‘ಜೊತೆಗಿರದ ಜೀವ ಎಂದೆಂದಿಗೂ ಜೀವಂತ’; ಅಂಬರೀಷ್​​ ಜನ್ಮದಿನಕ್ಕೆ ಸುಮಲತಾ ಭಾವುಕ ಪೋಸ್ಟ್​

Sumalatha Ambareesh: ಅಂಬರೀಷ್​ ಅವರು ಮಾಡಿರುವ ಪಾತ್ರ ಹಾಕಿಕೊಟ್ಟ ಮಾರ್ಗ ಸದಾ ಜೀವಂತ. ಈ ವಿಶೇಷ ದಿನದಂದು ಅಂಬಿಯನ್ನು ಸುಮಲತಾ ನೆನಪಿಸಿಕೊಂಡಿದ್ದಾರೆ.

‘ಜೊತೆಗಿರದ ಜೀವ ಎಂದೆಂದಿಗೂ ಜೀವಂತ’; ಅಂಬರೀಷ್​​ ಜನ್ಮದಿನಕ್ಕೆ ಸುಮಲತಾ ಭಾವುಕ ಪೋಸ್ಟ್​
ಸುಮಲತಾ-ಅಂಬರೀಷ್
Follow us
ರಾಜೇಶ್ ದುಗ್ಗುಮನೆ
|

Updated on:May 29, 2023 | 10:16 AM

ಇಂದು (ಮೇ 29) ಅಂಬರೀಷ್ ಅವರ ಜನ್ಮದಿನ (Ambareesh Birthday). ಈ ವಿಶೇಷ ದಿನದಂದು ಕುಟುಂಬದವರು, ಸೆಲೆಬ್ರಿಟಿಗಳು, ಫ್ಯಾನ್ಸ್​ ಅಂಬಿಯನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಅಂಬರೀಷ್ ಅವರಿಗೆ ಜನ್ಮದಿನದ ಶುಭಾಶಯ ಕೋರಲಾಗುತ್ತಿದೆ. ಅಂಬಿ ಹುಟ್ಟುಹಬ್ಬದ ಪ್ರಯುಕ್ತ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡಲಾಗುತ್ತಿದೆ. ಅಂಬರೀಷ್ ಸ್ಮಾರಕ ಉದ್ಘಾಟನೆ ಆಗಿರುವುದರಿಂದ ಈ ವರ್ಷ ಅವರ ಜನ್ಮದಿನ ಮತ್ತಷ್ಟು ವಿಶೇಷ ಎನಿಸಿಕೊಂಡಿದೆ. ಅವರ ಬರ್ತ್​ಡೇ ಪ್ರಯಕ್ತ ಸುಮಲತಾ ಅಂಬರೀಷ್ (Sumalatha Ambareesh) ಅವರು ಭಾವುಕವಾಗಿ ಪೋಸ್ಟ್ ಮಾಡಿದ್ದಾರೆ.

ಸುಮಲತಾ ಅಂಬರೀಷ್ ಹಾಗೂ ಅಂಬರೀಷ್ ಪ್ರೀತಿಸಿ ಮದುವೆ ಆದವರು. ಹಲವು ವರ್ಷಗಳ ಕಾಲ ಇಬ್ಬರೂ ಹಾಯಾಗಿ ಸಂಸಾರ ನಡೆಸಿದರು. ಆದರೆ, ಅನಾರೋಗ್ಯದಿಂದ ಅಂಬರೀಷ್ ಮೃತಪಟ್ಟರು. ಅವರು ಇಲ್ಲ ಎಂಬ ನೋವು ಎಂದಿಗೂ ಮರೆಯಾಗುವಂಥದ್ದಲ್ಲ. ಆದರೆ, ಅವರು ಮಾಡಿರುವ ಪಾತ್ರ ಹಾಕಿಕೊಟ್ಟ ಮಾರ್ಗ ಸದಾ ಜೀವಂತ. ಈ ವಿಶೇಷ ದಿನದಂದು ಅಂಬಿಯನ್ನು ಸುಮಲತಾ ನೆನಪಿಸಿಕೊಂಡಿದ್ದಾರೆ.

‘ನಿಮ್ಮ ಬಾಲ್ಯದ ದಿನಗಳನ್ನು ಆಗಾಗ್ಗೆ ಹೇಳುತ್ತಿದ್ದಿರಿ. ಬಾಲ್ಯದ ಆ ತುಂಟತನ ಅದು ನಿಮ್ಮಲ್ಲಿ ಕೊನೆವರೆಗೂ ಇತ್ತು. ಹಾಗಾಗಿ ನಿಮ್ಮ ಹುಟ್ಟು ಹಬ್ಬ ಅದೊಂದು ಸಡಗರವಾಗಿರುತ್ತಿತ್ತು. ಅದು ನಮಗಷ್ಟೇ ಅಲ್ಲ, ಅಭಿಮಾನಿಗಳ ಪಾಲಿಗೆ ನಿಜವಾದ ಹಬ್ಬ. ಭೌತಿಕವಾಗಿ ನಮ್ಮೊಂದಿಗೆ ನೀವು ಇದ್ದಿದ್ದರೆ, ಇಂದು 71ನೇ ವರ್ಷದ ಹುಟ್ಟು ಹಬ್ಬವನ್ನೂ ಅಭಿಮಾನಿಗಳ ಜೊತೆಯಾಗಿ ಮತ್ತಷ್ಟು ಅದ್ದೂರಿಯಾಗಿ ಆಚರಿಸುತ್ತಿದ್ದೆವು’ ಎಂದು ಪತ್ರ ಆರಂಭಿಸಿದ್ದಾರೆ ಸುಮಲತಾ.

ಇದನ್ನೂ ಓದಿ: ಅಂಬರೀಷ್ ಜನ್ಮದಿನ: ರೆಬೆಲ್​ ಸ್ಟಾರ್​ ಬಗ್ಗೆ ಇಷ್ಟವಾಗುವ ಈ ಐದು ವಿಚಾರಗಳಿವು..

ಮನೆ ಮುಂದೆ ಜನಸಾಗರ, ನಿಮ್ಮ ಆರ್ಭಟ, ಹಾಸ್ಯ ಪ್ರಜ್ಞೆಯ ಮಾತು, ರಾತ್ರಿ ಇಡೀ ಕಾಯುತ್ತಾ ನಿಂತಿದ್ದ ಅಭಿಮಾನಿಗಳ ಘೋಷಣೆ ಇನ್ನೂ ಹಾಗೆಯೇ ಇದೆ. ಇವತ್ತೂ ಅವೆಲ್ಲವೂ ನಿಮಗೆ ಶುಭಾಶಯ ಹೇಳುತ್ತಿವೆ. ಹ್ಯಾಪಿ ಬರ್ತಡೇ ಮೈ ಅಂಬಿ. ಜೊತೆಗಿರದ ಜೀವ ಎಂದೆಂದಿಗೂ ಜೀವಂತ’ ಎಂದು ಸುಮಲತಾ ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:55 am, Mon, 29 May 23

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ