ಉತ್ತರ ಭಾರತದ ಥಿಯೇಟರ್​ಗಳಲ್ಲಿ ರಾರಾಜಿಸಲು ಕಮಲ್-ರಜನಿ ಒಟಿಟಿ ಒಪ್ಪಂದ

ರಜನಿಕಾಂತ್ ನಟನೆಯ 'ಕೂಲಿ' ಮತ್ತು ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಚಿತ್ರಗಳು ಉತ್ತರ ಭಾರತದಲ್ಲಿ ಯಶಸ್ಸು ಕಾಣುವ ನಿರೀಕ್ಷೆ ಇದೆ. ಇದಕ್ಕಾಗಿ ಒಟಿಟಿ ಪ್ಲಾಟ್‌ಫಾರ್ಮ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಚಿತ್ರಗಳು ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುವ ಉದ್ದೇಶ ಚಿತ್ರ ತಂಡಗಳದ್ದು .

ಉತ್ತರ ಭಾರತದ ಥಿಯೇಟರ್​ಗಳಲ್ಲಿ ರಾರಾಜಿಸಲು ಕಮಲ್-ರಜನಿ ಒಟಿಟಿ ಒಪ್ಪಂದ
ಉತ್ತರ ಭಾರತದ ಥಿಯೇಟರ್​ಗಳಲ್ಲಿ ರಾರಾಜಿಸಲು ಕಮಲ್-ರಜನಿ ಒಟಿಟಿ ಒಪ್ಪಂದ

Updated on: May 10, 2025 | 2:50 PM

ತಮಿಳು ಚಿತ್ರರಂಗದಲ್ಲಿ ಈ ಬಾರಿ ಎರಡು ದೊಡ್ಡ ಸಿನಿಮಾಗಳು ಬರುತ್ತಿವೆ. ಅದುವೇ ರಜನಿಕಾಂತ್ ನಟನೆಯ ‘ಕೂಲಿ’ ಹಾಗೂ ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’  (Thug Life)ಚಿತ್ರಗಳು. ಈ ಸಿನಿಮಾಗಳ ಬಗ್ಗೆ ಎಲ್ಲರೂ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ಬಾಲಿವುಡ್​ನಲ್ಲಿ ಚೆನ್ನಾಗಿ ಪ್ರದರ್ಶನ ಕಾಣಬೇಕು ಎಂದು ಈ ಸಿನಿಮಾದ ನಿರ್ಮಾಪಕರು ಒಟಿಟಿ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಥಿಯೇಟರ್​ನಲ್ಲಿ ಸಿನಿಮಾ ಉತ್ತಮ ಪ್ರದರ್ಶನ ಕಾಣುವುದಕ್ಕೂ, ಒಟಿಟಿ ಜೊತೆ ಸಿನಿಮಾ ಒಪ್ಪಂದ ಮಾಡಿಕೊಳ್ಳುವುದಕ್ಕೂ ಏನು ಸಂಬಂಧ ಎನ್ನುವ ಪ್ರಶ್ನೆ ಮೂಡಬಹುದು. ಅದಕ್ಕೂ ಉತ್ತರ ಇದೆ.

ಲೋಕೇಶ್ ಕನಗರಾಜ್ ಅವರು ‘ಕೂಲಿ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ರಜನಿಕಾಂತ್ ಈ ಸಿನಿಮಾಗೆ ಹೀರೋ. ಇನ್ನು ಮಣಿರತ್ನಂ ಅವರು, ‘ಥಗ್ ಲೈಫ್​’ನ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗಳನ್ನು ಹಿಂದಿಯಲ್ಲಿ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ಪ್ಲ್ಯಾನ್ ನಡೆದಿದೆ. ಇದಕ್ಕೆ ಒಟಿಟಿಯವರ ಸಹಾಯವೂ ಅಗತ್ಯ ಎಂಬುದು ತಂಡದ ಆಲೋಚನೆ.

ರಿಲೀಸ್ ಆದ ಒಂದೇ ತಿಂಗಳಿಗೆ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆದ ಉದಾಹರಣೆ ಇದೆ. ಈ ರೀತಿ ಆದಾಗ ಉತ್ತರ ಭಾರತದವರು ಒಟಿಟಿಯಲ್ಲೇ ಸಿನಿಮಾ ನೋಡಿದರಾಯಿತು ಎಂದು ಸುಮ್ಮನಾಗುತ್ತಾರೆ. ರಜನಿಕಾಂತ್ ಹಾಗೂ ಕಮಲ್ ಹಾಸನ್​ಗೆ ಹಿಂದಿಯಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಈ ಕಾರಣಕ್ಕೆ ಎಂಟು ವಾರಗಳ ಕಾಲ ಸಿನಿಮಾನ ಒಟಿಟಿಯಲ್ಲಿ ಪ್ರಸಾರ ಮಾಡದಂತೆ ಒಪ್ಪಂದಕ್ಕೆ ಸಹಿ ಹಾಕಿಸಿಕೊಳ್ಳಲಾಗಿದೆ.

ಇದನ್ನೂ ಓದಿ
ರಾಧಿಕಾ ಪಂಡಿತ್ ಕೂದಲ ಮೇಲೆ ಯಶ್​ಗೆ ಇದೆ ವಿಶೇಷ ಪ್ರೀತಿ; ಇಲ್ಲಿದೆ ಸಾಕ್ಷಿ
ಪ್ರೀತಿಯಿಂದ ವಿಜ್ಜು ಎಂದು ಕರೆದು ಬರ್ತ್​ಡೇ ವಿಶ್ ತಿಳಿಸಿದ ರಶ್ಮಿಕಾ ಮಂದಣ್ಣ
‘ಪಾಕಿಗಳು ರಕ್ತಸಿಕ್ತ ಜಿರಳೆಗಳು, ಭೂಪಟದಿಂದಲೇ ಇಲ್ಲದಂತೆ ಮಾಡಬೇಕು’; ಕಂಗನಾ
ಪೊಲೀಸರಿಗೆ ಆವಾಜ್ ಹಾಕಿದ ‘ಜೈಲರ್’ ಖ್ಯಾತಿಯ ವಿನಾಯಕನ್; ಮತ್ತೆ ನಟನ ಕಿರಿಕ್

ಸಾಮಾನ್ಯವಾಗಿ ವಾರಗಳು ಹೆಚ್ಚುತ್ತಾ ಹೋದಂತೆ ಒಟಿಟಿಯಲ್ಲಿ ಸಿಗುವ ಹಣ ಕಡಿಮೆ ಆಗುತ್ತಾ ಹೋಗುತ್ತದೆ. ಆದರೆ, ಈ ಬಗ್ಗೆ ತಂಡ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಉತ್ತರ ಭಾರತದಲ್ಲಿ ಒಳ್ಳೆಯ ಬಿಸ್ನೆಸ್ ಮಾಡುವ ಆಲೋಚನೆಯಲ್ಲಿ ಇವರಿದ್ದಾರೆ.

ಇದನ್ನೂ ಓದಿ: 

ಜೂನ್ 5ರಂದು ‘ಥಗ್​ ಲೈಫ್’ ಸಿನಿಮಾ ರಿಲೀಸ್ ಆಗಲಿದೆ. ಈ ಸಿನಿಮಾಗಾಗಿ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನು, ಆಗಸ್ಟ್ 14ರಂದು ‘ಕೂಲಿ’ ಚಿತ್ರ ಬಿಡುಗಡೆ ಹೊಂದಲಿದೆ. ಎರಡೂ ಸಿನಿಮಾಗಳು ಉತ್ತರದಲ್ಲಿ ಉತ್ತಮ ಗೆಲುವು ಕಾಣುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.