಿಣಿ ಅನುಮಾನಾಸ್ಪದ ಸಾವು: ವರದಕ್ಷಿಣೆ ಕಿರುಕುಳ ಕೊಟ್ಟು ಕೊಲೆ ಮಾಡಿದ ಆರೋಪ
ಗೃಹಿಣಿ ಅನುಮಾನಾಸ್ಪದ ಸಾವು: ವರದಕ್ಷಿಣೆ ಕಿರುಕುಳ ಕೊಟ್ಟು ಕೊಲೆ ಮಾಡಿದ ಆರೋಪ
ಪ್ರವಾಸಿಗರ ಕಣ್ಣಿಗೆ ಬಿದ್ದ ಅಪರೂಪದ 'ಬಿಳಿ ಜಿಂಕೆ'!
ಪ್ರವಾಸಿಗರ ಕಣ್ಣಿಗೆ ಬಿದ್ದ ಅಪರೂಪದ 'ಬಿಳಿ ಜಿಂಕೆ'!
ಪೆಟ್ರೋಲ್, ಡಿಸೇಲ್ ಏರಿಕೆ ಭೀತಿ! ಪೆಟ್ರೋಲ್ ಬಂಕ್​ಗಳಿಗೆ ಮುಗಿಬಿದ್ದ ಜನ
ಪೆಟ್ರೋಲ್, ಡಿಸೇಲ್ ಏರಿಕೆ ಭೀತಿ! ಪೆಟ್ರೋಲ್ ಬಂಕ್​ಗಳಿಗೆ ಮುಗಿಬಿದ್ದ ಜನ
ರೋಚಕ ಪಂದ್ಯದಲ್ಲಿ 2 ರನ್​ಗಳ ಜಯ ಸಾಧಿಸಿ ಫೈನಲ್​ಗೇರಿದ ಹೈದರಾಬಾದ್
ರೋಚಕ ಪಂದ್ಯದಲ್ಲಿ 2 ರನ್​ಗಳ ಜಯ ಸಾಧಿಸಿ ಫೈನಲ್​ಗೇರಿದ ಹೈದರಾಬಾದ್