ವೀರ ಸಾವರ್ಕರ್ ಜೀವನ ಆಧರಿಸಿ ಸಿನಿಮಾ ಘೋಷಿಸಿದ ರಾಮ್ ಚರಣ್; ಶುರುವಾಯ್ತು ಚರ್ಚೆ 

|

Updated on: May 29, 2023 | 11:04 AM

ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಜೀವನದ ಮೇಲೆ ಸಿನಿಮಾ ಬೆಳಕು ಚೆಲ್ಲಲಿದೆ. ನಿಖಿಲ್ ಸಿದ್ದಾರ್ಥ್ ಜೊತೆ ಅನುಪಮ್ ಖೇರ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವೀರ ಸಾವರ್ಕರ್ ಜೀವನ ಆಧರಿಸಿ ಸಿನಿಮಾ ಘೋಷಿಸಿದ ರಾಮ್ ಚರಣ್; ಶುರುವಾಯ್ತು ಚರ್ಚೆ 
ರಾಮ್ ಚರಣ್
Follow us on

ನಟ ರಾಮ್ ಚರಣ್ (Ram Charan) ಅವರು ಈಗ ನಟನೆಯ ಜೊತೆಗೆ ಸಿನಿಮಾ ನಿರ್ಮಾಣದ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಅವರು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ಮುಂದಾಗಿದ್ದಾರೆ. ವೀರ ಸಾವರ್ಕರ್ 140ನೇ ಜನ್ಮದಿನದ ಪ್ರಯುಕ್ತ ರಾಮ್ ಚರಣ್ ನಿರ್ಮಾಣದ ಹೊಸ ಸಿನಿಮಾ ಘೋಷಣೆ ಆಗಿದೆ. ‘ದಿ ಕಾಶ್ಮಿರ್ ಫೈಲ್ಸ್’ ನಿರ್ಮಾಪಕ ಅಭಿಷೇಕ್​ ಅಗರ್​ವಾಲ್ (Abhishek Agarwal)​ ನಿರ್ಮಾಣದಲ್ಲಿ ಜೊತೆಯಾಗಿದ್ದಾರೆ. ಈ ಚಿತ್ರಕ್ಕೆ ‘ದಿ ಇಂಡಿಯಾ ಹೌಸ್’ ಎಂದು ಶೀರ್ಷಿಕೆ ಇಡಲಾಗಿದೆ. ಈ ಚಿತ್ರಕ್ಕೆ ನಿಖಿಲ್ ಸಿದ್ದಾರ್ಥ್ ಹೀರೋ ಆಗಿದ್ದು, ವೀರ ಸಾವರ್ಕರ್ ಕುರಿತು ಈ ಸಿನಿಮಾ ಇರಲಿದೆ.

ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ವೀರ ಸಾವರ್ಕರ್ ಕೊಡುಗೆಯೂ ಇದೆ. ಅವರ ಹೋರಾಟಗಳ ಮೇಲೆ ಈ ಸಿನಿಮಾ ಬೆಳಕು ಚೆಲ್ಲಲಿದೆ. ನಿಖಿಲ್ ಸಿದ್ದಾರ್ಥ್ ಜೊತೆ ಅನುಪಮ್ ಖೇರ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಾವರ್ಕರ್ ಅವರು 1906-1910ರವರೆಗೆ ಲಂಡನ್​ನಲ್ಲಿರುವ ಇಂಡಿಯಾ ಹೌಸ್​ನಲ್ಲಿ ವಾಸವಾಗಿದ್ದರು. ಅಂದಿನ ಸಮಯದಲ್ಲಿ ಈ ಜಾಗ ಬಹಳ ಮಹತ್ವ ಪಡೆದುಕೊಂಡಿತ್ತು. ಬ್ರಿಟಿಷರ ವಿರುದ್ಧ ಹೋರಾಡಲು ಈ ಜಾಗದಲ್ಲಿ ತಂತ್ರಗಳನ್ನು ರೂಪಿಸಲಾಗುತ್ತಿತ್ತು. ಈ ಕಾರಣಕ್ಕೆ ಸಿನಿಮಾಗೆ ‘ದಿ ಇಂಡಿಯಾ ಹೌಸ್​’ ಎನ್ನುವ ಶೀರ್ಷಿಕೆ ಇಡಲಾಗಿದೆ. ಈಗ ರಾಮ್ ಚರಣ್ ಈ ಸಿನಿಮಾ ನಿರ್ಮಾಣ ಮಾಡುತ್ತಿರುವ ಬಗ್ಗೆ ಒಂದಷ್ಟು ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ.

ಅಭಿಷೇಕ್ ನಿರ್ಮಾಣದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ಬಿಜೆಪಿಗರ ಬೆಂಬಲ ಇತ್ತು ಅನ್ನೋದು ಒಂದಷ್ಟು ಮಂದಿಯ ಆರೋಪ. ಈಗ ‘ದಿ ಇಂಡಿಯಾ ಹೌಸ್’ ಚಿತ್ರಕ್ಕೂ ಇದೇ ರೀತಿಯ ಆರೋಪ ಕೇಳಿ ಬಂದಿದೆ. ಮುಂದಿನ ದಿನಗಳಲ್ಲಿ ಸಿನಿಮಾಗೆ ಮತ್ತಷ್ಟು ವಿರೋಧ ವ್ಯಕ್ತವಾದರೂ ಅಚ್ಚರಿ ಏನಿಲ್ಲ.

ಇದನ್ನೂ ಓದಿ: Ram Charan: ರಾಮ್​ ಚರಣ್​ ಜೊತೆ ಕೈ ಜೋಡಿಸಿದ ‘ದಿ ಕಾಶ್ಮೀರ್​ ಫೈಲ್ಸ್​’ ನಿರ್ಮಾಪಕ; ಇಲ್ಲಿದೆ ಹೊಸ ಸಮಾಚಾರ

ಅಭಿಷೇಕ್ ಅಗರ್​ವಾಲ್ ನಿರ್ಮಾಣದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ಆದರೆ, ಇದಕ್ಕೆಲ್ಲ ಅಭಿಷೇಕ್ ತಲೆಕೆಡಿಸಿಕೊಂಡಿಲ್ಲ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಕಮಾಯಿ ಮಾಡಿತು. ಸದಾ ವಿವಾದದಿಂದ ದೂರ ಉಳಿಯ ಬಯಸುವ ರಾಮ್ ಚರಣ್ ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ