Sign In

By signing in or creating an account, you agree with Associated Broadcasting Company's Terms & Conditions and Privacy Policy.

Rishab Shetty: ಹೊಸ ಸರ್ಕಾರದ ಎದುರು ಹೊಸ ಬೇಡಿಕೆ ಇಟ್ಟ ನಟ ರಿಷಬ್ ಶೆಟ್ಟಿ

ಬೆಂಗಳೂರಿನಲ್ಲಿ ನಡೆದ ಸುಶಾಸನ್ ಗರೀಬ್ ಕಲ್ಯಾಣ್ ರಾಷ್ಟ್ರೀಯ ಸಮಾವೇಶದಲ್ಲಿ ರಿಷಬ್ ಭಾಗಿ ಆಗಿದ್ದರು. ಈ ವೇಳೆ ಮಾತನಾಡಿದ ಅವರು, ಸರ್ಕಾರದ ಎದುರು ಬೇಡಿಕೆ ಒಂದನ್ನು ಇಟ್ಟಿದ್ದಾರೆ.

Rishab Shetty: ಹೊಸ ಸರ್ಕಾರದ ಎದುರು ಹೊಸ ಬೇಡಿಕೆ ಇಟ್ಟ ನಟ ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ
Follow us
ರಾಜೇಶ್ ದುಗ್ಗುಮನೆ
|

Updated on: May 29, 2023 | 12:04 PM

ಕಾಂತಾರ’ ಸಿನಿಮಾ (Kantara Movie) ತೆರೆಕಂಡ ಬಳಿಕ ರಿಷಬ್ ಶೆಟ್ಟಿ (Rishab Shetty) ಖ್ಯಾತಿ ಹೆಚ್ಚಿದೆ. ಅವರು ಸದ್ಯ ‘ಕಾಂತಾರ 2’ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಸ್ಕ್ರಿಪ್ಟ್​ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಈ ಮಧ್ಯೆ ಅನೇಕ ಕಾರ್ಯಕ್ರಮಗಳಲ್ಲಿ ಅವರು ಭಾಗಿ ಆಗುತ್ತಿದ್ದಾರೆ. ಈಗ ಅವರು ಹೊಸ ಸರ್ಕಾರದ ಎದುರು ಬೇಡಿಕೆ ಒಂದನ್ನು ಇಟ್ಟಿದ್ದಾರೆ. ಫಿಲ್ಮ್​ ಸಿಟಿ ಬೆಂಗಳೂರಿನಲ್ಲೇ ನಿರ್ಮಾಣ ಆಗಬೇಕು ಎಂದು ಅವರು ಕೋರಿದ್ದಾರೆ. ಅವರ ಕೋರಿಕೆಗೆ ಅನೇಕರು ಬೆಂಬಲ ಸೂಚಿಸಿದ್ದಾರೆ.

ಸ್ಯಾಂಡಲ್​ವುಡ್​ಗೆ ಒಂದು ಫಿಲ್ಮ್​ ಸಿಟಿ ಬೇಕು ಎಂಬುದು ಹಳೆಯ ಬೇಡಿಕೆ. ಈ ಕೋರಿಕೆ ಇಲ್ಲಿಯವರೆಗೂ ಈಡೇರಿಲ್ಲ. ಇದರ ಜೊತೆಗೆ ಈ ಫಿಲ್ಮ್​ ಸಿಟಿಯನ್ನು ಎಲ್ಲಿ ನಿರ್ಮಾಣ ಮಾಡಬೇಕು ಎನ್ನುವ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆದಿವೆ. ಕೆಲವರು ಬೆಂಗಳೂರಿನ ಹೆಸರನ್ನು ಸೂಚಿಸಿದರೆ, ಕೆಲವರು ಮೈಸೂರಿನ ಹೆಸರನ್ನು ಸೂಚಿಸಿದ್ದಾರೆ. ಈ ಫಿಲ್ಮ್​ ಸಿಟಿ ಬೆಂಗಳೂರಿನಲ್ಲೇ ನಿರ್ಮಾಣ ಆಗಬೇಕು ಎಂಬುದು ರಿಷಬ್ ಶೆಟ್ಟಿ ಒತ್ತಾಯ.

ಬೆಂಗಳೂರಿನಲ್ಲಿ ನಡೆದ ಸುಶಾಸನ್ ಗರೀಬ್ ಕಲ್ಯಾಣ್ ರಾಷ್ಟ್ರೀಯ ಸಮಾವೇಶದಲ್ಲಿ ರಿಷಬ್ ಭಾಗಿ ಆಗಿದ್ದರು. ಈ ವೇಳೆ ಮಾತನಾಡಿದ ಅವರು, ‘ಪ್ರೇಕ್ಷಕರನ್ನು ತಲುಪುವುದು ಒಂದು ಸವಾಲಾಗಿದೆ. ಸರ್ಕಾರದಿಂದ ನಮಗೆ ಸಾಕಷ್ಟು ಬೆಂಬಲ ಸಿಗುತ್ತಿದೆ. ಇದರ ಜೊತೆ ಬೆಂಗಳೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಆಗಬೇಕು ಎಂಬುದು ಸೇರಿ ಸರ್ಕಾರದ ಬಳಿ ಕೆಲವು ಮನವಿ ಇದೆ’ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

ಇದನ್ನೂ ಓದಿ: ಹೊಸ ಪ್ರಯತ್ನಕ್ಕೆ ಕೈ ಹಾಕಿದ ರಿಷಬ್ ಶೆಟ್ಟಿ; ಕನಸು ಹುಟ್ಟಿದ ಊರಿನ ಹೆಸರಿಟ್ಟ ನಟ

‘ಕಾಂತಾರ’ ಸಿನಿಮಾ 2022ರಲ್ಲಿ ರಿಲೀಸ್ ಆಗಿ ದೊಡ್ಡ ಮಟ್ಟದ ಯಶಸ್ಸು ಪಡೆಯಿತು. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತು. ಸಣ್ಣ ಬಜೆಟ್​ನಲ್ಲಿ ನಿರ್ಮಾಣ ಆದ ಈ ಸಿನಿಮಾ ಇಷ್ಟು ದೊಡ್ಡ ಮಟ್ಟದ ಗಳಿಕೆ ಮಾಡಿದ್ದರಿಂದ ಹೊಂಬಾಳೆ ಫಿಲ್ಮ್ಸ್​ಗೆ ಒಳ್ಳೆಯ ಲಾಭ ಆಗಿದೆ. ‘ಕಾಂತಾರ 2’ ಬಗ್ಗೆ ಸದ್ಯ ಸಾಕಷ್ಟು ನಿರೀಕ್ಷೆ ಇದೆ. ಮಳೆಗಾಲದಲ್ಲಿ ಸಿನಿಮಾ ಶೂಟಿಂಗ್ ಆರಂಭ ಆಗುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪ್ರತಿದಿನ ಮಾಧ್ಯಮಗಳೊಂದಿಗೆ ಮಾತಾಡುವ ರೇಣುಕಾಚಾರ್ಯಗೆ ವಿಷಯಗಳು ಸಿಗುತ್ತಿಲ್ಲ
ಪ್ರತಿದಿನ ಮಾಧ್ಯಮಗಳೊಂದಿಗೆ ಮಾತಾಡುವ ರೇಣುಕಾಚಾರ್ಯಗೆ ವಿಷಯಗಳು ಸಿಗುತ್ತಿಲ್ಲ
ಮಟ ಮಟ ಮಧ್ಯಾಹ್ನ ಫುಲ್ ಟೈಟ್​ ಆಗಿ ಬಂದು ಬಸ್ ಕೆಳಗೆ ಮಲಗಿದ ಕುಡುಕ!
ಮಟ ಮಟ ಮಧ್ಯಾಹ್ನ ಫುಲ್ ಟೈಟ್​ ಆಗಿ ಬಂದು ಬಸ್ ಕೆಳಗೆ ಮಲಗಿದ ಕುಡುಕ!
ಪೊಲೀಸರಿಂದ ಸೂಕ್ತ ತನಿಖೆ ಆಗುತ್ತಿಲ್ಲವೆಂದು ಅರೋಪಿಸಿದ ಸಂಬಂಧಿಕರು
ಪೊಲೀಸರಿಂದ ಸೂಕ್ತ ತನಿಖೆ ಆಗುತ್ತಿಲ್ಲವೆಂದು ಅರೋಪಿಸಿದ ಸಂಬಂಧಿಕರು
ಪ್ರದೀಪ್ ಮಾತುಗಳಿಗೆ ಸಭಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದದರು: ಮೋಹನ್
ಪ್ರದೀಪ್ ಮಾತುಗಳಿಗೆ ಸಭಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದದರು: ಮೋಹನ್
ಬದುಕುಳಿದು ಬಂದು ಅಪಘಾತದ ಭೀಕರತೆ ಬಿಚ್ಚಿಟ್ಟ ಪರಸಪ್ಪ
ಬದುಕುಳಿದು ಬಂದು ಅಪಘಾತದ ಭೀಕರತೆ ಬಿಚ್ಚಿಟ್ಟ ಪರಸಪ್ಪ
VIDEO: ರಾಕಿ ಭಾಯ್ ಸ್ಟೈಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ಗೆ ಕನ್ನಡಿಗನ ಎಂಟ್
VIDEO: ರಾಕಿ ಭಾಯ್ ಸ್ಟೈಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ಗೆ ಕನ್ನಡಿಗನ ಎಂಟ್
ಹತ್ತಿರದ ಸಂಬಂಧಿಯೊಬ್ಬರ ಸಾವಿನ ಕಾರಣ ಪರಮೇಶ್ವರ್ ಭಾಗಿಯಾಗಿರಲಿಲ್ಲ: ಪಾಟೀಲ್
ಹತ್ತಿರದ ಸಂಬಂಧಿಯೊಬ್ಬರ ಸಾವಿನ ಕಾರಣ ಪರಮೇಶ್ವರ್ ಭಾಗಿಯಾಗಿರಲಿಲ್ಲ: ಪಾಟೀಲ್
ಕಾರಿನ ಮೇಲೆ ಬಿದ್ದ ಲಾರಿ: ಭಯಾನಕ ಅಪಘಾತ ಡ್ರೋನ್ ಕ್ಯಾಮರಾದಲ್ಲಿ ಕಂಡಿದ್ದು
ಕಾರಿನ ಮೇಲೆ ಬಿದ್ದ ಲಾರಿ: ಭಯಾನಕ ಅಪಘಾತ ಡ್ರೋನ್ ಕ್ಯಾಮರಾದಲ್ಲಿ ಕಂಡಿದ್ದು
ಕಳ್ಳತನ ಮಾಡಿದ ಬಳಿಕ ತಮ್ಮ ಕಾರನ್ನೇ ಬೆಂಕಿಹಚ್ಚಿ ಸುಟ್ಟುಬಿಡುವ ಖದೀಮರು
ಕಳ್ಳತನ ಮಾಡಿದ ಬಳಿಕ ತಮ್ಮ ಕಾರನ್ನೇ ಬೆಂಕಿಹಚ್ಚಿ ಸುಟ್ಟುಬಿಡುವ ಖದೀಮರು
ದರ್ಶನ್ ನಟನೆಯ ‘ಡೆವಿಲ್’ ಚಿತ್ರಕ್ಕೆ ಮೈಸೂರಿನಲ್ಲಿ ಕೊನೆಯ ದಿನದ ಶೂಟಿಂಗ್
ದರ್ಶನ್ ನಟನೆಯ ‘ಡೆವಿಲ್’ ಚಿತ್ರಕ್ಕೆ ಮೈಸೂರಿನಲ್ಲಿ ಕೊನೆಯ ದಿನದ ಶೂಟಿಂಗ್